/newsfirstlive-kannada/media/post_attachments/wp-content/uploads/2024/12/MALAYALAM-ACTOR.jpg)
ಕನ್ನಡ ಚಿತ್ರರಂಗ ಹೆಸರಾಂತ ನಿರ್ದೇಶಕ ಹಾಗೂ ನಟ ಗುರುಪ್ರಸಾದ್​ ಇತ್ತೀಚೆಗಷ್ಟೇ ಸಾವಿಗೆ ಶರಣಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಸಾಲ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಕಂಗೆಟ್ಟು ತಾವು ವಾಸವಿದ್ದ ಅಪಾರ್ಟ್​ಮೆಂಟ್​ನಲ್ಲಿಯೇ ಜೀವ ಕಳೆದುಕೊಂಡಿದ್ದರು. ಆ ಗಾಯ ಇನ್ನೂ ಹಸಿಯಾಗಿರುವಾಗಲೇ ಈಗ ಮಲೆಯಾಳಂನ ಖ್ಯಾತ ನಟರೊಬ್ಬರು ಗುರುಪ್ರಸಾದ್ ಹಾದಿಯಲ್ಲಿಯೇ ಸಾಗಿದ್ದಾರೆ. ಮಲೆಯಾಳಂ ನಟ ದಿಲೀಪ್ ಶಂಕರ್ ಹೋಟೆಲ್​ ರೂಮ್​ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತಿರುವನಂತಪುರ ಹೋಟೆಲ್​ವೊಂದರಲ್ಲಿ ಡಿಸೆಂಬರ್ 19 ರಂದು ಕೋಣೆ ಬಾಡಿಗೆ ಪಡೆದ ದಿಲೀಪ್ ಶಂಕರ್, ಒಳಗೆ ಹೋದ ಮೇಲೆ ಆಚೆಗೆ ಬಂದಿಲ್ಲ. ಅವರ ಸಹ ನಟ ಅನೇಕ ಬಾರಿ ಕಾಲ್ ಮಾಡಿದರೂ ಸಹ ಅವರು ಪ್ರತಿಕ್ರಿಯಿಸದೇ ಇದ್ದಾಗ ಹೋಟೆಲ್​ಗೆ ಬಂದು ವಿಚಾರಿಸಿದ್ದಾರೆ. ಹೋಟೆಲ್ ಸಿಬ್ಬಂದಿ ರೂಮ್​ನ ಬಾಗಿಲು ತೆಗೆದು ನೋಡಿದಾಗ ದಿಲೀಪ್ ಶಂಕರ್ ಸಾವಿಗೆ ಶರಣಾಗಿದ್ದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ಖ್ಯಾತ ನಟಿ ಊರ್ಮಿಳಾ ಕಾರು ಭೀಕರ ಅಪಘಾತ; ಕಾರಣವೇನು?
ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ದಿಲೀಪ್​ ಪಂಚಾಗ್ನಿ ಎಂಬ ಟೆಲಿವಿಜನ್ ಸಿರೀಸ್​ನ ಶೂಟಿಂಗೆ ಎಂದು ತಿರುವನಂತಪುರಂಗೆ ಬಂದಿದ್ದರು. ಹೀಗಾಗಿ ಇಲ್ಲಿ ರೂಮ್ ಪಡೆದಿದ್ದರು. ಅದು ಮಾತ್ರವಲ್ಲ ಅವರಿಗೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಇದ್ದವು ಎಂದು ಶೋನ ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ:ತನ್ನ ಮನದ ನೋವು ಹಂಚಿಕೊಂಡ ಶಿವಣ್ಣ, ಗೀತಾ ಶಿವರಾಜ್‌ಕುಮಾರ್; ಭಾವುಕ ಪೋಸ್ಟ್ ಮನ ಮಿಡಿದಿದೆ
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.ವಿಧಿ ವಿಜ್ಞಾನದ ತಂಡ ಹೋಟೆಲ್​ನ ರೂಮ್​ನ್ನು ಪರಿಶೀಲನೆ ನಡೆಸಿದೆ. ಪೊಲೀಸರು ಹೇಳುವ ಪ್ರಕಾರ ಸದ್ಯ ಮೇಲ್ನೋಟಕ್ಕೆ ದಿಲೀಪ್ ಅವರದ್ದ ಅಸಹಜ ಸಾವು ಎನ್ನಿಸುವಂತದ್ದು ಏನು ಕಂಡು ಬಂದಿಲ್ಲ. ಪೋಸ್ಟ್ ಮಾರ್ಟಮ್ ವರದಿ ಬಂದ ಬಳಿಕವಷ್ಟೇ ಸಾವು ಹೇಗಾಗಿದೆ ಎಂಬುದು ತಿಳಿದು ಬರಲಿದೆ ಎಂದು ಹೇಳಿದ್ದಾರೆ. ಎರ್ನಾಕೂಲಂ ಮೂಲದವರಾದ ದಿಲೀಪ್ ಶಂಕರ್ ಹಲವು ಹೆಸರಾಂತ ಮಲೆಯಾಳಿ ಧಾರವಾಹಿಗಳಲ್ಲಿ ನಟಿಸಿದ್ದರು. ಅಮ್ಮಾ ಇರೈತೆ, ಪಂಚಾಗ್ನಿ ಹಾಗೂ ಸುಂದರಿ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us