ಯಂಗ್ ಪ್ಲೇಯರ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​.. 24 ವರ್ಷದ ಯುವ ಆಟಗಾರನಿಗೆ ಒಲಿದ ಅವಕಾಶ

author-image
Bheemappa
Updated On
ಯಂಗ್ ಪ್ಲೇಯರ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​.. 24 ವರ್ಷದ ಯುವ ಆಟಗಾರನಿಗೆ ಒಲಿದ ಅವಕಾಶ
Advertisment
  • ಮುಂದಿನ ಟೆಸ್ಟ್​ ಪಂದ್ಯ ಟೀಮ್ ಇಂಡಿಯಾ ಗೆಲ್ಲಲೇಬೇಕು!
  • ಭಾರತ ತಂಡದ ಆಟಗಾರರಿಗೆ ಕಾಡುತ್ತಿದೆ ಇಂಜುರಿ ಸಮಸ್ಯೆ
  • ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನ ಸೋತ ಗಿಲ್ ಪಡೆ​

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್​ ನಡುವೆ ಟೆಸ್ಟ್​ ಸರಣಿ ನಡೆಯುತ್ತಿದೆ. ಈಗಾಗಲೇ ಸರಣಿಯಲ್ಲಿ ಆಂಗ್ಲ ಪಡೆ ಮುನ್ನಡೆ ಕಾಯ್ದುಕೊಂಡಿದ್ದರಿಂದ ಭಾರತ ತಂಡ ಮುಂದಿನ ಟೆಸ್ಟ್​ ಪಂದ್ಯ ಗೆದ್ದು ಸಮಬಲ ಕಾಯ್ದುಕೊಳ್ಳಬೇಕಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ವೇಗಿ ಅರ್ಷ್​ದೀಪ್ ಸಿಂಗ್ ಇಂಜುರಿಗೆ ಒಳಗಾಗಿದ್ದು ಯುವ ಬೌಲರ್​ ತಂಡದಲ್ಲಿ ಕಾಣಿಸಿಕೊಳ್ಳಲ್ಲಿಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಈಗಾಗಲೇ ಮೂರು ಟೆಸ್ಟ್​ ಪಂದ್ಯಗಳನ್ನು ಆಡಿದ್ದು 1-2 ರಿಂದ ಹಿನ್ನಡೆಯಲ್ಲಿದೆ. 4ನೇ ಟೆಸ್ಟ್​ ಪಂದ್ಯ ಗೆಲ್ಲಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಮ್ಯಾಂಚೆಸ್ಟರ್‌ನ ನೆಟ್ಸ್ ಸೆಷನ್‌ನಲ್ಲಿ ಅರ್ಷ್‌ದೀಪ್ ಬೌಲಿಂಗ್ ಮಾಡುವಾಗ ಕೈಗೆ ಗಂಭೀರವಾಗಿ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅರ್ಷ್‌ದೀಪ್ ಮುಂದಿನ ಪಂದ್ಯ ಆಡುವುದಿಲ್ಲ ಎನ್ನಲಾಗಿದೆ.

ಇದನ್ನೂ  ಓದಿ: ವಿಕೆಟ್​ ಕೀಪಿಂಗ್ ಮಾಡೋಕೆ ರಿಷಭ್ ಪಂತ್​ ಹರಸಾಹಸ.. KL ರಾಹುಲ್​ಗೆ ಸಿಗುತ್ತಾ ಜವಾಬ್ದಾರಿ?

publive-image

ಈ ಹಿನ್ನೆಲೆಯಲ್ಲಿ ಸಿಎಸ್​ಕೆ ತಂಡದ ಯುವ ಬೌಲರ್​ ಹಾಗೂ ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್ ಟೀಮ್ ಇಂಡಿಯಾದ ಟೆಸ್ಟ್​ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ. ಐಪಿಎಲ್​ನಲ್ಲಿ ಮುಂಬೈ ಹಾಗೂ ಚೆನ್ನೈ ತಂಡದಲ್ಲಿ ಕಾಂಬೋಜ್ ಬೌಲಿಂಗ್ ಮಾಡಿದ್ದಾರೆ. 2025ರ ಐಪಿಎಲ್​ನಲ್ಲಿ ಚೆನ್ನೈ ಪರವಾಗಿ ಬೌಲಿಂಗ್ ಮಾಡಿದ ಕಾಂಬೋಜ್, 8 ಪಂದ್ಯಗಳಿಂದ 172 ರನ್​ ಬಿಟ್ಟುಕೊಟ್ಟಿದ್ದು 8 ವಿಕೆಟ್​ಗಳನ್ನ ಬೇಟೆಯಾಡಿದ್ದಾರೆ. ಸದ್ಯ ಕಾಂಬೋಜ್​ಗೆ 24 ವರ್ಷಗಳು ತುಂಬಿವೆ ಅಷ್ಟೇ.

4ನೇ ಟೆಸ್ಟ್​ ಪಂದ್ಯದಲ್ಲಿ ಜಸ್​ಪ್ರಿತ್ ಬೂಮ್ರಾ ಅವರು ಆಡುತ್ತಾರೋ, ಇಲ್ವೋ ಎನ್ನುವುದು ಇನ್ನು ಕನ್​ಫರ್ಮ್ ಆಗಿಲ್ಲ. ಹೀಗಾಗಿ ಉಳಿದ ಬೌಲರ್​ಗಳ ಜೊತೆ ಕ್ರೂಶಿಯಲ್ ಟೂಮ್​ನಲ್ಲಿ ಅನ್ಶುಲ್ ಕಾಂಬೋಜ್ ಸಾಥ್ ಕೊಡಬಲ್ಲ ಎಂದು ಬಿಸಿಸಿಐ ಆಯ್ಕೆ ಮಾಡಿದೆ. ಭಾರತ-ಎ ಮತ್ತು ಇಂಗ್ಲೆಂಡ್-ಎ ತಂಡಗಳ ನಡುವಿನ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಕಾಂಬೋಜ್ ತಮ್ಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಹೀಗಾಗಿ ಈಗ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment