/newsfirstlive-kannada/media/post_attachments/wp-content/uploads/2024/05/VIRAT_KOHLI_DHONI-2.jpg)
ಒಂದು ಸ್ಲಾಟ್.. ಎರಡು ತಂಡಗಳ ಹಣಾಹಣಿ.. ಇಲ್ಲಿ ಗೆದ್ದೋನೆ ಬಾಸ್.. ಇಲ್ಲಿ ಆರ್ಸಿಬಿ ಬಾಸ್ ಆಗೋ ಕನಸು ಕಾಣ್ತಿದೆ. ಆದ್ರೆ, ಹೊಂಚು ಹಾಕಿ ಕುಳಿತಿರುವ ಆ ಬಾಂಬೆ ಬಾಯ್ಸ್, ಆರ್ಸಿಬಿ ಪಾಲಿಗೆ ವಿಲನ್ ಆಗೋಕೆ ಹೊರಟ್ಟಿದ್ದಾರೆ. ಶತಕ ಗತಾಯ ಆರ್ಸಿಬಿ ಕನಸು ಭಗ್ನಗೊಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅವಱರು?
ಆರ್ಸಿಬಿ, ಚೆನ್ನೈ ಬ್ಯಾಟಲ್ಗೆ ಕ್ಷಣಗಣನೆ ಆರಂಭವಾಗಿದೆ. ಶತಯಾ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಉಭಯ ತಂಡಗಳು, ರನ್ಭೂಮಿಯ ರನ್ ಬ್ಯಾಟಲ್ಗೆ ಧುಮುಕುತ್ತಿವೆ. ಆದ್ರೆ, ಈ ರನ್ ಬ್ಯಾಟಲ್ನಲ್ಲಿ ರಾಯಲ್ ಚಾಲೆಂಜರ್ಸ್ ಪಾಲಿಗೆ ಮುಳ್ಳಾಗಲು ಚೆನ್ನೈ ಸೂಪರ್ ಕಿಂಗ್ಸ್ ರಣತಂತ್ರ ರೂಪಿಸಿದೆ. ಈ ನಿಟ್ಟಿನಲ್ಲೇ ಹೋಮ್ ವರ್ಕ್ ಮುಗಿಸಿರೋ ಚೆನ್ನೈ, ಇಂದು ಚಿನ್ನಸ್ವಾಮಿಯ ಅಖಾಡದಲ್ಲಿ ಆರ್ಸಿಬಿ ಎದುರು ಗೆಲ್ಲೋ ಭರವಸೆಯಲ್ಲಿದೆ. ಇದಕ್ಕೆಲ್ಲ ಕಾರಣ ಬಾಂಬೆ ಬಾಯ್ಸ್.
ಇದನ್ನೂ ಓದಿ:RCB vs CSK ಫ್ಯಾನ್ಸ್ಗೆ ಭಾರೀ ನಿರಾಸೆ.. ಶಾಕಿಂಗ್ ನ್ಯೂಸ್ ಕೊಟ್ಟ ಭಾರತದ ಹವಾಮಾನ ಇಲಾಖೆ
ಇಂದಿನ ಡು ಆರ್ ಡೈ ಮ್ಯಾಚ್ನಲ್ಲಿ ಆರ್ಸಿಬಿ ಪ್ರತೀಕಾರಕ್ಕೆ ತೀರಿಸಿಕೊಳ್ಳುವ ತವಕದಲ್ಲಿದೆ. ಭಾರೀ ಅಂತರದ ಗೆಲುವಿನೊಂದಿಗೆ ಪ್ಲೇ ಆಫ್ಗೆ ಎಂಟ್ರಿ ನೀಡುವ ಕನಸು ಕಾಣ್ತಿದೆ. ಆದ್ರೆ, ಆರ್ಸಿಬಿಯ ಈ ಕನಸಿಗೆ ಕೊಳ್ಳಿ ಇಡಲು ಐವರು ಬಾಂಬೆ ಬಾಯ್ಸ್ ಹೊಂಚು ಹಾಕಿದ್ದಾರೆ.
ನಂಬರ್- 1:
ಋತುರಾಜ್ ರನ್ ಭರಾಟೆ.. ಆರ್ಸಿಬಿಗೆ ತಪ್ಪಿಲ್ಲ ಅಪಾಯ ..!
ಇವತ್ತಿನ ಬಿಗ್ ಮ್ಯಾಚ್ನಲ್ಲಿ ಆರ್ಸಿಬಿಗೆ ಮೊದಲು ಥ್ರೆಟ್ ಆಗೋದೆ ಋತುರಾಜ್ ಗಾಯಕ್ವಾಡ್.. ಪ್ರಸಕ್ತ ಸೀಸನ್ನಲ್ಲಿ ರನ್ ಹೊಳೆ ಅರಿಸುತ್ತಿರುವ ಋತುರಾಜ್, ಪರಿಸ್ಥಿತಿಗೆ ತಕ್ಕಂತೆ ಇನ್ನಿಂಗ್ಸ್ ಬಿಲ್ಡ್ ಮಾಡೋದ್ರಲ್ಲಿ ನಿಸ್ಸೀಮ. ಚಿನ್ನಸ್ವಾಮಿಯಂತ ಬ್ಯಾಟಿಂಗ್ ಟ್ರ್ಯಾಕ್ ಸಿಕ್ಕಿದ್ರೆ, ಬೌಲರ್ಗಳ ಮೇಲೆ ದಂಡೆಯಾತ್ರೆ ನಡೆಸ್ತಾರೆ. ಹೀಗಾಗಿ ಇಂದು ಋತುರಾಜ್ಗೆ ಬ್ರೇಕ್ ಹಾಕಬೇಕಾಗಿದೆ.
ನಂಬರ್- 2:
ಆರ್ಸಿಬಿಯ ಮಾಜಿ ಪ್ಲೇಯರ್ ಶಿವಂ ದುಬೆ ಥ್ರೆಟ್?
ಆರ್ಸಿಬಿ ಪಾಲಿನ 2ನೇ ವಿಲನ್ ಶಿವಂ ದುಬೆ. ಆರ್ಸಿಬಿಯಲ್ಲಿದ್ದಾಗ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡದೆ ಖಳನಾಯಕನಾಗಿದ್ದ ಶಿವಂ ದುಬೆ. ಇಂದು ಆರ್ಸಿಬಿ ಪಾಳಯದಲ್ಲಿ ಆತಂಕ ಸೃಷ್ಟಿಸಿದರು ಅಚ್ಚರಿ ಇಲ್ಲ. ಯಾಕಂದ್ರೆ, ಜಬರ್ದಸ್ತ್ ಫಾರ್ಮ್ನಲ್ಲಿರುವ ಶಿವಂ ದುಬೆ, ಕಳೆದ 4 ಪಂದ್ಯಗಳಿಂದ ರನ್ ಗಳಿಸಲು ಪರದಾಡ್ತಿದ್ದಾರೆ. ಆದ್ರೆ, ಚಿನ್ನಸ್ವಾಮಿ ಪಿಚ್ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ದುಬೆ, ಶಾರ್ಟ್ ಬೌಂಡರಿಯ ಚಿನ್ನಸ್ವಾಮಿಯಲ್ಲಿ ಬಿಗ್ ಮ್ಯಾಚ್ ವಿನ್ನರ್ ಅನ್ನೋದನ್ನ ಮರೆಯುವಂತಿಲ್ಲ.
ನಂಬರ್- 3:
ಸ್ಲಾಗ್ ಆ್ಯಂಡ್ ಡೆತ್ನಲ್ಲಿ ಶಾರ್ದೂಲ್ ಕಂಟಕ
ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಪ್ರಮುಖರ ಅಲಭ್ಯತೆ ಚೆನ್ನೈಗೆ ಕಾಡ್ತಿದೆ ನಿಜ. ಆದ್ರೆ, ಶಾರ್ದೂಲ್ ಠಾಕೂರ್ ಎಂಬ ಮಲ್ಟಿ ಸ್ಪೆಷಾಲಿಟಿ ಪ್ಲೇಯರ್, ಚಿನ್ನಸ್ವಾಮಿಯಲ್ಲಿ ಬಿಗ್ ಮ್ಯಾಚ್ ವಿನ್ನರ್ ಆಗಬಲ್ಲರು. ಸ್ಲೋವರ್ ಬಾಲ್ಗಳ ಮೂಲಕ ಬೌಲಿಂಗ್ನಲ್ಲಿ ಬ್ರೇಕ್ ಥ್ರೂ ನೀಡಬಲ್ಲ ಶಾರ್ದೂಲ್, ಸಂಕಷ್ಟದ ವೇಳೆ ಬ್ಯಾಟಿಂಗ್ನಲ್ಲಿ ಗೇಮ್ ಚೇಜಿಂಗ್ ಪರ್ಫಾಮೆನ್ಸ್ ನೀಡಬಲ್ಲರು ಅನ್ನೋದು ಮರೆಯುವಂತಿಲ್ಲ.
ನಂಬರ್- 4:
ಕ್ಯಾಮಿಯೋ ರೋಲ್ ರಹಾನೆ..!
ಪ್ರಸಕ್ತ ಆವೃತ್ತಿಯಲ್ಲಿ ಮುಂಬೈಕರ್ ರಹಾನೆ, ಬ್ಯಾಟ್ ಝಳಪಿಲ್ಲ ನಿಜ. ಹೀಗಂತ ರಹಾನೆಯನ್ನ ಹಗುರವಾಗಿ ಪರಿಗಣಿಸುವಂತಿಲ್ಲ. ಯಾಕಂದ್ರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ರಹಾನೆ ಎಂಟ್ರಿ ನೀಡಿದ್ರೂ, ಬಿಗ್ ಇಂಪ್ಯಾಕ್ಟ್ ಮಾಡಬಲ್ಲರು. ಇದಿಷ್ಟೇ ಅಲ್ಲ, ಫೀಲ್ಡರ್ ಆಗಿ ಕಷ್ಟಕರ ಕ್ಯಾಚ್ ಜೊತೆಗೆ ಬೌಂಡರಿಗಳನ್ನ ತಡೆಯುವ ರಹಾನೆ, ಎದುರಾಳಿ ತಂಡದ ಮೇಲೆ ಪರೋಕ್ಷ ಒತ್ತಡ ಹೇರಬಲ್ಲರು.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್.. ಸಿಎಸ್ಕೆ ವಿರುದ್ಧ ಪಂದ್ಯ ನಡೆಯುವ ಮೊದಲೇ ವಿಘ್ನ.. ವಿಘ್ನ..!
ನಂಬರ್- 5:
ಪವರ್ ಪ್ಲೇನಲ್ಲಿ ತುಷಾರ ದೇಶಪಾಂಡೆ ಥ್ರೆಟ್..!
ತುಷಾರ ದೇಶಪಾಂಡೆ.. ಚೆನ್ನೈ ತಂಡದ ಬೌಲಿಂಗ್ ಶಕ್ತಿ. ಪ್ರಸಕ್ತ ಸೀಸನ್ನಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿರುವ ದೇಶಪಾಂಡೆ, 12 ಪಂದ್ಯಗಳಿಂದ 16 ವಿಕೆಟ್ ಉರುಳಿದ್ದಾರೆ. ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ಹಾಕೋ ತುಷಾರ, ಡೆತ್ ಓವರ್ಗಳಲ್ಲೂ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಚೆನ್ನೈ ತಂಡದ ಲೀಡಿಂಗ್ ವಿಕೆಟ್ ಟೇಕರ್ ಆಗಿರೋ ತುಷಾರ, ಆರ್ಸಿಬಿ ದಿಕ್ಕು ತಪ್ಪಿಸಬೇಕಿದೆ. ಇಲ್ಲ ಗೆಲುವು ಕಬ್ಬಿಣದ ಕಡಲೇಯೇ ಆಗಿದೆ. ಮಹಾರಾಷ್ಟ್ರ ಮೂಲದ ಈ ಐವರೇ, ಸದ್ಯ ಚೆನ್ನೈ ತಂಡದ ಶಕ್ತಿಯಾಗಿದ್ದಾರೆ. ಇವ್ರನ್ನ ಆರ್ಸಿಬಿ ಟ್ಯಾಕಲ್ ಮಾಡಿದ್ರೆ, ಇಂದು ಗೆಲುವಿನ ದಡ ಸೇರೋದ್ರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ