CSK ತಂಡದಲ್ಲಿ ಬಿಗ್ ಚೆಂಜ್; ಇಂದು ಚೆನ್ನೈ ಸೂಪರ್​​ ಕಿಂಗ್ಸ್​ಗೆ ಧೋನಿ ಕ್ಯಾಪ್ಟನ್..!

author-image
Ganesh
Updated On
ಸೋಲಿನ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ CSK.. ಧೋನಿ ಪ್ಲಾನ್ ಮಾತ್ರ ಭಲೇ ಇದೆ..!
Advertisment
  • ಡೆಲ್ಲಿ ಕ್ಯಾಪಿಟಲ್ಸ್​​-ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿ
  • ಹೋಮ್​ಗ್ರೌಂಡ್​ನಲ್ಲಿ ಕಮ್​​ಬ್ಯಾಕ್​ ಮಾಡಲು CSK ಸಜ್ಜು
  • ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್

IPL ಸೀಸನ್​ 18ರ ಇಂದಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ - ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಚೆನ್ನೈನ ಚೆಪಾಕ್​ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಸತತ 2 ಸೋಲು ಕಂಡಿರುವ ಚೆನ್ನೈ ತಂಡ ಹೋಮ್​ಗ್ರೌಂಡ್​ನಲ್ಲಿ ಕಮ್​​ಬ್ಯಾಕ್​ ಮಾಡಲು ಸಜ್ಜಾಗಿದೆ. ಆಡಿದ ಎರಡೂ ಪಂದ್ಯಗಳನ್ನ ಗೆದ್ದಿರುವ ಡೆಲ್ಲಿ ತಂಡ ಗೆಲುವಿನ ಓಟ ಮುಂದುವರೆಸೋ ತವಕದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಇಂದಿನ ಪಂದ್ಯದಲ್ಲಿ ಎಮ್​.ಎಸ್​​ ಧೋನಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮುನ್ನಡೆಸೋ ಸಾಧ್ಯತೆಯಿದೆ. ಖಾಯಂ ನಾಯಕ ಋತುರಾಜ್​ ಗಾಯಕ್ವಾಡ್​ ಅಭ್ಯಾಸದ ವೇಳೆ ಇಂಜುರಿಗೆ ತುತ್ತಾಗಿದ್ದಾರೆ. ಇಂದಿನ ಪಂದ್ಯದ ವೇಳೆಗೆ ಋತುರಾಜ್​ ಗಾಯಕ್ವಾಡ್​ ಫಿಟ್​ ಆಗದಿದ್ರೆ, ಧೋನಿ ತಂಡದ ಸಾರಥ್ಯ ವಹಿಸೋ ಸಾಧ್ಯತೆ ದಟ್ಟವಾಗಿದೆ.

ಬ್ಯಾಟಿಂಗ್ ಕೋಚ್ ಹೇಳಿದ್ದೇನು..?

ಗಾಯಕ್ವಾಡ್ ಗಾಯದ ಬಗ್ಗೆ ಮಾಹಿತಿ ನೀಡಿರುವ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಗಾಯಕ್ವಾಡ್ ಅವರು, ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ. ಅವರು ಮುಂಬೈ ವಿರುದ್ಧ ಪಂದ್ಯ ಆಡುತ್ತಾರೋ ಇಲ್ಲವೋ ಅನ್ನೋದು ಇನ್ನೂ ನಿರ್ಧಾರ ಆಗಿಲ್ಲ. ನೆಟ್ಸ್​ನಲ್ಲಿ ಅವರ ಕಾರ್ಯಕ್ಷಮತೆ ಆಧರಿಸಿ ಮುಂದಿನ ನಿರ್ಧಾರ ಮಾಡುತ್ತೇವೆ.

ತಿಲಕ್ ವರ್ಮಾ ಬದಲಿಗೆ ಯಾರನ್ನು ಕ್ಯಾಪ್ಟನ್ ಆಗಿ ಮಾಡಬೇಕು ಅನ್ನೋದ್ರ ಬಗ್ಗೆ ಜಾಸ್ತಿ ಯೋಚನೆ ಮಾಡಲ್ಲ. ಹಾಗಂತೆ ಬೇರೆ ಯಾವ ಆಟಗಾರನ ಕ್ಯಾಪ್ಟನ್ ಆಗಿ ಮಾಡಬೇಕು ಅಂತಾ ಇನ್ನೂ ನಿರ್ಧಾರ ಮಾಡಿಲ್ಲ. ವಿಕೆಟ್ ಹಿಂದಿರುವ ಯುವಕನೇ ಕ್ಯಾಪ್ಟನ್ ಆಗಬಹುದು ಅಂತಾ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಹಸ್ಸಿ ಹೇಳಿಕೆ ಬೆನ್ನಲ್ಲೇ ಇಂದಿನ ಪಂದ್ಯಕ್ಕೆ ಧೋನಿ ಕ್ಯಾಪ್ಟನ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತಿಲಕ್ ವರ್ಮಾ ರಿಟೈರ್ಡ್ ಔಟ್ ಆಗಿದ್ಕೆ ಸೂರ್ಯ ಶಾಕ್.. ಕೋಚ್ ಜೊತೆ ಆಕ್ರೋಶ VIDEO

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment