/newsfirstlive-kannada/media/post_attachments/wp-content/uploads/2025/03/TANISHKA-JEWELLERY.jpg)
ದರೋಡೆಕೋರರ ಗುಂಪೊಂದು ತನಿಷ್ಕಾ ಶೋರೂಂಗೆ ನುಗ್ಗಿ ಸಿಬ್ಬಂದಿ ಹಾಗೂ ಗ್ರಾಹಕರನ್ನು ಗನ್ ಪಾಯಿಂಟ್ನಲ್ಲಿಟ್ಟು 25 ಲಕ್ಷದ ಚಿನ್ನಾಭರವಣವನ್ನು ದೋಚಿ ಸಿನಿಮಿಯ ರೀತಿಯಲ್ಲಿ ಎಸ್ಕೇಪ್ ಆದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಒಂದು ಘಟನೆ ಬಿಹಾರದ ಅರಾ ಎಂಬಲ್ಲಿ ನಡೆದಿದೆ. ಹೀಗೆ ಚಿನ್ನಾಭರಣ ದೋಚಿಕೊಂಡು ದರೋಡೆಕೋರರು ಅವರನ್ನು ಹಿಡಿಯಲು ಹಿಂದೆ ಬಿದ್ದ ಪೊಲೀಸರೊಂದಿಗೆ ಗುಂಡಿನ ಚಕಮಕಿ ಮಾಡಿದ್ದಾರೆ. ಈ ಎನ್ಕೌಂಟರ್ನಲ್ಲಿ ಇಬ್ಬರು ಕ್ರಿಮಿನಲ್ಗಳು ಗಾಯಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ. ಶೋರೂಂ ಓಪನ್ ಆದ ವೇಳೆ ಕೆಲವು ಗ್ರಾಹಕರು ಹಾಗೂ ಒಂದಿಷ್ಟು ಸಿಬ್ಬಂದಿಗಳು ಸೇರಿದ್ದರು. ಐದರಿಂದ ಆರು ಜನರು ಮುಖಕ್ಕೆ ಮಾಸ್ಕ್ ಮತ್ತು ಹೆಲ್ಮೆಟ್ ಹಾಕಿಕೊಂಡು ಶೋರೂಂಗೆ ನುಗ್ಗಿದ್ದಾರೆ. ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ಗುಂಪು. ಅಲ್ಲಿರುವ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಕೈ ಮೇಲೆತ್ತಿಕೊಂಡು ಇರಲು ಧಮ್ಕಿ ಹಾಕಿದ್ದಾರೆ.
25 करोड़ की लूट।
बिहार के आरा के "तनिष्क " शोरूम में इस बड़ी लूट को अंजाम दिया गया।#तनिष्क#tanishqpic.twitter.com/0tjOGxgIOD— Ravindra Singh Sheoran (@TellingRavindra)
25 करोड़ की लूट।
बिहार के आरा के "तनिष्क " शोरूम में इस बड़ी लूट को अंजाम दिया गया।#तनिष्क#tanishqpic.twitter.com/0tjOGxgIOD— Ravindra Singh Sheoran (@TellingRavindra) March 10, 2025
">March 10, 2025
ದರೋಡೆಕೋರರರು ಶೋಕೇಸ್ನಲ್ಲಿರುವ ಚಿನ್ನಾಭರಣದ ಬಾಕ್ಸ್ಗಳನ್ನು ತಮ್ಮ ಬ್ಯಾಗ್ಗೆ ತುಂಬಿಕೊಳ್ಳುತ್ತಿರುವಾಗ. ಶೋರೂಂನ ಸಿಬ್ಬಂದಿಯೊಬ್ಬರು ಆ ಸುಮ್ಮನೆ ನೆಡದುಕೊಂಡು ಹೋಗಿದ್ದಾರೆ. ಹಾಗೆ ಬಂದ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದೆ ದರೋಡೆಕೋರರರ ಗ್ಯಾಂಗ್. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇನ್ನು ಶೋರೂಂ ಸೆಕ್ಯೂರಿಟಿ ಗಾರ್ಡ್ನ ಕೈಯಲ್ಲಿದ್ದ ಗನ್ನ್ನು ಕೂಡ ಕಿರಾತಕರು ತಮ್ಮ ವಶಕ್ಕೆ ಪಡೆದುಕೊಂಡು ಅಲ್ಲಿದ್ದವರನ್ನೆಲ್ಲಾ ಗನ್ ಪಾಯಿಂಟ್ನಲ್ಲಿಟ್ಟು ಹೆದರಿಸಿ 25 ಲಕ್ಷದ ಚಿನ್ನಾಭರಣ ದೋಚಿದ್ದಾರೆ.
ಇದನ್ನೂ ಓದಿ:ಓಪನ್ ಪ್ಲೇಸ್‌ನಲ್ಲಿ ಮಾಡೆಲ್ಗಳ ವಯ್ಯಾರಕ್ಕೆ ಬೆಚ್ಚಿ ಬಿದ್ದ ಕಾಶ್ಮೀರ! ಫ್ಯಾಷನ್ ಶೋಗೆ ವಿರೋಧ ಯಾಕೆ?
ತನಿಷ್ಕಾ ಶೋರೂಂನಿಂದ ಪೊಲೀಸ್ ಠಾಣೆ ಕೇವಲ 600 ಮೀಟರ್ ದೂರದಲ್ಲಿದೆ. 20 ರಿಂದ 30 ಬಾರಿ ಕಾಲ್ ಮಾಡಿದರು ಅವರು ಈ ಕಡೆ ಸುಳಿಯಲಿಲ್ಲ. ಅರ್ಧ ಗಂಟೆಯ ಮೇಲೆ ಶೋರೂಂಗೆ ಬಂದರು. ಅಷ್ಟರಲ್ಲಿ ರಾಬರ್ಸ್ ಎಸ್ಕೇಪ್ ಆಗಿದ್ದರು ಎಂದು ಶೋರೂಂನ ಸಿಬ್ಬಂದಿ ಸಿಮ್ರನ್ ಹೇಳಿದ್ದಾರೆ.
ಇದನ್ನೂ ಓದಿ: Gold rate: ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆ ಆಗಿವೆ.. ಇತ್ತೀಚೆಗಿನ ದರ ಎಷ್ಟಿದೆ..?
ಸದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಕಿರಾತಕರು ಅರಾ ಪೊಲೀಸರ ಎನ್ಕೌಂಟರ್ನಲ್ಲಿ ಗಾಯಗೊಡಿದ್ದಾರೆ. ಇನ್ನುಳಿದವರನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಂಡು ಹಿಡಿಯಲಾಗುವುದು ಸದ್ಯದಲ್ಲಿಯೇ ಅವರನ್ನು ಕೂಡ ಬಂಧಿಸಲಾಗುವುದು ಎಂದು ಭೋಜಪುರ್ದ ಎಸ್ಪಿ ರಾಜ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ