newsfirstkannada.com

‘ಅನಂತಕುಮಾರ್ ಹೆಗಡೆ ಕಾರ್ಯಶೈಲಿ ಭಿನ್ನವಿದೆ, ಆದರೆ..’ ಸಿಟಿ ರವಿ ಖಂಡನೆ

Share :

Published January 16, 2024 at 2:37pm

    ಹಿರಿಯರು, ಸ್ಥಾನಕ್ಕೆ ಕೊಡಬೇಕಾದ ಗೌರವ ಕೊಡಲೇಬೇಕು

    ಹೆಗಡೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲ್ಲ ಎಂದ ರವಿ

    ಏಕವಚನದಲ್ಲಿ ಮಾತಾಡೋದು, ಅಗೌರವ ತರೋದನ್ನು ಒಪ್ಪಲ್ಲ

ಚಿಕ್ಕಮಗಳೂರು: ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರಲ್ಲಿ ಮಾತನಾಡಿರುವ ಅವರು.. ಹಿರಿಯರು ಮತ್ತು ಅವರ ಸ್ಥಾನಕ್ಕೆ ಕೊಡಬೇಕಾದ ಗೌರವ ಕೊಡಲೇಬೇಕು. ಹೆಗಡೆ ಅವರ ಕಾರ್ಯಶೈಲಿ ಭಿನ್ನವಿದೆ. ಹಾಗಂತ ಮತ್ತೊಬ್ಬರನ್ನು ಹರ್ಟ್ ಮಾಡಬಾರದು. ಅವರ ಹೇಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ. ರಾಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವನು, ಅವರು ಏಕವಚನದಲ್ಲಿ ಮಾತನಾಡಿರುವುದನ್ನು ಒಪ್ಪುವುದಿಲ್ಲ ಎಂದು ಸಿಟಿ ರವಿ ಪ್ರತಿಪಾದಿಸಿದ್ದಾರೆ.

ಘಜನಿ, ಕಿಲ್ಜಿ, ಘೋರಿ ಔರಂಗಜೇಬ್, ಮೊಘಲರು, ಟಿಪ್ಪು ಕಾಲದಲ್ಲಿ 42 ಸಾವಿರ ದೇಗುಲ ಧ್ವಂಸ ಮಾಡಿದ್ದಾರೆ. ಭಾರತೀಯ ಮುಸಲ್ಮಾನರು ಆ ದಾಳಿಕೋರರ ಜೊತೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳಲ್ಲ. ಮುಸ್ಲಿಮರು ಭಾರತೀಯ ಸನಾತನ ಪರಂಪರೆಗೆ ವಿಶ್ವಾಸವಿಟ್ಟು ಉಳಿದುಕೊಂಡಿದ್ದಾರೆ. ಅವರಿಗೂ ಮನ ಪರಿವರ್ತನೆಯ ದಿನ ಬರಬಹುದು. ಘಜನಿ, ಘೋರಿ, ಮೊಘಲರ ಜೊತೆ ಗುರುತಿಸಿಕೊಳ್ಳುವ ಮಾನಸೀಕತೆ ತುಂಬಾ ಅಪಾಯಕಾರಿ. ಎಲ್ಲಾ ಮುಸ್ಲಿಮರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನಾವು ತೂಗೋದಿಲ್ಲ. ಇಲ್ಲಿನ ಮುಸ್ಲಿಮರು ಘಜನಿ, ಘೋರಿ, ಬಾಬರ್ ಮಾನಸೀಕತೆಯಿಂದ ಹೊರಬರಬೇಕು. ಅವರಿಗೆ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಅವರು ಆದರ್ಶವಾಗಬೇಕು. ಆಗ ನಮ್ಮಲ್ಲಿ ಸಹೋದರತ್ವ ಭಾವನೆ ಗಟ್ಟಿಯಾಗುತ್ತದೆ ಎಂದಿದ್ದಾರೆ.

ಯಾರೇ ಆದರೂ ಏಕವಚನದಲ್ಲಿ ಮಾತನಾಡೋದು, ಅಗೌರವ ತರೋದನ್ನು ನಾವು ಒಪ್ಪುವುದಿಲ್ಲ. ಹೆಗಡೆ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಶಿವರಾಜ್ ತಂಗಡಗಿಯವರು ನಾಯಿಗೆ ಹೋಲಿಸಿರುವುದು ತಪ್ಪೇ. ಪ್ರಧಾನಿಯನ್ನು ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡೋದು ತಪ್ಪು. ಅವ್ನು ಹೋಗಿದ್ನ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಅಂತ ಪ್ರಧಾನಿಯನ್ನ ಕೇಳಿದ್ದಾರೆ. ಹಿರಿಯರಾಗಿ, ಹೇಳುವಂತವರಾಗಿ ಪ್ರಧಾನಿಗೆ ಏಕವಚನದಲ್ಲಿ ಮಾತನಾಡೋದು ನೀವೆಷ್ಟು ಸರಿ? ಹಿರಿಯರು ದೊಡ್ಡತನದಲ್ಲಿ ನಡೆದುಕೊಳ್ಳಬೇಕು, ಆಗ ಉಳಿದವರಿಗೆ ಮಾದರಿಯಾಗುತ್ತೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅನಂತಕುಮಾರ್ ಹೆಗಡೆ ಕಾರ್ಯಶೈಲಿ ಭಿನ್ನವಿದೆ, ಆದರೆ..’ ಸಿಟಿ ರವಿ ಖಂಡನೆ

https://newsfirstlive.com/wp-content/uploads/2024/01/CT-RAVI.jpg

Load More