/newsfirstlive-kannada/media/post_attachments/wp-content/uploads/2024/12/CT-Ravi.jpg)
ಬೆಳಗಾವಿ: ಪರಿಷತ್ ಸದಸ್ಯ ಸಿಟಿ ರವಿಯನ್ನ ಪೊಲೀಸರು ಬೆಳಗಾವಿ 5ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಧೀಶೆ ಸ್ಪರ್ಶಾ ಡಿಸೋಜಾ ನೇತೃತ್ವದಲ್ಲಿ ವಿಚಾರಣೆ ನಡೆಯಿತು.
ಸದ್ಯ ಸಿ.ಟಿ ರವಿ ಪರ 10ಕ್ಕೂ ಅಧಿಕ ವಕೀಲರ ತಂಡ ನಿಂತಿದ್ದು ವಕೀಲ ಎಂ.ಬಿ.ಜಿರಲಿ ವಾದ ಮಂಡಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಪಿ.ಅಭಿಷೇಕ ವಾದ ಮಂಡಿಸಿದ್ದಾರೆ. ಈ ವೇಳೆ ಸಿಟಿ ರವಿ ಪೊಲೀಸರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದಾರೆ. ಪೊಲೀಸರಿಂದ ನನಗೆ ಜೀವ ಬೆದರಿಕೆ ಇದೆ ಅಂತ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ರವಿ ಪರ ವಕೀಲರು ಮಧ್ಯಂತರ ಜಾಮೀನು ಕೊಡುವಂತೆ ಮನವಿ ಮಾಡಿದ್ದು, 3 ಗಂಟೆಗೆ ತೀರ್ಪು ಕಾಯ್ದಿರಿಸಲಾಗಿದೆ.
ಇದನ್ನೂ ಓದಿ:ಚೈತ್ರಾ ಕುಂದಾಪುರಗೆ ಮತ್ತೆ ಜೈಲು.. ಮುಂದಿನ ವಾರಕ್ಕೆ ಕ್ಯಾಪ್ಟನ್ ಯಾರೆಂದು ರಿವೀಲ್..!
ಇತ್ತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಿರಿಯ ವಕೀಲ ಅಶೋಕ್ ಹಾರ್ನಳ್ಳಿ ಅವರು ಸಿಟಿ ರವಿ ಪರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿ ಕೋರ್ಟ್ ಆದೇಶ ಗಮನಿಸಿ ವಿಚಾರಣೆಗೆ ಮೆಮೋ ಸಲ್ಲಿಕೆ ಸಾಧ್ಯತೆ ಇದೆ. ಬೆಳಗಾವಿಯಲ್ಲಿ ಜಾಮೀನು ಸಿಗದಿದ್ದರೆ ಬೆಂಗಳೂರಿನಲ್ಲಿ ವಾದ ಮಂಡನೆ ಆಗಲಿದೆ.
ಬೆಳಗಾವಿ ಮ್ಯಾಜಿಸ್ಟ್ರೇಟ್ ಆದೇಶದ ಮೇಲೆ ಮೆಮೋ ಸಲ್ಲಿಕೆ ಆಗಲಿದೆ. ಒಂದು ವೇಳೆ ಬೇಲ್ ಆದರೆ ಮೆಮೋ ಮೂವ್ ಮಾಡಲ್ಲ. ಅಲ್ಲಿ ಬೇಲ್ ರಿಜೆಕ್ಟ್ ಆದ್ರೆ ಮೆಮೊ ಮೂವ್ ಆಗಲಿದೆ. ಇದಕ್ಕೆಲ್ಲ ಮಧ್ಯಾಹ್ನ 3 ಗಂಟೆಯತನಕ ಕಾಯಬೇಕಾಗಿದೆ. ಒಂದು ವೇಳೆ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ತಿರಸ್ಕಾರಗೊಂಡರೆ ಬೆಂಗಳೂರಿನ ಸಿಸಿಹೆಚ್ 82ನೇ ಕೋರ್ಟ್ ಮುಂದೆ ಬರಲಿದೆ.
ಇದನ್ನೂ ಓದಿ:ಕನ್ನಡ ಹಬ್ಬದಲ್ಲಿ ಭೂರಿ ಭೋಜನ.. ಮೊದಲ ದಿನದ ಉಪಾಹಾರ-ಊಟ ಏನೇನು ಇದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us