Advertisment

ಅಬ್ಬಾ.. ದೇವರ ಅಬ್ಬರ ಹೀಗೂ ಉಂಟಾ; ಥಿಯೇಟರ್ ಮುಂದೆ JrNTR ಕಟೌಟ್‌ಗೆ ಬೆಂಕಿ! VIDEO

author-image
admin
Updated On
ಅಬ್ಬಾ.. ದೇವರ ಅಬ್ಬರ ಹೀಗೂ ಉಂಟಾ; ಥಿಯೇಟರ್ ಮುಂದೆ JrNTR ಕಟೌಟ್‌ಗೆ ಬೆಂಕಿ! VIDEO
Advertisment
  • 35 MM ಥಿಯೇಟರ್‌ ಮುಂದೆ ಅಭಿಮಾನಿಗಳು ಸೆಲೆಬ್ರೇಟ್‌ ಜೋರು
  • JrNTR ಹಾಗೂ ಕೊರಟಾಲ ಶಿವ ಕಾಂಬಿನೇಷನ್‌ಗೆ ಬಹುಪರಾಕ್!
  • ಮೊದಲ ದಿನವೇ ದೇಶಾದ್ಯಂತ ದೇವರ ದಾಖಲೆ ಮೊತ್ತದ ಕಲೆಕ್ಷನ್

ಜೂನಿಯರ್ NTR ಅಭಿನಯದ ಬಹುನಿರೀಕ್ಷಿತ ದೇವರ ಸಿನಿಮಾ ಇಂದು ಭರ್ಜರಿಯಾಗಿ ರಿಲೀಸ್ ಆಗಿದೆ. ಆಂಧ್ರ, ತೆಲಂಗಾಣ, ಬೆಂಗಳೂರು ಸೇರಿದಂತೆ ವಿಶ್ವಾದ್ಯಂತ ಮಧ್ಯರಾತ್ರಿಯಿಂದಲೇ ಮೊದಲ ಶೋ ಆರಂಭವಾಗಿದೆ. ದೇವರ ಸಿನಿಮಾಗೆ ಮೊದಲ ದಿನವೇ ಅಬ್ಬರದ ಓಪನಿಂಗ್ ಸಿಕ್ಕಿದ್ದು, JrNTR ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.

Advertisment

ಇದನ್ನೂ ಓದಿ: Devara: 75 ಕೋಟಿಗೂ ಮುಂಗಡ ಬುಕ್ಕಿಂಗ್.. ಬಾಕ್ಸ್​ ಆಫೀಸಿನಲ್ಲಿ ಧೂಳೆಬ್ಬಿಸುತ್ತಿರುವ ದೇವರ 

ದೇವರ ಹಿಟ್ ಜೋಡಿ JrNTR ಹಾಗೂ ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಬಿಗ್ ಬಜೆಟ್‌ ಸಿನಿಮಾ. ಜನತಾ ಗ್ಯಾರೇಜ್ ಬಳಿಕ ಮತ್ತೊಂದು ಹಿಟ್ ಸಿನಿಮಾಗೆ ಈ ಜೋಡಿ ಮತ್ತೆ ಒಂದಾಗಿದೆ.
ಹೈದರಾಬಾದ್‌ನಲ್ಲಿ ದೇವರ ಅಬ್ಬರವನ್ನು ಕಣ್ತುಂಬಿಕೊಂಡ JrNTR ಫ್ಯಾನ್ಸ್ ಭರ್ಜರಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹೈದರಾಬಾದ್‌ನ ಸುದರ್ಶನ 35 MM ಥಿಯೇಟರ್‌ನಲ್ಲಿ ಅಭಿಮಾನಿಗಳು ಸೆಲೆಬ್ರೇಟ್‌ ಮಾಡುವಾಗ ಅವಘಡ ಸಂಭವಿಸಿದೆ.

publive-image

ಥಿಯೇಟರ್ ಮುಂದೆ ಜೂನಿಯರ್ ಎನ್‌ಟಿಆರ್ ಕಟೌಟ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಬೂದಿಯಾಗಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಪಡುವಾಗ ಜೂನಿಯರ್ ಎನ್‌ಟಿಆರ್ ಕಟೌಟ್‌ಗೆ ಬೆಂಕಿ ಬಿದ್ದಿದೆ. ಕಟೌಟ್ ಹೊತ್ತಿ ಉರಿಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisment


">September 27, 2024


ಹೈದರಾಬಾದ್‌ನ ಹಿಮ್ಮಾಯತ್‌ ನಗರದಲ್ಲಿರುವ ಸುದರ್ಶನ 35 ಎಂಎಂ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ಆಕಸ್ಮಿಕ ಬೆಂಕಿಯಿಂದ ಜೂನಿಯರ್ ಎನ್‌ಟಿಆರ್ ಕಟೌಟ್‌ ಹೊತ್ತಿ ಉರಿದಿದ್ದರು ಅಭಿಮಾನಿಗಳ ಸೆಲೆಬ್ರೇಷನ್ ನಿಂತಿಲ್ಲ.

ದೇವರಗೆ ಗ್ರ್ಯಾಂಡ್ ಓಪನಿಂಗ್, ಭರ್ಜರಿ ಕಲೆಕ್ಷನ್!
ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಭರ್ಜರಿ ಓಪನಿಂಗ್ ಪಡೆದಿದೆ. ರಾಜ್ಯದಲ್ಲೂ ನೂರಾರು ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿದೆ. ಬಹುತೇಕ ಥಿಯೇಟರ್‌ಗಳು ಹೌಸ್ ಫುಲ್ ಆಗಿದ್ದು, ಟಿಕೆಟ್‌ಗಳಿಗೆ ಭಾರೀ ಬೇಡಿಕೆ ಇದೆ. ಬಾಕ್ಸ್ ಆಫೀಸ್‌ ವಿಚಾರದಲ್ಲಿ ದೇವರ ಮೊದಲ ದಿನವೇ ದಾಖಲೆ ಮೊತ್ತದ ಕಲೆಕ್ಷನ್ ಆಗುವ ಸಾಧ್ಯತೆ ಹೆಚ್ಚಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment