CSK vs RCB ಪಂದ್ಯಗಳಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ್ದು ಯಾರು? ಆಟಗಾರರ ಲಿಸ್ಟ್..!

author-image
Ganesh
Updated On
IPL ಕದನದಲ್ಲಿ ಅಭಿಮಾನಿಗಳಿಗೆ ಭಾವುಕ ಕ್ಷಣ.. ಕೊಹ್ಲಿ-ಧೋನಿ ಕೊನೆಯ ಬಾರಿಗೆ ಮುಖಾಮುಖಿ..?
Advertisment
  • ಇಂದು ಚೆನ್ನೈ ಮತ್ತು ಬೆಂಗಳೂರು ನಡುವೆ ಹಣಾಹಣಿ
  • ರಣ ರೋಚಕ ಪಂದ್ಯ ವೀಕ್ಷಿಸಲು ಫ್ಯಾನ್ಸ್ ಎಕ್ಸೈಟ್
  • ಬೌಂಡರಿ ಬಾರಿಸೋದ್ರಲ್ಲಿ ಕೊಹ್ಲಿ, ರೈನಾ ಕಿಂಗ್..!

ಇಂದು ಸಂಜೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ವಾಸ್ತವವಾಗಿ ಎರಡೂ ತಂಡಗಳು ಅಪಾರ ಅಭಿಮಾನಿ ಬಳಗ ಹೊಂದಿವೆ. ಜೊತೆಗೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿವೆ. ಹೀಗಾಗಿ ಇವತ್ತಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ.

ಆರ್​ಸಿಬಿ vs ಸಿಎಸ್​ಕೆ ಪಂದ್ಯದಲ್ಲಿ ಯಾವ ಬ್ಯಾಟ್ಸ್‌ಮನ್ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆಂದು ನಿಮಗೆ ತಿಳಿದಿದೆಯೇ? ಈ ಕುರಿತ ಮಾಹಿತಿ ಇಲ್ಲಿದೆ. ಸಿಎಸ್‌ಕೆ-ಆರ್‌ಸಿಬಿ ಪಂದ್ಯದಲ್ಲಿ ಮಾಹಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: ಆರ್​​ಸಿಬಿಗೆ ಬಂತು ಆನೆಬಲ; ಫ್ರಾಂಚೈಸಿ ಭರವಸೆಯ ಆಟಗಾರ ತಂಡಕ್ಕೆ ಕಂಬ್ಯಾಕ್..!

ಸಿಎಸ್​ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಆರ್​ಸಿಬಿ ವಿರುದ್ಧ ಅವರು 44 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸಿಕ್ಸರ್ ಬಾರಿಸೋದ್ರಲ್ಲಿ ಕೊಹ್ಲಿ ಕೂಡ ಹಿಂದೆ ಬಿದ್ದಿಲ್ಲ. ಕಿಂಗ್ ಕೊಹ್ಲಿ ಸಿಎಸ್​ಕೆ ವಿರುದ್ಧ 42 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಧೋನಿ ನಂತರ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬೌಂಡರಿ ಬಾರಿಸೋದ್ರಲ್ಲಿ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಚೆನ್ನೈ ವಿರುದ್ಧ ವಿರಾಟ್ ಕೊಹ್ಲಿ 76 ಬೌಂಡರಿಗಳನ್ನು ಬಾರಿಸಿದ್ದಾರೆ. ಸುರೇಶ್ ರೈನಾ ಎರಡನೇ ಸ್ಥಾನದಲ್ಲಿದ್ದಾರೆ. ರೈನಾ ಆರ್​ಸಿಬಿ ವಿರುದ್ಧ 54 ಬೌಂಡರಿಗಳನ್ನು ಬಾರಿಸಿದ್ದಾರೆ. ಸಿಎಸ್​ಕೆ ವಿರುದ್ಧ ಕೊಹ್ಲಿ 9 ಬಾರಿ ಅರ್ಧಶತಕ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ಧೋನಿ ಹಾಗೂ ಸುರೇಶ್ ರೈನಾ ಆರ್​ಸಿಬಿ ವಿರುದ್ಧ 4 ಬಾರಿ ಅರ್ಧಶತಕ ಗಳಿಸಿದ್ದಾರೆ.

ಇದನ್ನೂ ಓದಿ: ವಿಜಯಲಕ್ಷ್ಮಿಗೆ ಮುದ್ದು ರಾಕ್ಷಸಿ ಎಂದ ದರ್ಶನ್; ಫ್ಯಾನ್ಸ್​ ಖುಷ್, ವಿಡಿಯೋ ವೈರಲ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment