newsfirstkannada.com

RCBಯನ್ನ ಹೊರ ಹಾಕಲೆಂದೆ CSK ಜೊತೆ ರಾಜಸ್ಥಾನ ಸೋತಿತೇ.. ಇದು ಫಿಕ್ಸ್ ಆಗಿತ್ತಾ?

Share :

Published May 13, 2024 at 1:25pm

Update May 13, 2024 at 1:21pm

    ಬೌಲರ್​ಗಳ ವಿರುದ್ಧ ಬೊಬ್ಬಿರಿಯುತ್ತಿದ್ದ ರಾಜಸ್ಥಾನ ಬ್ಯಾಟ್ಸ್​ಮನ್ಸ್​

    ಚೆನ್ನೈ ಜೊತೆ ಆಡುವಾಗ 30 ರನ್​ಗಳ ಗಡಿ ದಾಟದ ಆರ್​ಆರ್..!

    ​ಚೆಪಾಕ್​ನಲ್ಲಿ ಸುಲಭವಾಗಿ ಗುರಿ ಮುಟ್ಟಿದ ಚೆನ್ನೈ ಸೂಪರ್ ಕಿಂಗ್ಸ್​

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದು ಬೀಗಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾತ್ರ ಇದು ಮೊದಲೇ ಫಿಕ್ಸ್ ಆಗಿತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

​ಚೆನ್ನೈ ಸೂಪರ್ ಕಿಂಗ್ಸ್ ತಂಡ ಜೊತೆ ರಾಜಸ್ಥಾನ ರಾಯಲ್ಸ್ 5 ವಿಕೆಟ್​ಗಳಿಂದ ಅತಿ ಸುಲಭವಾಗಿ ಸೋಲು ಕಂಡಿದೆ. ಮೊದಲು ಟಾಸ್ ಗೆದ್ದುಕೊಂಡ ರಾಜಸ್ಥಾನ ರಾಯಲ್ಸ್​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕ್ರೀಸ್​ಗೆ ಆಗಮಿಸಿತು. ಪಿಚ್ ಯಾವುದೇ ಇರಲಿ, ಬೌಲರ್​ಗಳು ಯಾರೇ ಇರಲಿ ಸಂಜು ಸ್ಯಾಮ್ಸನ್ ಪಡೆ ಬ್ಯಾಟಿಂಗ್​​ನಲ್ಲಿ ಅಬ್ಬರಿಸಿ ಬೊಬ್ಬಿರಿತ್ತಿತ್ತು. ಯಾವ ಪಂದ್ಯವನ್ನು ಅಷ್ಟು ಸಾಮಾನ್ಯವಾಗಿ ಸೋಲುತ್ತಿರಲಿಲ್ಲ.

ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮಾತ್ರ ಸಾಧಾರಣವಾಗಿ ಬ್ಯಾಟಿಂಗ್ ಮಾಡಿದೆ. ರಿಯಾನ್ ಪರಾಗ್ ಅವರ 47 ರನ್​ಗಳು ಬಿಟ್ಟರೇ ಕ್ರೀಸ್​​ಗೆ ಬಂದಿದ್ದ 5 ಬ್ಯಾಟ್ಸ್​ಮನ್​ಗಳು 30 ರನ್​ಗಳ ಗಡಿ ಕೂಡ ದಾಟದೇ ಕಳಪೆ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 141 ರನ್​ಗಳ ಸಣ್ಣ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನತ್ತಿದ್ದ ಸಿಎಸ್​ಕೆ ಬ್ಯಾಟರ್​ಗಳು ರಚಿನ್ ರವೀಂದ್ರ 27, ಗಾಯಕ್ವಾಡ್ 42, ಮಿಚೆಲ್ 22, ಅಲಿ 10, ದುಬೆ 18, ಜಡೇಜಾ 5 ಹಾಗೂ ರಿಜ್ವಿ 15 ರನ್​ ಗಳಿಸಿದರು. ಈ ಮೂಲಕ 18.2 ಓವರ್​​ನಲ್ಲಿ 5 ವಿಕೆಟ್ ಕಳೆದುಕೊಂಡು​ 145 ರನ್​ ಬಾರಿಸಿ ಗೆಲುವು ಪಡೆದುಕೊಂಡಿದೆ.

ಈ ಬಗ್ಗೆ ಆರ್​ಸಿಬಿ, ಸಿಎಸ್​ಕೆ ಅಭಿಮಾನಿಗಳಲ್ಲಿ ಬಾರೀ ಗೊಂದಲವೇ ಉಂಟಾಗಿದೆ ಎನ್ನಬಹುದು. ಆರ್​ಸಿಬಿ ಫ್ಯಾನ್ಸ್​ಗೆ ಚೆನ್ನೈ ಕಂಡರೇ ಆಗಲ್ಲ. ಚೆನ್ನೈಯನ್ನ ಟೀಕೆ ಮಾಡುವುದೇ ಆರ್​ಸಿಬಿಯ ಅಭಿಮಾನಿಗಳ ಅಜೆಂಡಾ ಎಂದು ಸಿಎಸ್​ಕೆ ಫ್ಯಾನ್ಸ್​ ಹೇಳುತ್ತಿದ್ದಾರೆ. ಇನ್ನು ನಮ್ಮನ್ನು ಕಪ್​ ಗೆಲ್ಲದಂತೆ ಹೀಗೆ ಮಾಡಲಾಗಿದೆ ಎಂದು ಆರ್​​ಸಿಬಿ ಫ್ಯಾನ್ಸ್​ ಹೇಳುತ್ತಿದ್ದಾರೆ. ಆದರೆ ಮ್ಯಾಚ್ ನೋಡಿದವರಿಗಂತೂ ತಲೆಯಲ್ಲಿ ಇದೇನಿದು ಪಂದ್ಯ ಹೀಗಾಯಿತು ಎನ್ನುವ ಅನುಮಾನ ಇದ್ದೇ ಇರುತ್ತದೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಯನ್ನ ಹೊರ ಹಾಕಲೆಂದೆ CSK ಜೊತೆ ರಾಜಸ್ಥಾನ ಸೋತಿತೇ.. ಇದು ಫಿಕ್ಸ್ ಆಗಿತ್ತಾ?

https://newsfirstlive.com/wp-content/uploads/2024/05/RCB.jpg

Load More