/newsfirstlive-kannada/media/post_attachments/wp-content/uploads/2024/06/renukaswami2-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ದಿನಕಳೆದಂತೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಎ1, ದರ್ಶನ್​ ಎ2 ಆರೋಪಿಗಳಾಗಿದ್ದಾರೆ. ಪ್ರತಿ ದಿನವೂ ಪೊಲೀಸ್​ ಅಧಿಕಾರಿಗಳು ಈ ಕೇಸ್​ ಸಂಬಂಧ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ವಿವಿಧ ಸ್ಥಳಗಳಲ್ಲಿ ಆರೋಪಿಗಳನ್ನು ಕರೆದುಕೊಂಡು ಹೋಗಿ ಮಹಜರು ಮಾಡಲಾಗುತ್ತಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆದರೆ ಈಗ ದರ್ಶನ್ ಅಂಡ್​ ಗ್ಯಾಂಗ್​ನ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಮೇಲೆ ಡಿ ಗ್ಯಾಂಗ್ ಮನಸ್ಸಿಗ್ಗೆ ಬಂದ ರೀತಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಬೆನ್ನ ಮೇಲೆ ಬಾಸುಂಡೆ ಬರೋ ರೀತಿಯಲ್ಲಿ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಥಳಿಸಿದೆ. ಕಿವಿ ಕಟ್​ ಆಗಿದ್ದು, ಕೈ ಮೇಲೆ ಕರೆಂಟ್ ಶಾಕ್ ಕೊಟ್ಟು ಬಹಳ ಕ್ರೂರವಾಗಿ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರ ಪರಿಶೀಲನೆ ಮಾಡೋ ವೇಳೆ ಬೆಳಕಿಗೆ ಬಂದಿವೆ. ದರ್ಶನ್​ ಅಂಡ್​ ಗ್ಯಾಂಗ್​​ ರೇಣುಕಾಸ್ವಾಮಿ ಮೇಲೆ ರಾಕ್ಷರಂತೆ ದುಷ್ಕೃತ್ಯ ಎಸಗಿದ ಫೋಟೋಗಳನ್ನು ಪೊಲೀಸರು ಪರಿಶೀಲನೆ ವೇಳೆ ಕ್ಲಿಕ್ಕಿಸಿರೋ ಫೋಟೋಗಳು ನ್ಯೂಸ್​​ಫಸ್ಟ್​ಗೆ​​ ಪೊಲೀಸರ ಉನ್ನತ ಮೂಲಗಳಿಂದ ಲಭ್ಯವಾಗಿವೆ. ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆಯ ಫೋಟೋವನ್ನು ಹಾಕದ ಹಾಗೇ ಅಷ್ಟೂ ರಾಕ್ಷಸರ ಹಾಗೇ ಕೃತ್ಯ ಎಸಗಿದ್ದಾರೆ ದರ್ಶನ್​ ಗ್ಯಾಂಗ್​​.
ಏನಿದು ಕೇಸ್​?
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ. ಆತನಿಗೆ ಪಾಠ ಕಲಿಸಲು ದರ್ಶನ್​ ಮತ್ತು ಸಹಚರರು ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಪ್ರಕರಣದಲ್ಲಿ ಪವಿತ್ರ ಗೌಡ ಎ1 ದರ್ಶನ್​ ಎ2 ಆಗಿದ್ದಾರೆ. ಎಲ್ಲ ಪ್ರಮುಖ ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಹಾಗೂ ರೇಣುಕಾ ಸ್ವಾಮಿ ಕುಟುಂಬದವರಿಗೆ ನ್ಯಾಯ ಸಿಗಬೇಕು ಎಂದು ಅನೇಕ ಸೆಲೆಬ್ರಿಟಿಗಳು ಕೂಡ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ