RCB vs CSK ಪ್ಲೇ ಆಫ್​ ಮ್ಯಾಚ್​ ಗೆದ್ದ ತಂಡ ರೆಕಾರ್ಡ್ ಮಾಡೋದು​​ ಗ್ಯಾರಂಟಿ.. ದಾಖಲೆ ಏನು?

author-image
Bheemappa
Updated On
RCB vs CSK ಪ್ಲೇ ಆಫ್​ ಮ್ಯಾಚ್​ ಗೆದ್ದ ತಂಡ ರೆಕಾರ್ಡ್ ಮಾಡೋದು​​ ಗ್ಯಾರಂಟಿ.. ದಾಖಲೆ ಏನು?
Advertisment
  • ಚೆನ್ನೈ vs ಬೆಂಗಳೂರು ಎದುರಾದ್ರೆ ಫ್ಯಾನ್ಸ್​ಗೆ ಭಾರೀ ಕುತೂಹಲ
  • ಇಲ್ಲಿವರೆಗೆ ಚಿನ್ನಸ್ವಾಮಿಯಲ್ಲಿ ಚೆನ್ನೈ ಎಷ್ಟು ಪಂದ್ಯಗಳನ್ನ ಆಡಿದೆ?
  • ಈ ಬಾರಿ ಈ ಟೀಮ್ ಮ್ಯಾಚ್ ಗೆದ್ದರೆ ರೆಕಾರ್ಡ್ ಬ್ರೇಕ್ ಆಗುತ್ತಾ?

IPLನ 68ನೇ ಹಾಗೂ ಕೊನೆ ಪಂದ್ಯ ಆರ್​ಸಿಬಿ ಮತ್ತು ಸಿಎಸ್​ಕೆ ಮಧ್ಯೆ ನಡೆಯುತ್ತಿದ್ದು ಅಭಿಮಾನಿಗಳೆಲ್ಲ ಕುತೂಹಲದಿಂದ ಇದ್ದಾರೆ. ಈ ಪಂದ್ಯ ಯಾವ ಟೀಮ್ ಗೆಲ್ಲೋತ್ತೋ ಅದು ಕೆಕೆಆರ್, ಆರ್​​ಆರ್ ಹಾಗೂ ಹೈದ್ರಾಬಾದ್​ ಜೊತೆ ಪಾಯಿಂಟ್​ ಟೇಬಲ್​ನಲ್ಲಿ ಸ್ಥಾನ ಪಡೆದುಕೊಳ್ಳಲಿದೆ. ಆದರೆ ಬೆಂಗಳೂರು ವಿರುದ್ಧ ಚೆನ್ನೈ ಗೆದ್ದರೇ ದಾಖಲೆ ಆಗುತ್ತದೆ ಎಂದು ಹೇಳಲಾಗುತ್ತದೆ. ಅದು ಏನೆಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: BREAKING: ವಿದ್ಯಾರ್ಥಿಗಳೇ ಗಮನಿಸಿ.. SSLC ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಒಂದು ವೇಳೆ ವರುಣಾರ್ಭಟದಿಂದ ಫ್ಲೇ ಆಪ್​ ಮ್ಯಾಚ್ ವಾಶ್​ಔಟ್ ಆದರೆ ಸಿಎಸ್​ಕೆ ಹಾಗೂ ಆರ್​ಸಿಬಿಗೆ ತಲಾ ಒಂದೊಂದು ಪಾಯಿಂಟ್ ನೀಡಲಾಗುತ್ತದೆ. ಈ ರೀತಿ ಪಾಯಿಂಟ್ ನೀಡಿದರೆ ಚೆನ್ನೈಗೆ ಭಾರೀ ಲಾಭವಾಗಿ ಪ್ಲೇ ಆಫ್​ಗೆ ಹೋಗುತ್ತದೆ. ಏಕೆಂದರೆ ರನ್​ರೇಟ್​ನಲ್ಲಿ ಬೆಂಗಳೂರಿಗಿಂತ ಚೆನ್ನೈ ಉತ್ತಮ ಸ್ಥಾನದಲ್ಲಿದೆ. ಹೀಗಾಗಿ ಮಳೆ ಬರಬಾರದು ಎನ್ನುವುದು ಆರ್​ಸಿಬಿ ಫ್ಯಾನ್ಸ್​ ಪ್ರಾರ್ಥನೆ ಆಗಿದೆ. ಜೊತೆಗೆ ಇಲ್ಲಿ ಎಂ ಚಿನ್ನಸ್ವಾಮಿಯಲ್ಲಿ ರುತುರಾಜ್​ ಗಾಯಕ್ವಾಡ್​ ಪಡೆ ಮ್ಯಾಚ್ ಗೆದ್ದುಕೊಂಡರೆ ಚೆನ್ನೈ ಟೀಮ್ ದಾಖಲೆ ಮಾಡಿದಂತೆ ಆಗುತ್ತದೆ.

ಇದನ್ನೂ ಓದಿ:RCB ಫ್ಯಾನ್ಸ್​​ಗೆ ಗುಡ್​ನ್ಯೂಸ್,​ ಭಯ ಬೇಡ.. ಮಳೆ ಬಂದ್ರು ಚಿನ್ನಸ್ವಾಮಿಯಲ್ಲಿದೆ ಈ ಅತ್ಯುನ್ನತ ತಂತ್ರಜ್ಞಾನ; ಏನದು?

publive-image

ಚೆನ್ನೈ ತಂಡದ ದಾಖಲೆ ಹೇಗೆ ಆಗುತ್ತದೆ ಎಂದರೆ, ಸಿಲಿಕಾನ್​ ಸಿಟಿಯ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇಲ್ಲಿವರೆಗೆ ಆರ್​ಸಿಬಿ- ಚೆನ್ನೈ 10 ಪಂದ್ಯಗಳನ್ನು ಆಡಿವೆ. ಈ 10 ಪಂದ್ಯಗಳಲ್ಲಿ ಆರ್​ಸಿಬಿ 4 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಒಂದು ಪಂದ್ಯ ರದ್ದು ಆಗಿದ್ದರೇ, ಉಳಿದ 5 ಮ್ಯಾಚ್​ಗಳನ್ನು ಚೆನ್ನೈ ಟೀಮ್ ಗೆದ್ದುಕೊಂಡಿದೆ. ಹೀಗಾಗಿ ನಾಳೆ ನಡೆಯುವ ಪ್ಲೇ ಆಫ್ ಮ್ಯಾಚ್​ನಲ್ಲಿ ಚಿನ್ನಸ್ವಾಮಿಯಲ್ಲಿ ಚೆನ್ನೈ ಗೆದ್ರೆ ಒಟ್ಟು ಬೆಂಗಳೂರು ವಿರುದ್ಧ 6 ಪಂದ್ಯಗಳನ್ನು ಗೆದ್ದಂತೆ ಆಗುತ್ತದೆ. ಹೀಗಾಗಿ ಇದು ಚೆನ್ನೈ ತಂಡ ರೆಕಾರ್ಡ್​ ಮಾಡಿದಂತೆ ಆಗುತ್ತದೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment