/newsfirstlive-kannada/media/post_attachments/wp-content/uploads/2024/05/RCB-CSK-1.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಹೈವೋಲ್ಟೇಜ್ ಪಂದ್ಯಕ್ಕೆ, ಕೆಲವೇ ಕೆಲವು ಕ್ಷಣಗಳು ಮಾತ್ರ ಬಾಕಿ ಉಳಿದಿದೆ. ಐಪಿಎಲ್ನ ಬದ್ಧವೈರಿಗಳ ಫೈಟ್ ನೋಡೋಕೆ, ಕ್ರಿಕೆಟ್ ಜಗತ್ತು ಕಾಯ್ತಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ನಡೆಯಲಿರುವ ಸೌತ್ ಇಂಡಿಯನ್ ಡರ್ಬಿಯಲ್ಲಿ, ಇಂದು ಯಾರಿಗೆ ಶುಭ ಶುಕ್ರವಾರ ಆಗಲಿದೆ?.
ಕೊಲ್ಕತ್ತಾ ನೈಟ್ರೈಡರ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ಇದೀಗ ಮತ್ತೊಂದು ಸವಾಲ್ ಎದುರಾಗಿದೆ. ಇವತ್ತು ಆರ್ಸಿಬಿ ಎದುರಾಳಿ, ಬದ್ಧವೈರಿ ಚೆನ್ನೈ ಸೂಪರ್ಕಿಂಗ್ಸ್. ಇಂದು ಸಿಎಸ್ಕೆ ತಂಡವನ್ನ ಅವರದ್ದೇ ನೆಲದಲ್ಲಿ ಸೋಲಿಸೋದು, ಬೆಂಗಳೂರು ಬಾಯ್ಸ್ ಮುಂದಿರೋ ಬಿಗ್ಗೆಸ್ಟ್ ಟಾಸ್ಕ್.
ಕೊಹ್ಲಿ-ಸಾಲ್ಟ್ 'ಪವರ್ಫುಲ್' ಸ್ಟಾರ್ಟ್ ನೀಡಬೇಕು..!
ಕೆಕೆಆರ್ ವಿರುದ್ಧ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್, ಸ್ಫೋಟಕ ಆರಂಭ ನೀಡಿದ್ದರು. ಇವತ್ತು ಸಿಎಸ್ಕೆ ವಿರುದ್ಧವೂ, ಕೊಹ್ಲಿ ಮತ್ತು ಸಾಲ್ಟ್ರಿಂದ ಅದೇ ಪವರ್ಫುಲ್ ಸ್ಟಾರ್ಟ್ ನಿರೀಕ್ಷಿಸಲಾಗಿದೆ. ಸದ್ಯ ಈ ಇಬ್ಬರು ಬ್ಯಾಟರ್ಸ್, ಒಳ್ಳೆ ಫಾರ್ಮ್ನಲ್ಲಿ ಇರುವಂತೆ ಕಾಣ್ತಿದ್ದಾರೆ. ಇಂದೂ ಕೊಹ್ಲಿ ಮತ್ತು ಸಾಲ್ಟ್ ಚೆನ್ನೈ ವೇಗಿಗಳನ್ನ ಕಾನ್ಫಿಡೆಂಟ್ ಆಗಿ ಫೇಸ್ ಮಾಡಬೇಕಿದೆ.
ಮಿಡಲ್ ಓವರ್ಸ್ನಲ್ಲೇ RCBಗೆ 'ಟೆಸ್ಟಿಂಗ್' ಟೈಮ್..!
T20 ಕ್ರಿಕೆಟ್ನಲ್ಲಿ ಮಿಡಲ್ ಓವರ್ಸ್, ತುಂಬಾ ಕ್ರೂಶಿಯಲ್. ಹಾಗಾಗಿ ಓವರ್ ನಂಬರ್ 7 ರಿಂದ 15ನೇ ಓವರ್ವರೆಗೂ, ಆರ್ಸಿಬಿ ಬ್ಯಾಟರ್ಸ್ಗೆ ಟೆಸ್ಟಿಂಗ್ ಟೈಮ್ ಆಗಿರುತ್ತೆ. ನಾಯಕ ರಜತ್ ಪಟಿದಾರ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ ಮತ್ತು ಟಿಮ್ ಡೇವಿಡ್, ಮುಮೆಂಟಮ್ನ ಬಿಲ್ಡ್ ಮಾಡಬೇಕಿದೆ. ಸಿಎಸ್ಕೆ ಕ್ವಾಲಿಟಿ ಸ್ಪಿನ್ ಅಟ್ಯಾಕ್ಗೆ, ತಕ್ಕ ಉತ್ತರ ನೀಡಬೇಕಿದೆ.
ಕೃನಾಲ್, ಸುಯೇಶ್ರಿಂದ 'ಇಂಪ್ಯಾಕ್ಟ್' ಸ್ಪೆಲ್ ನಿರೀಕ್ಷೆ ..!
ಚೆಪಾಕ್ನ ಸ್ಪಿನ್ ಫ್ರೆಂಡ್ಲಿ ಟ್ರ್ಯಾಕ್ನಲ್ಲಿ ಎಡಗೈ ಸ್ಪಿನ್ನರ್ ಕೃನಾಲ್ ಪಾಂಡ್ಯ ಮತ್ತು ಲೆಗ್ಸ್ಪಿನ್ನರ್ ಸುಯೇಶ್ ಶರ್ಮಾರಿಂದ ಇಂಪ್ಯಾಕ್ಟ್ ಸ್ಪೆಲ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಪಿಚ್ನಲ್ಲಿ ಕೃನಾಲ್-ಸುಯೇಶ್ ಜೋಡಿ ಕ್ಲಿಕ್ ಆಗಿದ್ದೇ ಆದ್ರೆ, ಸಿಎಸ್ಕೆ ಬ್ಯಾಟರ್ಸ್ ಹೋಂ ಪಿಚ್ನಲ್ಲಿ ಪರದಾಡೋದು ಗ್ಯಾರಂಟಿ.
ಸ್ವಿಂಗ್ ಕಿಂಗ್ ಭುವನೇಶ್ವರ್ 'ಫಿಟ್'..! ಆಡೋದು 'ಡೌಟ್'..!
ಗಾಯದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ಭುವನೇಶ್ವರ್ ಕುಮಾರ್, ಇದೀಗ ಫುಲ್ ಫಿಟ್ ಆಗಿದ್ದಾರೆ. ಆದ್ರೆ ಭುವಿ, ಸಿಎಸ್ಕೆ ವಿರುದ್ಧ ಆಡೋದು ಅನುಮಾನ ಎನ್ನಲಾಗ್ತಿದೆ. ಕಾರಣ, ಈ ಪಿಚ್ ಸ್ಪಿನ್ ಫ್ರೆಂಡ್ಲಿ ಆಗಿರೋದ್ರಿಂದ ಆರ್ಸಿಬಿ ಎಕ್ಸ್ಟ್ರಾ ಸ್ಪಿನ್ನರ್ ಮೊರೆ ಹೋಗೋ ಸಾಧ್ಯತೆ ಇದೆ. ಅಥವಾ ಮೊದಲ ಪಂದ್ಯದಲ್ಲಿ ಆಡಿದ್ದ ಬೌಲಿಂಗ್ ಅಟ್ಯಾಕ್ಅನ್ನೇ, ಮುಂದುವರೆಸಲಿದೆ.
ಇದನ್ನೂ ಓದಿ:CSK ವಿರುದ್ಧದ ಪಂದ್ಯಕ್ಕೆ ಭುವಿ ಫಿಟ್, ಪ್ಲೆಯಿಂಗ್- 11ನಿಂದ ಕೊಕ್ ಯಾರಿಗೆ..?
ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ಸತತ 8 ಸೋಲು..!
ಚೆನ್ನೈನ ಚೆಪಾಕ್ ಪಿಚ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅನ್ಲಕ್ಕಿ. ಅದ್ರಲ್ಲಿ ಯಾವುದೇ ಅನುಮಾನ ಬೇಡ. 2008ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಆರ್ಸಿಬಿ, ಸಿಎಸ್ಕೆ ವಿರುದ್ಧ ಗೆಲುವು ದಾಖಲಿಸಿತ್ತು. ಅದು ಬಿಟ್ರೆ, ಕಳೆದ 8 ಪಂದ್ಯಗಳಲ್ಲಿ ಆರ್ಸಿಬಿ ಸಿಎಸ್ಕೆ ವಿರುದ್ಧ ಸತತ ಸೋಲು ಅನುಭವಿಸಿದೆ. ಇವತ್ತು ಬೆಂಗಳೂರು ತಂಡ, ಸೂಪರ್ಕಿಂಗ್ಸ್ ವಿರುದ್ಧ ಸೋಲಿನ ಜಿಂಕ್ಸ್ನಿಂದ ಹೊರಬರಬೇಕಿದೆ.
ಚೆಪಾಕ್ ಪಿಚ್ಗೆ, ಸಿಎಸ್ಕೆ ಹೇಳಿ ಮಾಡಿಸಿದ ತಂಡ. ಇವತ್ತು ಚೆನ್ನೈ ಸೂಪರ್ಕಿಂಗ್ಸ್ ಆರ್ಸಿಬಿ ವಿರುದ್ಧ ಗೆಲ್ಲೋ ಫೇವರಿಟ್ಸ್ ಆದ್ರೂ, ಇಂಡಿಯನ್ ಪಾಸಿಬಲ್ ಲೀಗ್ನಲ್ಲಿ ಏನ್ ಬೇಕಾದ್ರೂ ಆಗಬಹುದು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ