/newsfirstlive-kannada/media/post_attachments/wp-content/uploads/2025/05/CSK_GT.jpg)
2025ರ ಐಪಿಎಲ್ನ ಕೊನೆಯ ಪಂದ್ಯ ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ರನ್ಗಳನ್ನು ಕಲೆ ಹಾಕಿದೆ. ಡಿವೋನ್ ಕಾನ್ವೆ ಹಾಗೂ ಡೆವಾಲ್ಡ್ ಬ್ರೆವಿಸ್ ಅವರ ಭರ್ಜರಿ ಅರ್ಧಶತಕದಿಂದ ಗುಜರಾತ್ಗೆ 231 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಚೆನ್ನೈ ತಂಡ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಆಯುಷ್ ಹಾಗೂ ಡಿವೋನ್ ಕಾನ್ವೆ ಅದ್ಭುತ ಓಪನಿಂಗ್ ಪಡೆದರು. ಆಯುಷ್ 3 ಫೋರ್ ಹಾಗೂ 3 ಸಿಕ್ಸರ್ ಸಮೇತ ಕೇವಲ 17 ಬಾಲ್ಗಳಲ್ಲಿ 34 ರನ್ ಬಾರಿಸಿದರು. ಇವರ ನಂತದ ಕ್ರೀಸ್ಗೆ ಬಂದ ಉರ್ವಿಲ್ ಪಟೇಲ್ ಮನ ಮೋಹಕ ಬ್ಯಾಟಿಂಗ್ ಮಾಡಿದರು.
ಇದನ್ನೂ ಓದಿ:ಬದ್ಧವೈರಿ ಆದರೂ ಚೆನ್ನೈ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ RCB.. ಯಾಕೆ ಗೊತ್ತಾ?
ಇನ್ನೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಕಾನ್ವೆ, ಕೇವಲ 35 ಬಾಲ್ಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳಿಂದ 52 ರನ್ ಚಚ್ಚಿ ಔಟ್ ಆದರು. ಉರ್ವಿಲ್ ಪಟೇಲ್, ಕೇವಲ 19 ಎಸೆತದಲ್ಲಿ 4 ಫೋರ್, 2 ಸಿಕ್ಸರ್ನಿಂದ 37 ಬಾರಿಸಿದರು. ಜೂನಿಯರ್ ಎಬಿಡಿ ಎಂದೇ ಖ್ಯಾತಿ ಆಗಿರುವ ಡೆವಾಲ್ಡ್ ಬ್ರೆವಿಸ್ ಅವರು, ಗುಜರಾತ್ ಬೌಲರ್ಗಳನ್ನ ಮನ ಬಂದಂತೆ ಚಚ್ಚಿದರು.
ಡೆವಾಲ್ಡ್ ಬ್ರೆವಿಸ್ ಆಡಿದ್ದು ಕೇವಲ 23 ಎಸೆತಗಳು ಆದರೂ 4 ಬೌಂಡರಿ ಹಾಗೂ 5 ಸಿಕ್ಸರ್ಗಳಿಂದ ಸಿಡಿಲಬ್ಬರದ 57 ರನ್ ಬಾರಿಸಿದರು. ಆಲ್ರೌಂಡರ್ ರವೀಂದ್ರ ಜಡೇಜಾ (21) ಕೂಡ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಇದರಿಂದ ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 231 ರನ್ಗಳ ಬೃಹತ್ ಗುರಿ ನೀಡಿದೆ. ಗುಜರಾತ್ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಪಡೆದು ಸಂಭ್ರಮಿಸಿದರು. ಉಳಿದವರು ಒಂದೊಂದು ವಿಕೆಟ್ ಉರುಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ