/newsfirstlive-kannada/media/post_attachments/wp-content/uploads/2025/07/TAMIL-NAADU-1.jpg)
ತಮಿಳುನಾಡಿನ ಥಿರುಪ್ಪುವನಮ್ ಪೊಲೀಸ್ ಠಾಣೆಯಲ್ಲಿ (Thiruppuvanam police station) ನಡೆದಿರುವ ಲಾಕಪ್ ಡೆತ್ ಪ್ರಕರಣವು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದೀಗ 27 ವರ್ಷದ ದೇಗುಲದ ಸೆಕ್ಯೂರಿಟಿ ಗಾರ್ಡ್ ಅಜಿತ್ ಕುಮಾರ್ ಪ್ರಕರಣವನ್ನು ಮುಖ್ಯಮಂತ್ರಿ ಸ್ಟಾಲಿನ್ ಅವರು ಸಿಬಿಐ ತನಿಖೆಗೆ ಹಸ್ತಾಂತರ ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ನಡೆದಿರುವ ಅಮಾನವೀಯ ಪ್ರಕರಣಕ್ಕೆ ಬೇಸರ ವ್ಯಕ್ತಪಡಿಸಿರುವ ಸ್ಟಾಲಿನ್, ಇದು ಯಾರಿಂದಲೂ ಸಮರ್ಥಿಸಲಾಗದ ಮತ್ತು ಕ್ಷಮಿಸಲಾಗದ ಕೃತ್ಯ ಇದಾಗಿದೆ ಎಂದಿದ್ದಾರೆ. ಪ್ರಕರಣದಲ್ಲಿ ಐವರು ಪೊಲೀಸನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ಇದರ ಸತ್ಯಾಸತ್ಯತೆ ಹೊರ ಬರಲು ಸಿಬಿಐ ತನಿಖೆಗೆ ವರ್ಗಾವಣೆ ಮಾಡುತ್ತಿರೋದಾಗಿ ತಿಳಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ಇದೊಂದು ಕ್ರೂರ ಕೃತ್ಯ. ರಾಜ್ಯವು ತನ್ನದೇ ನಾಗರಿಕನನ್ನು ಬರ್ಬರವಾಗಿ ಕೊಂದಿದೆ ಎಂದು ಗರಂ ಆದ ಬೆನ್ನಲ್ಲೇ ಸರ್ಕಾರದಿಂದ ಇಂಥ ಆದೇಶ ಹೊರಬಿದ್ದಿದೆ.
ಇದನ್ನೂ ಓದಿ: RCB ಸ್ಟಾರ್ ದಯಾಳ್ ಜೊತೆಗಿನ ವಿಡಿಯೋ ಕರೆಯ ಸ್ಕ್ರೀನ್ಶಾಟ್ ಹಂಚಿಕೊಂಡ ಸಂತ್ರಸ್ತೆ.. ಚಾಟ್ ಕೂಡ ವೈರಲ್
ಏನಿದು ಪ್ರಕರಣ..?
ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತಿರುಪುವನಮ್ನ ಮದುಪುರಂನಲ್ಲಿ ಬದ್ರಕಾಳಿ ಅಮ್ಮನ ದೇಗುಲವಿದೆ. ದೇವರ ಆಶೀರ್ವಾದ ಪಡೆಯು ಶಿವಕಾಮಿ ಎಂಬ ಮಹಿಳೆ ಮಗಳು ನಿಖಿತಾ ಜೊತೆದೇವಸ್ಥಾನಕ್ಕೆ ಬಂದಿದ್ದಳು. ಈ ವೇಳೆ ಕಾರು ನಿಲ್ಲಿಸಲು ದೇಗುಲದ ತಾತ್ಕಾಲಿಕ ಸೆಕ್ಯೂರಿಟಿ ಗಾರ್ಡ್ ಅಜಿತ್ಗೆ ಮನವಿ ಮಾಡಿಕೊಂಡು ಕಾರಿನ ಕೀ ಆತನ ಕೈಗೆ ನೀಡುತ್ತಾಳೆ.
ವಾಪಸ್ ಆಗುವ ವೇಳೆ ನಿಖಿತಾ 10 ತೊಲೆ ಚಿನ್ನದ ಸರ ನಾಪತ್ತೆ ಆಗಿರೋದನ್ನು ಗಮನಿಸುತ್ತಾಳೆ. ಕೂಡಲೇ ಅವರು ತಿರುಪುವನಮ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟು ಬರುತ್ತಾರೆ.
ಬೆನ್ನಲ್ಲೇ ಅಜಿತ್ ಕುಮಾರ್ನನ್ನು ಜೂನ್ 27 ರಂದು ಪೊಲೀಸರು ವಿಚಾರಣೆಗೆ ಕರೆದು, ಮನೆಗೆ ವಾಪಸ್ ಕಳುಹಿಸುತ್ತಾರೆ. ಜೂನ್ 28 ರಂದು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅಜಿತ್ ಕುಮಾರ್ಗೆ ಹಿಗ್ಗಾಮುಗ್ಗಾ ಥಳಿಸಿ ಹಿಂಸೆ ನೀಡಿದ್ದಾರೆ. ಇದರಿಂದ ಅಜಿತ್ ಕುಮಾರ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಅನ್ನೋದು ಆರೋಪ. ಪ್ರಕರಣ ಸಂಬಂಧ 7 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಹೇಗೆ ಸಾಯಿಸಿದರು..?
ಮರಣೋತ್ತರ ಪರೀಕ್ಷೆಯಲ್ಲಿ ಅಜಿತ್ ಕುಮಾರ್ ದೇಹದ ಮೇಲೆ ಬರೋಬ್ಬರಿ 44 ಗಾಯಗಳು ಪತ್ತೆಯಾಗಿವೆ. ಪೊಲೀಸರು ಆರೋಪಿಯ ಬೆನ್ನಿಗೆ, ಬಾಯಿಗೆ ಹಾಗೂ ಕಿವಿಗೆ ಮೆಣಸಿನಪುಡಿ ಹಾಕಿರೋದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ನೋಡಿದ ನ್ಯಾಯಮೂರ್ತಿಗಳು, ಸಾಮಾನ್ಯ ಕೊಲೆಗಾರ ಕೂಡ ಇಷ್ಟೊಂದು ಚಿತ್ರ ಹಿಂಸೆ ನೀಡಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮೊಹ್ಮದ್ ಶಮಿಗೆ ಹೈಕೋರ್ಟ್ನಲ್ಲಿ ಹಿನ್ನಡೆ.. ಪತ್ನಿ, ಮಗಳಿಗೆ ಜೀವನಾಂಶದ ಒಟ್ಟು ಮೊತ್ತ ಕೇಳಿ ದಂಗು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ