/newsfirstlive-kannada/media/post_attachments/wp-content/uploads/2025/03/ruturaj-gaikwad.jpg)
ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್​ನ (CSK) ನಾಯಕ ಋತುರಾಜ್ ಗಾಯಕ್ವಾಡ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಫೀಲ್ಡಿಂಗ್​ನಲ್ಲಿ ಆಗಿರುವ ತಪ್ಪುಗಳಿಂದಾಗಿ ಗೆಲುವಿಗೆ ದಕ್ಕೆ ಆಗಿದೆ. ನಿರ್ಣಾಯಕ ಕ್ಯಾಚ್‌ಗಳನ್ನು ಬಿಟ್ಟಿರುವುದು, ಹೆಚ್ಚುವರಿಯಾಗಿ 20 ರನ್‌ಗಳನ್ನು ನೀಡಿರೋದೇ ಸೋಲಿಗೆ ಕಾರಣ ಎಂದರು.
ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್​ಕೆ, ಆರ್​ಸಿಬಿ ವಿರುದ್ಧ 50 ರನ್​ಗಳ ಅಂತರದಲ್ಲಿ ಸೋಲು ಕಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಗಾಯಕ್ವಾಡ್​, ಫೀಲ್ಡಿಂಗ್‌ನಲ್ಲಿ ತಪ್ಪುಗಳನ್ನ ಮಾಡಿದ ಪರಿಣಾಮ ಬೆಲೆ ತೆತ್ತಿದ್ದೇವೆ. ಈ ಪಿಚ್‌ನಲ್ಲಿ 170 ರನ್‌ಗಳ ಟಾರ್ಗೆಟ್​ ಬೆನ್ನಟ್ಟುವುದೇ ಕಷ್ಟದ ಕೆಲಸ. ನಾವು 20+ ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟೆವು. ನಮ್ಮ ತಂಡವು ಫೀಲ್ಡಿಂಗ್‌ನಲ್ಲಿ ಅನೇಕ ತಪ್ಪುಗಳನ್ನು ಮಾಡಿದೆ. ವಿಶೇಷವಾಗಿ ಕ್ಯಾಚ್‌ಗಳನ್ನು ಬಿಟ್ಟಿರೋದು ಎಂದಿದ್ದಾರೆ.
ಇದನ್ನೂ ಓದಿ: CSK ಕೋಟೆ ಛಿದ್ರ; ಆರ್​ಸಿಬಿ ಪರಾಕ್ರಮದ ಮುಂದೆ ಚೆನ್ನೈ ಬ್ಯಾಟರ್ಸ್​ ವಿಲ ವಿಲ.. ಹೀನಾಯ ಸೋಲು
ಸಿಎಸ್‌ಕೆ ಫೀಲ್ಡರ್‌ಗಳು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಇದರಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕ್ಯಾಚ್ ಕೈಬಿಟ್ಟರು. ಪರಿಣಾಮ ಪಾಟೀದಾರ್ ಅರ್ಧಶತಕ ಬಾರಿಸಿದರು. ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತ್ತು. ಫಿಲ್ ಸಾಲ್ಟ್ (32), ವಿರಾಟ್ ಕೊಹ್ಲಿ (31), ಮತ್ತು ರಜತ್ ಪಾಟಿದಾರ್ (51) ರನ್​ಗಳ ಕಾಣಿಕೆ ನೀಡಿದರು. ಟೀಮ್ ಡೇವಿಡ್ 22 ರನ್​ಗಳಿಸಿ ನಾಟೌಟ್ ಆಗಿ ಉಳಿದರು. ಈ ಗುರಿ ಬೆನ್ನು ಹತ್ತಿದ್ದ ಸಿಎಸ್​ಕೆ 8 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿ ಸೋಲಿಗೆ ಶರಣಾಯ್ತು.
ಇದನ್ನೂ ಓದಿ: 6,6,6,4,4,4,4; ಚೆನ್ನೈ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ ಕ್ಯಾಪ್ಟನ್​ ರಜತ್
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us