M.S ಧೋನಿ ಫ್ಯಾನ್ಸ್‌ಗೆ ದೀಪಾವಳಿ ಗಿಫ್ಟ್‌.. CSK ರೀಟೈನ್​ ಲಿಸ್ಟ್‌ನಲ್ಲಿ ಮಹತ್ವದ ಬದಲಾವಣೆ; ಯಾರ್‌ ಯಾರು ಇನ್‌?

author-image
admin
Updated On
ಧೋನಿ ಫ್ಯಾನ್ಸ್​ಗೆ ಶುರುವಾಯ್ತು ಢವಢವ.. ಬಿಸಿಸಿಐ ಕೋರ್ಟ್​ನಲ್ಲಿ ತಲಾ IPL ಭವಿಷ್ಯ
Advertisment
  • M.S ಧೋನಿ ಅಭಿಮಾನಿಗಳಿಗೆ ನಿಜವಾದ ದೀಪಾವಳಿ ಗಿಫ್ಟ್
  • IPLಗೆ ಧೋನಿ ಜೊತೆಗೆ ಐವರು ಆಟಗಾರರ ಹೆಸರು ಘೋಷಣೆ
  • CSK ರೀಟೈನ್​ ಲಿಸ್ಟ್‌ನಲ್ಲಿ 2 ಆಲ್‌ರೌಂಡರ್‌, 2 ಬ್ಯಾಟ್ಸ್‌ಮನ್ ಆಯ್ಕೆ

M.S ಧೋನಿ ಅಭಿಮಾನಿಗಳಿಗೆ ನಿಜವಾದ ದೀಪಾವಳಿ ಗಿಫ್ಟ್ ಸಿಕ್ಕಿದೆ. IPL 2025ಗೆ ಧೋನಿ ಆಡೋದು ಫಿಕ್ಸ್ ಆಗಿದೆ. CSK ರೀಟೈನ್​ ಲಿಸ್ಟ್‌ನಲ್ಲಿ ಧೋನಿ ಜೊತೆಗೆ ಐವರು ಆಟಗಾರರ ಹೆಸರು ಫೈನಲ್‌ ಆಗಿದೆ.


">October 31, 2024

ಚೆನ್ನೈ ಸೂಪರ್ ಕಿಂಗ್ಸ್​

ಋತುರಾಜ್ ಗಾಯಕ್ವಾಡ್ - 18 ಕೋಟಿ - ಬ್ಯಾಟ್ಸ್​ಮನ್
ರವೀಂದ್ರ ಜಡೇಜಾ - 18 ಕೋಟಿ - ಆಲ್​ರೌಂಡರ್​
ಶಿವಂ ದುಬೆ - 12 ಕೋಟಿ - ಆಲ್​ರೌಂಡರ್
ಮತೀಶ ಪತಿರಣ - 13 ಕೋಟಿ - ಬೌಲರ್​
ಮಹೇಂದ್ರ ಸಿಂಗ್ ಧೋನಿ - 4 ಕೋಟಿ - ವಿ.ಕೀ, ಬ್ಯಾಟ್ಸ್​ಮನ್​

IPL 2025 ಮೆಗಾ ಆ್ಯಕ್ಷನ್ ಹಿನ್ನೆಲೆಯಲ್ಲಿ ಇಂದು ರೀಟೈನ್ ಲಿಸ್ಟ್ ಫೈನಲ್ ಮಾಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಇಬ್ಬರು ಆಲ್‌ರೌಂಡರ್‌, ಇಬ್ಬರು ಬ್ಯಾಟ್ಸ್‌ಮನ್‌ ಹಾಗೂ ಓರ್ವ ಬೌಲರ್‌ಗೆ ಮಣೆ ಹಾಕಿದೆ.

ಇದನ್ನೂ ಓದಿ: ಆರ್​​​ಸಿಬಿ ರೀಟೈನ್​ ಲಿಸ್ಟ್​ ಅಧಿಕೃತ ಪ್ರಕಟ; ಕೊಹ್ಲಿ ಜತೆಗೆ ಇಬ್ಬರು ಆಟಗಾರರನ್ನು ಉಳಿಸಿಕೊಂಡ ಬೆಂಗಳೂರು 

ಹೊಸ ರೀಟೈನ್‌ ಲಿಸ್ಟ್‌ನಲ್ಲಿ CSK ಫ್ಯಾನ್ಸ್‌ನ ಆರಾಧ್ಯ ದೈವ ಎಂ.ಎಸ್‌ ಧೋನಿ ಅವರನ್ನೇ ಚೆನ್ನೈ ಫ್ರಾಂಚೈಸಿ ಉಳಿಸಿಕೊಂಡಿದೆ. ಇದರ ಜೊತೆಗೆ ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ ಹಾಗೂ ಶ್ರೀಲಂಕಾ ಬೌಲರ್ ಮತೀಶ ಪತಿರಣ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment