ಚಹಲ್​ಗೆ ಹ್ಯಾಟ್ರಿಕ್​ ವಿಕೆಟ್, ಸ್ಯಾಮ್ ಕರನ್​ ಭರ್ಜರಿ ಅರ್ಧಶತಕ.. ಎದುರಾಳಿಗೆ ಬಿಗ್​ ಟಾರ್ಗೆಟ್​

author-image
Bheemappa
Updated On
ಚಹಲ್​ಗೆ ಹ್ಯಾಟ್ರಿಕ್​ ವಿಕೆಟ್, ಸ್ಯಾಮ್ ಕರನ್​ ಭರ್ಜರಿ ಅರ್ಧಶತಕ.. ಎದುರಾಳಿಗೆ ಬಿಗ್​ ಟಾರ್ಗೆಟ್​
Advertisment
  • ಚಹಲ್ ಯಾರ ಯಾರ ವಿಕೆಟ್​ ಕಬಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ರು?
  • ​ತವರಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಬ್ಯಾಟರ್ಸ್​ಗೆ ಅವಮಾನ
  • ಮತ್ತೆ ಮತ್ತೆ ವಿಫಲ ಬ್ಯಾಟಿಂಗ್ ಮಾಡ್ತಿರುವ ಮಹೇಂದ್ರ ಸಿಂಗ್ ಧೋನಿ

ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಒಳ್ಳೆಯ ಟಾರ್ಗೆಟ್​ ಅನ್ನೇ ಎದುರಾಳಿ ಪಂಜಾಬ್ ಕಿಂಗ್ಸ್​ಗೆ ನೀಡಿದೆ. ​

ಎಂ.ಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್​ ನಾಯಕ ಶ್ರೇಯಸ್ ಅಯ್ಯರ್​ ಫೀಲ್ಡಿಂಗ್ ಆಯ್ಕೆ ಮಾಡಿದರು. ಚೆನ್ನೈ ತಂಡ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕ್ರೀಸ್​ಗೆ ಬ್ಯಾಟಿಂಗ್ ಮಾಡಲು ಬಂದ ಶೈಕ್ ರಶೀದ್ 11 ಹಾಗೂ ಆಯುಷ್ ಮಾತ್ರೆ 7 ರನ್​ಗೆ ಕ್ಯಾಚ್ ಕೊಟ್ಟು ಔಟ್​ ಆದರು.

ಆದರೆ 3ನೇ ಕ್ರಮಾಂಕದಲ್ಲಿ ಮೈದಾನಕ್ಕೆ ಬಂದ ಸ್ಯಾಮ್ ಕರನ್, ಪಂಜಾಬ್​ ಬೌಲರ್​ಗಳ ಎದೆಯಲ್ಲಿ ಭಯ ಹುಟ್ಟಿಸಿದರು. ಏಕೆಂದರೆ ಒಂದು ಕಡೆ ಸತತ ವಿಕೆಟ್​ ಹೋಗುತ್ತಿದ್ದರೂ ಆರ್ಭಟದ ಬ್ಯಾಟಿಂಗ್ ಮುಂದುವರೆಸಿದ್ದ ಕರನ್​ ಚೆನ್ನೈ ಮಾನ ಕಾಪಾಡಿದ ಎಂದು ಹೇಳಬಹುದು. ಏಕೆಂದರೆ ಅಲ್ಪ ಮೊತ್ತಕ್ಕೆ ಆಲೌಟ್ ಆಗುತ್ತಿದ್ದ ತಂಡವನ್ನು ಮೇಲೆತ್ತಿದರು. ಪಂದ್ಯದಲ್ಲಿ 47 ಎಸೆತ ಎದುರಿಸಿದ ಕರನ್ 9 ಬೌಂಡರಿ, 4 ಮನಮೋಹಕ ಸಿಕ್ಸರ್​ಗಳಿಂದ 88 ರನ್​ ಚಚ್ಚಿದರು.

ಇದನ್ನೂ ಓದಿ:ಉಪ್ಪಿ ಅವರ ಫೇಮಸ್ ಹಾಡು ಹೇಳಿ ಖುಷಿ ಪಟ್ಟ ಸಾಲ್ಟ್​.. ಅದ್ಯಾವ ಸಾಂಗ್ ಹೇಳಿ ನೋಡೋಣ..?

publive-image

ಡೆವಾಲ್ಡ್ ಬ್ರೆವಿಸ್ ಬ್ರೆವಿಸ್​ ಕೊಂಚ ಬೌಲರ್​ಗಳನ್ನು ಕಾಡಿದರೂ 32 ರನ್​ ಗಳಿಸಿ ಆಡುವಾಗ ಕ್ಲೀನ್ ಬೋಲ್ಡ್ ಆಗಿ ಹೊರ ನಡೆದರು. ಧೋನಿ 11 ರನ್​ಗೆ ಔಟ್ ಆಗಿ ನಿರಾಶೆ ಮೂಡಿಸಿದರು. ಇದು ತಂಡಕ್ಕೆ ರನ್​ಗಳ ಸಂಕಷ್ಟ ಎದುರಾಯಿತು. ಏಕೆಂದರೆ ಇವರ ನಂತರ ಬಂದ ಯಾವ ಬ್ಯಾಟ್ಸ್​ಮನ್​ ಕೂಡ 11 ರನ್​ಗಳ ಗಡಿ ದಾಟಲಿಲ್ಲ. ಯಜುವೇಂದ್ರ ಚಹಲ್ ಸ್ಪಿನ್​ಗೆ ನಲುಗಿದ ಚೆನ್ನೈ ತಂಡ ಇನ್ನೂ 4 ಬಾಲ್​ಗಳು ಬಾಕಿ ಇರುವಾಗಲೇ ಆಲೌಟ್​ ಆಗಿ 190 ರನ್​ಗಳ ಗುರಿಯನ್ನು ಪಂಜಾಬ್​ಗೆ ನೀಡಿದೆ.

ಇನ್ನು ತಂಡದಲ್ಲಿ ಇನ್ನೊಂದು ವಿಶೇಷ ಎಂದರೆ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು ಹ್ಯಾಟ್ರಿಕ್​ ವಿಕೆಟ್​ ಪಡೆದು ಈ ಸೀಸನ್​ನ ಮೊದಲ ಬೌಲರ್ ಎನ್ನುವ ಖ್ಯಾತಿ ಪಡೆದರು. ದೀಪಕ್ ಹೂಡಾ, ನೂರ್ ಅಹ್ಮದ್ ಕ್ಯಾಚ್​ ಔಟ್ ಆದ್ರೆ ಅನ್ಶುಲ್ ಕಾಂಬೋಜ್ ಕ್ಲೀನ್ ಬೋಲ್ಡ್ ಆಗುವ ಮೂಲಕ ಚಹಲ್ ಹ್ಯಾಟ್ರಿಕ್ ವಿಕೆಟ್​ ಪಡೆದು ಸಂಭ್ರಮಿಸಿದರು. ಇನ್ನು 2022ರಲ್ಲಿ ಚಹಲ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment