newsfirstkannada.com

ಬೆಂಗಳೂರು vs ಚೆನ್ನೈ ಕದನ ಅಲ್ಲವೇ ಅಲ್ಲ.. ಇದು ವಿರಾಟ್ ಕೊಹ್ಲಿ- ಧೋನಿ ನಡುವಿನ IPL ಬಿಗ್ ಬ್ಯಾಟಲ್​!

Share :

Published May 14, 2024 at 11:01am

    ಬೆಂಗಳೂರು vs ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಹೈವೋಲ್ಟೇಜ್​ ಕದನ

    ಧೋನಿ-ಕೊಹ್ಲಿ ಮುಖಾಮುಖಿ ಫೈಟ್​ ನೋಡಕ್ಕೆ ಕಾಯುತ್ತಿದೆ ಕ್ರಿಕೆಟ್​ ಲೋಕ

    ಕೊನೆ ಪಂದ್ಯ, ಯಾರು ಯಾಮಾರಾರ್ತಾರೋ ಅವ್ರು ಟೂರ್ನಿಯಿಂದ ಔಟ್

18ರಂದು ನಡೆಯೋ ಪಂದ್ಯ, ಚೆನ್ನೈ VS ಬೆಂಗಳೂರು ದಂಗಲ್​ ಅಲ್ವೇ ಅಲ್ಲ. ಇದು ಕೊಹ್ಲಿ VS ಧೋನಿ ನಡುವಿನ ಫೈಟ್​ ಆಗಿ ಮಾರ್ಪಟ್ಟಿದೆ. ಇವರಿಬ್ಬರ ಮುಖಾಮುಖಿಯನ್ನ ನೋಡಲು ಕ್ರಿಕೆಟ್​ ಲೋಕವೇ ಕಾದು ಕುಳಿತಿದೆ. ಈ ಇಬ್ಬರ ಮುಖಾಮುಖಿಯ ಮೇಲೆ ಅಷ್ಟು ನಿರೀಕ್ಷೆ ಯಾಕೆ?.

ಐಪಿಎಲ್ ಮಹಾ ಟೂರ್ನಿಯ ಮೆಗಾ ಬ್ಯಾಟಲ್​ಗೆ ವೇದಿಕೆ ಸಜ್ಜಾಗಿದೆ. ಮೇ 18ರಂದು ನಡೆಯೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು VS ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಹೈವೋಲ್ಟೆಜ್​ ಕದನದ ಮೇಲೆ ಕ್ರಿಕೆಟ್​ ಲೋಕ ಹದ್ದಿನ ಕಣ್ಣಿಟ್ಟಿದೆ. ಎರಡೂ ತಂಡಗಳಿಗೆ ಇದು ಲೀಗ್​ ಹಂತದ ಕೊನೆಯ ಪಂದ್ಯವೇ.. ಆದ್ರೆ, ಪ್ಲೇ ಆಫ್​​ ಲೆಕ್ಕಾಚಾರದಲ್ಲಿ ಇದು ಎಲಿಮಿನೇಟರ್​ ಸ್ವರೂಪ ಪಡೆದುಕೊಂಡಿದೆ. ಯಾರು ಯಾಮಾರ್ತಾರೋ ಅವ್ರು ಔಟ್​ ಅಷ್ಟೇ.

ಮೆಗಾ ಬ್ಯಾಟಲ್​ನಲ್ಲಿ ದಿಗ್ಗಜರ ಮುಖಾಮುಖಿ.!

ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಪಂದ್ಯದ ಸೆಂಟರ್​ ಆಫ್​ ಅಟ್ರಾಕ್ಷನ್​ ಈ ಇಬ್ಬರೇ. ಎರಡೂ ತಂಡಗಳ ಪೈಕಿ ಕಣಕ್ಕಿಳಿಯೋದು 22 ಮಂದಿ ಆಟಗಾರರಾದ್ರೂ, ಎಲ್ಲರ ದೃಷ್ಟಿ ನೆಟ್ಟಿರೋದು ಕಿಂಗ್​ ಕೊಹ್ಲಿ ಹಾಗೂ ಲೆಜೆಂಡ್​ ಧೋನಿ ಮೇಲೆ. ರಣಕಣದಲ್ಲಿ ಈ ಇಬ್ಬರು ರಣಕಲಿಗಳ ಜಿದ್ದಾಜಿದ್ದಿನ ಹೋರಾಟವನ್ನ ನೋಡಲು ಇಡೀ ಕ್ರಿಕೆಟ್ ಲೋಕ ಕಾದು ಕುಳಿತಿದೆ.

ಇದನ್ನೂ ಓದಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

ಈ ಸೀಸನ್​ನ ಆರಂಭಿಕ ಪಂದ್ಯಗಳಲ್ಲಿ ಸೈಲೆಂಟಾಗಿದ್ದ ವಿರಾಟ್​ ಕೊಹ್ಲಿ ಇದೀಗ ಅಸಲಿ ಅವತಾರ ಎತ್ತಿದ್ದಾರೆ. ಡೆಲ್ಲಿ ಎದುರಿನ ಪಂದ್ಯದಲ್ಲಂತೂ ಕೊಹ್ಲಿ ಫುಲ್​​ ಅಗ್ರೆಸ್ಸಿವ್​ ಮೂಡ್​ನಲ್ಲಿದ್ರು. ಈ ಅಗ್ರೆಸ್ಸಿವ್​ ಅವತಾರವೇ ಕೊಹ್ಲಿಯ ಸ್ಟ್ರೆಂಥ್​​. ಇನ್​ಫ್ಯಾಕ್ಟ್,​ ಇದು ಇಡೀ ತಂಡದ ಎನರ್ಜಿಯನ್ನ ಬೂಸ್ಟ್​ ಮಾಡುತ್ತೆ ಕೂಡ. ಹೋಮ್​​ಗ್ರೌಂಡ್​​ ಚಿನ್ನಸ್ವಾಮಿಯಲ್ಲಿ ಬೇರೆ ಆಡ್ತಿರೋದ್ರಿಂದ ಕೊಹ್ಲಿಯ ಆರ್ಭಟವೇ ಚೆನ್ನೈಗಿರೋ ಮೊದಲ ಥ್ರೆಟ್​.

ಸೈಲೆಂಟಾಗೇ ಶಾಕ್​ ಕೊಡ್ತಾರಾ ಕೂಲ್​ ಧೋನಿ.?

ಡು ಆರ್​ ಡೈ ಬ್ಯಾಟಲ್​​ ಅಂದ ಮೇಲೆ ಅಲ್ಲಿ ಪ್ರೆಶರ್​ ಇರೋದು ಕಾಮನ್​. ಆದ್ರೆ, ಧೋನಿ ವಿಚಾರದಲ್ಲಿ ಇದು ತದ್ವಿರುದ್ಧ. ಪಂದ್ಯದ ಸಿಚ್ಯುವೇಶನ್​ ಏನೇ ಇರಲಿ. ಎಷ್ಟೇ ಒತ್ತಡ ಇರಲಿ.. ಧೋನಿ ಕೂಲ್​ & ಕಾಮ್​ ಆಗೇ ಇರ್ತಾರೆ. ವಿಕೆಟ್​ ಹಿಂದೆ ನಿಂತು ಸೈಲೆಂಟಾಗೆ ರಣತಂತ್ರ ರೂಪಿಸೋ ಮಾಹಿ, ಎದುರಾಳಿಗೆ ಶಾಕ್​ ಕೊಡೋದ್ರಲ್ಲಿ ಎತ್ತಿದ ಕೈ. ಡೆತ್​ ಓವರ್​​ಗಳಲ್ಲಿ ಬ್ಯಾಟಿಂಗ್​ಗಿಳಿದ್ರೆ, ಅಬ್ಬರಿಸಿ ಬಿಡ್ತಾರೆ. ಮಿಸ್ಟರ್​ ಕೂಲ್​​ ಇದ್ದಷ್ಟು ಹೊತ್ತು, ಆರ್​​ಸಿಬಿಗೆ ಕಂಟಕ ತಪ್ಪಿದ್ದಲ್ಲ.

ಡು ಆರ್​​ ಡೈ ಕದನ, ಯಾರು ರಿಯಲ್​ ಚಾಣಾಕ್ಷ.?

ಧೋನಿ VS ಕೊಹ್ಲಿ.. ಈ ಇಬ್ಬರಲ್ಲಿ ಯಾರು ಬೆಸ್ಟ್​ ಎಂಬ ಪ್ರಶ್ನೆ ಬಹುಕಾಲದ್ದು. ಆದ್ರೆ, ಈ ಪ್ರಶ್ನೆಗೆ ಪಕ್ಕಾ ಉತ್ತರ ಇನ್ನೂ ಸಿಕ್ಕಿಲ್ಲ. ಪರ್ಫೆಕ್ಟ್​ ಉತ್ತರ ಸಿಗೋದೂ ಇಲ್ಲ ಬಿಡಿ. ಆದ್ರೂ, ಈ ಚರ್ಚೆ ಆಗಾಗ ನಡೀತಾಲೆ ಇರುತ್ತೆ. ಇದೀಗ ಬೆಂಗಳೂರು – ಚೆನ್ನೈ ನಡುವೆ ಡು ಆರ್​ ಡೈ ಕದನ ಫಿಕ್ಸ್​ ಆಗ್ತಿದ್ದಂತೆ ಮತ್ತೆ ಇದೇ ಚರ್ಚೆ ನಡೀತಿದೆ. ನೆಚ್ಚಿನ ಆಟಗಾರನ ಪರ ಫ್ಯಾನ್ಸ್​ ಬ್ಯಾಟ್​ ಬೀಸ್ತಿದ್ದಾರೆ.

ಕೊಹ್ಲಿ ಆರ್​​ಸಿಬಿ ಕ್ಯಾಪ್ಟನ್​​ ಅಲ್ಲ.. ಧೋನಿ ಚೆನ್ನೈನ ಸಾರಥಿಯಲ್ಲ. ಹಾಗಿದ್ರೂ, ಶನಿವಾರದ ಮಾಡು ಇಲ್ಲವೇ ಮಡಿ ಕದನದಲ್ಲಿ ಇವರಿಬ್ಬರೇ ಡಿಸೈಡರ್ಸ್​​. ಎರಡೂ ತಂಡಗಳ ಪಾಲಿಗೆ ಇವ್ರ ಆಟವೇ ನಿರ್ಣಾಯಕವಾಗಿದೆ. ಇವರಿಬ್ಬರ ಗೇಮ್​ಪ್ಲಾನ್​, ಸ್ಟ್ರಾಟಜಿ ಮೇಲೆ ಇಡೀ ಪಂದ್ಯ ನಿಂತಿದೆ. ಮೇ 18ರಂದು ನಡೆಯೋ ಮಹಾಕಾಳಗದಲ್ಲಿ ರಿಯಲ್ ಚಾಣಾಕ್ಷ ಯಾರು ಅಂತಾ ನಿರ್ಧಾರವಾಗಲಿದೆ ಅನ್ನೋದು ಫ್ಯಾನ್ಸ್​ ನಡುವಿನ ಚರ್ಚೆಯಾಗಿದೆ.

ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ವರುಣಾರ್ಭಟ.. ಭಾರೀ ಮಳೆಗೆ ವಿಶ್ವಮಾನವ ಟ್ರೈನ್ ಮೇಲೆ ಬಿದ್ದ ಮರ

ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಮೆಗಾ ಬ್ಯಾಟಲ್​ ಇಬ್ಬರು ದಿಗ್ಗಜರ ಪಾಲಿಗೆ ಪ್ರತಿಷ್ಟೆಯ ಪಂದ್ಯ. ಹೀಗಾಗಿ ಈ ಮ್ಯಾಚ್​ನಲ್ಲಿ ಯಾರು ಯಾರನ್ನ ಸೋಲಿಸ್ತಾರೆ?. ಯಾವ ತಂಡ ಪ್ಲೇ ಆಫ್​ ಎಂಟ್ರಿ ಕೊಡುತ್ತೆ?. ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು vs ಚೆನ್ನೈ ಕದನ ಅಲ್ಲವೇ ಅಲ್ಲ.. ಇದು ವಿರಾಟ್ ಕೊಹ್ಲಿ- ಧೋನಿ ನಡುವಿನ IPL ಬಿಗ್ ಬ್ಯಾಟಲ್​!

https://newsfirstlive.com/wp-content/uploads/2024/05/DHONI-4.jpg

Load More