/newsfirstlive-kannada/media/post_attachments/wp-content/uploads/2024/12/ct-ravi2.jpg)
ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ಹೇಳಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು 5ನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ನ್ಯಾಯಾಧೀಶೆ ಡಿಸೋಜ ಅವರು ಪ್ರಕರಣದ ವಿಚಾರಣೆಯನ್ನು ನಡೆಸಿದರು. ಇದೇ ವೇಳೆ ಸಿಟಿ ರವಿ ಜಾಮೀನಿಗೆ ವಕಾಲತು ಅರ್ಜಿ ಸಲ್ಲಿಸಿದರು. ಬಳಿಕ ನ್ಯಾಯಾಧೀಶರು, ಸಿಟಿ ರವಿ ಅವರತ್ತ ನೋಡಿ ಯಾವಾಗ ಬಂಧನ ಮಾಡಿದರು ಎಂದು ಪ್ರಶ್ನಿಸಿದರು. ಆಗ ಕೋರ್ಟ್ಗೆ ಸಿಟಿ ರವಿ ಮಾಹಿತಿ ನೀಡಿ.. ಸುವರ್ಣಸೌಧದಲ್ಲಿ ನಿನ್ನೆ ಸಂಜೆ 6:30 ರಿಂದ 6:45 ರ ಸುಮಾರಿಗೆ ಬಂಧಿಸಿದ್ದಾರೆ. ಬಂಧನದ ನಂತರ ರಾತ್ರಿ 10 ಗಂಟೆಯಿಂದ ನನ್ನನ್ನು ವಾಹನದಲ್ಲಿ ಸುತ್ತಿಸಿದ್ದಾರೆ. ಧಾರವಾಡ, ರಾಮದುರ್ಗ ಸೇರಿದಂತೆ ಹಲವಡೆ ನನ್ನನ್ನು ಸುತ್ತಾಡಿಸಿದ್ದಾರೆ.
ಇದನ್ನೂ ಓದಿ:ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಸುದ್ದಿಗೋಷ್ಠಿ, ಕಣ್ಣೀರಿಟ್ಟ ಸಚಿವೆ.. ಅಳುತ್ತ ಹೇಳಿದ್ದೇನು..?
ಕ್ರಷರ್, ಕಬ್ಬಿನ ಗದ್ದೆಯಲ್ಲೂ ನನ್ನನ್ನು ಸುತ್ತಾಡಿಸಿದ್ದಾರೆ. ಹೀರೆಬಾಗೇವಾಡಿಯಿಂದ ಯಾದವಾಡ, ಮುದ್ದೊಳ ಎಂಬ ಬೋರ್ಡ್ ನೋಡಿದ್ದೇನೆ. ಯಾದಗಡ್ ಎಲ್ಲ ಕಡೆ ಕರೆದುಕೊಂಡು ಹೋಗಿದ್ದಾರೆ. ಖಾನಾಪುರದಲ್ಲಿ ಪೊಲೀಸರು ತಲೆಗೆ ಹೊಡೆದ್ರು. ಅವರು ಯಾರು ಎಂದು ಗೊತ್ತಾಗಿಲ್ಲ. ರಾಮದುರ್ಗದಲ್ಲಿ ಬೆಳಗಿನ ಜಾವ 3.15ಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ. ನನಗೆ ಪೊಲೀಸರು ಮಾನಸಿಕ, ದೈಹಿಕ ಹಿಂಸೆ ನೀಡಿದ್ದು ಅಲ್ಲದೆ, ವಾಚ್ ಕಿತ್ತುಕೊಂಡಿದ್ದಾರೆ. ನನಗೆ ಭಯ ಹುಟ್ಟಿಸುವಂತೆ ನಡೆದುಕೊಳ್ಳುತ್ತಿದ್ದರು.
ಪ್ರತಿ 10 ನಿಮಿಷಕ್ಕೆ ಒಂದು ಪೋನ್ ಬರುತ್ತಿತ್ತು. ಅವರ ಡೈರೆಕ್ಷನ್ ಆಧಾರದ ಮೇಲೆ ನನ್ನನ್ನು ಸುತ್ತಾಡಿಸುತ್ತಿದ್ದರು. ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದೇವೆ ಎಂಬ ಮಾಹಿತಿ ನೀಡಲಿಲ್ಲ. ನನ್ನ ಕುಟುಂಬಕ್ಕೂ ಮಾಹಿತಿ ನೀಡಿಲ್ಲ. ರಾತ್ರಿ ಇಡಿ ಉಪವಾಸ ಇದ್ದೀನಿ. ನಾನು ದೂರು ಕೊಟ್ಟೆ. ಆದರೆ ಎಫ್ಐಆರ್ ಮಾಡಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಎಫ್ಐಆರ್ ಮಾಡಿಲ್ಲ ಎಂದು ರಾತ್ರಿ ನಡೆದ ಘಟನೆ ಬಗ್ಗೆ ಕೋರ್ಟ್ಗೆ ತಿಳಿಸಿದ್ದಾರೆ ಸಿಟಿ ರವಿ.
ಇದನ್ನೂ ಓದಿ:ಕೇಂದ್ರದ ಕಠಿಣ ಕ್ರಮಕ್ಕೆ ಉರ್ಕೊಂಡ ವಿಜಯ್ ಮಲ್ಯ; 8,000 ಸಾವಿರ ಕೋಟಿ ವಸೂಲಿಗೆ ತಬ್ಬಿಬ್ಬು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ