/newsfirstlive-kannada/media/post_attachments/wp-content/uploads/2024/12/CT-RAVI-4.jpg)
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಶಾಂತವಾಗಿ ಸಂಪನ್ನವಾಗುವ ಬದಲು ಕಚ್ಚಾಟದಲ್ಲಿ ಕೊನೆಯಾಗಿತ್ತು. ಇಬ್ಬರು ಜನಪ್ರತಿನಿಧಿಗಳು ಬಾಯಿಗೆ ಬಂದಂತೆ ಬೈದಾಡಿಕೊಂಡಿದ್ದು ಸಂಚಲನ ಮೂಡಿಸಿತ್ತು. ಮೇಲ್ಮನೆಯಲ್ಲಿ ನಡೆದಿರೋದು ದುರಾದೃಷ್ಟಕರ ಎಂದಿರೋ ಕೋರ್ಟ್ ಷರತ್ತು ವಿಧಿಸಿ ಸಿ.ಟಿ.ರವಿಗೆ ಬಿಡುಗಡೆಯ ಭಾಗ್ಯ ನೀಡಿದೆ. ರಿಲೀಸ್ ಬೆನ್ನಲ್ಲೇ ಸರಿ-ತಪ್ಪುಗಳ ಮೌಲ್ಯಮಾಪನ ಶುರುವಾಗಿದೆ.
ಇದನ್ನೂ ಓದಿ:ಬೆನ್ನು ನೋವು ಮರೆತ ದರ್ಶನ್.. ನೆಚ್ಚಿನ ಫಾರ್ಮ್ಹೌಸ್ನಲ್ಲಿ ದಾಸ ಫುಲ್ ರಿಲ್ಯಾಕ್ಸ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ಎಂಎಲ್ಸಿ ಸಿ.ಟಿ.ರವಿ ಪ್ರಯೋಗಿಸಿದ ಪದ ಬಳಕೆ ಭಾರೀ ಸಂಚಲನ ಮೂಡಿಸಿತ್ತು. ಸಿ.ಟಿ.ರವಿಯನ್ನು ಬಂಧಿಸಿದ್ದ ಪೊಲೀಸರು ಇಡೀ ರಾತ್ರಿಯೆಲ್ಲಾ ಸುಮಾರು 11 ಗಂಟೆಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಸುತ್ತಾಡಿಸಿದ್ದರು. ಬಳಿಕ ಬೆಂಗಳೂರಿನತ್ತ ಕರೆತರುವ ಹೈಕೋರ್ಟ್ ತೀರ್ಪು ನೀಡಿ ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಸಿ.ಟಿ.ರವಿ ಬಂಧಿಸಿದ ಕ್ರಮವನ್ನು ಪ್ರಶ್ನಿಸಿತ್ತು. ಬಿಡುಗಡೆ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸದನದ ಕಲಾಪದ ವೇಳೆ ಯಾಱರು ಏನೇನು ಶಬ್ದ ಪ್ರಯೋಗ ಮಾಡಿದರು ಎಂದು ಬರೆದಿಟ್ಟು ಕೊಳ್ಳುತ್ತಾರೆ. ನಾನು ಮೂರು ಕಡೆ ಪರಿಶೀಲನೆ ಮಾಡಿದ್ದೇನೆ. ಎಲ್ಲಿಯೂ ಕೂಡ ನಾನು ಆ ಪದಬಳಕೆ ಮಾಡಿಲ್ಲ. ಕಾನೂನು ಸಿಟಿ ರವಿಗೆ ಒಂದು, ಹೆಬ್ಬಾಳ್ಕರ್ಗೆ ಒಂದು ಇದೆಯಾ? ಪೊಲೀಸರು ನಿಷ್ಪಕ್ಷಪಾತಿಯಾಗಿ ಕೆಲಸ ಮಾಡುತ್ತಿದ್ದಾರೋ? ಇಲ್ಲ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೋ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಿ.ಟಿ ರವಿ, ಲಕ್ಷ್ಮೀ ಹೆಬ್ಬಾಳ್ಕರ್ ನಡೆಗೆ ಹೈಕೋರ್ಟ್ ಬೇಸರ; ನ್ಯಾಯಾಲಯದಲ್ಲಿ ಆಗಿದ್ದೇನು?
ಸಿ.ಟಿ.ರವಿಗೆ ಧೈರ್ಯ ತುಂಬಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರ ಕ್ರಮ ಕಾನೂನು ಬಾಹಿರ, ಹೈಕೋರ್ಟ್ ತೀರ್ಪು ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ ಅಂತ ಕಿಡಿಕಾರಿದ್ದಾರೆ.
ನನ್ನ ಗಂಡ ಅಂಥವರಲ್ಲ ಎಂದ ಸಿ.ಟಿ.ರವಿ ಪತ್ನಿ ಪಲ್ಲವಿ
ನನ್ನ ಪತಿ ಸುಸಂಸ್ಕೃತರು, ಅವರು ಹೆಣ್ಣು ಮಕ್ಕಳನ್ನು ಗೌರವಿಸ್ತಾರೆ ಅಂತ ಸಿ.ಟಿ.ರವಿ ಪತ್ನಿ ಪಲ್ಲವಿ ಸಮರ್ಥಿಸಿಕೊಂಡಿದ್ದಾರೆ. ಜನಪ್ರತಿನಿಧಿಗೆ ಹೀಗೆ ಮಾಡಿದ್ರೆ ಜನಸಾಮಾನ್ಯರ ಕಥೆ ಏನು ಅಂತ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸಿಟಿ ರವಿ ಜೊತೆ ನಾನು 25 ವರ್ಷದಿಂದ ಒಟ್ಟಿಗೆ ಇದ್ದೇನೆ. ಅವರು ಹಣ್ಣು ಮಕ್ಕಳನ್ನು ಟ್ರೀಟ್ ಮಾಡೋದನ್ನು ತುಂಬಾನೇ ಹತ್ತಿರದಿಂದ ನೋಡಿದ್ದೇನೆ. ಅವರು ಆ ಪದ ಬಳಸಿದ್ದಾರೆ ಎಂದರೆ ನಮ್ಮ ಮನೆ ಮುಂದೆ ಇಷ್ಟೊಂದು ಹೆಣ್ಣು ಮಕ್ಕಳು ಬಂದು ಇರುತ್ತಿರಲಿಲ್ಲ. ಆರ್ಎಸ್ಎಸ್ ಬ್ಯಾಗ್ರೌಂಡ್ನಿಂದ ಒಳ್ಳೆಯ ಸಂಸ್ಕಾರದಿಂದ ಬಂದಿರೋರು.
ರಾತ್ರಿ ಒಂದು ಊರಿನಿಂದ ಇನ್ನೊಂದು ಊರಿಗೆ ತಿರುಗಿಸಿದ್ದಾರೆ. ಮಧ್ಯರಾತ್ರಿ ನಾನು ಲೈವ್ ಲೊಕೇಷ್ ಕೇಳಿದಾಗ ಯಾವುದೋ ಡ್ಯಾಂ ಇರೋ ಸ್ಥಳ ತೋರಿಸುತ್ತಿತ್ತು. ನಮಗೆ ಆತಂಕ ಆಗಿತ್ತು. ಒಬ್ಬ ಜನಪ್ರತಿನಿಧಿಯನ್ನೇ ಸರ್ಕಾರ ಹೆಂಗೆ ಬೇಕೋ ಹಾಗೆ ಟ್ರೀಟ್ ಮಾಡುತ್ತದೆ ಅಂದರೆ ಸಾಮಾನ್ಯ ಪ್ರಜೆಗಳ ಕತೆ ಏನು ಎಂದು ಪಲ್ಲವಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಸ್ನೇಹಿತರಿಂದಲೇ ಸಾಲದ ಸಮಸ್ಯೆ; ಆಸ್ತಿ ವಿವಾದಲ್ಲಿ ಸ್ತ್ರೀಯರು; ಇಲ್ಲಿದೆ ಇಂದಿನ ಭವಿಷ್ಯ
ಒಟ್ಟಾರೆ ಸಿ.ಟಿ.ರವಿಗೆ ಹೈಕೋರ್ಟ್ಗೆ ಮಧ್ಯಂತರ ರಿಲೀಫ್ ನೀಡಿದೆ. ಸಿ.ಟಿ.ರವಿ ಬಂಧನ ವಿಚಾರ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಮರಕ್ಕೆ ನಾಂದಿ ಹಾಡಿದಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ