/newsfirstlive-kannada/media/post_attachments/wp-content/uploads/2025/03/DHONI.jpg)
ಆರ್​ಸಿಬಿ ವಿರುದ್ಧ ಸಿಎಸ್​ಕೆ 50 ರನ್​ಗಳ ಹೀನಾಯ ಸೋಲನ್ನು ಕಂಡಿದೆ. ಗೆಲುವಿನ ದೊಡ್ಡ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಅಭಿಮಾನಿಗಳಿಗೆ ಭಾರೀ ಬೇಸರ ಆಗಿದೆ. ಸೋಲಿನ ನೋವಿನಲ್ಲೂ ಧೋನಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ತಲಾ ಅದೇ ಗತ್ತು..
ಸಿಎಸ್​​ಕೆ ಸೋತರೂ, ಧೋನಿ ಅಭಿಮಾನಿಗಳು ನಿರಾಸೆಗೊಂಡಿಲ್ಲ. ಚೆಪಾಕ್ ಮೈದಾನದಲ್ಲಿ ಧೋನಿ ಆಟವನ್ನು ಕಣ್ತುಂಬಿಕೊಂಡಿದ್ದಾರೆ. 9ನೇ ಬ್ಯಾಟಿಂಗ್ ಆರ್ಡರ್​​ನಲ್ಲಿ ಕಣಕ್ಕೆ ಇಳಿದಿದ್ದ ಧೋನಿ 16 ಬಾಲ್​ನಲ್ಲಿ 187.50 ಸ್ಟ್ರೈಕ್​ ರೇಟ್​ನೊಂದಿಗೆ 30 ರನ್​ ಚಚ್ಚಿದರು. ಅದರಲ್ಲಿ ಮೂರು ಬೌಂಡರಿ, ಎರಡು ಸಿಕ್ಸರ್​ಗಳು ಸೇರಿವೆ. ಧೋನಿಯ ಘರ್ಜನೆ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಕಳೆದ ಪಂದ್ಯದಲ್ಲಿ ಸಿಎಸ್​ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತ್ತು. ಈ ವೇಳೆ ಬ್ಯಾಟಿಂಗ್​ಗೆ ಬಂದಿದ್ದ ಧೋನಿಗೆ ಯಾವುದೇ ರನ್ ಬಾರಿಸಲು ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದರು. ಅಲ್ಲದೇ, ಧೋನಿಗೆ ಸ್ಟ್ರೈಕ್ ನೀಡದೇ ತಂಡ ಗೆಲ್ಲಿಸಿದ್ದ ರಚಿನ್ ರವೀಂದ್ರ ವಿರುದ್ಧ ಧೋನಿ ಅಭಿಮಾನಿಗಳು ಬೇಸರಗೊಂಡಿದ್ದರು.
ಇದನ್ನೂ ಓದಿ: ಅದೊಂದು ತಪ್ಪಿನಿಂದ ಗೆಲುವಿಗೆ ದಕ್ಕೆ ಬಂತು; ಸೋತ ಬೆನ್ನಲ್ಲೇ ಗಾಯಕ್ವಾಡ್ ಆಕ್ರೋಶ
I don’t get one thing: when MS Dhoni can score runs and hit boundaries, why can't he move a bit higher up in the batting order? He can still bat better than many above him.
pic.twitter.com/goJPQ8akwK— Vipin Tiwari (@Vipintiwari952) March 28, 2025
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us