CWC ಅಲ್ಲಿ ವಿವಿಧ ಹುದ್ದೆಗಳು ಖಾಲಿ ಖಾಲಿ.. 150ಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಆಹ್ವಾನ

author-image
Bheemappa
Updated On
250ಕ್ಕೂ ಹೆಚ್ಚು ಉದ್ಯೋಗಗಳು.. GAIL ಸಂಸ್ಥೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ಯಾವುದು?
Advertisment
  • ಆಯ್ಕೆ ಆದ ಅಭ್ಯರ್ಥಿಗಳಿಗೆ ಉತ್ತಮ ಮಟ್ಟದಲ್ಲಿ ತಿಂಗಳ ಸಂಬಳ
  • ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿ ಇದೆ
  • ಅರ್ಜಿ ಆರಂಭ ಮಾಡಿದ ಇಲಾಖೆ, ಕೂಡಲೇ ಅರ್ಜಿ ಸಲ್ಲಿಕೆ ಮಾಡಿ

ಹೊಸ ಹುದ್ದೆಗಳ ನೇಮಕಾತಿ ಮಾಡಲು ಕೇಂದ್ರೀಯ ಉಗ್ರಾಣ ನಿಗಮ (ಸಿಡಬ್ಲುಸಿ) ಅಧಿಸೂಚನೆ ಬಿಡುಗಡೆ ಮಾಡಿದೆ. ವಿವಿಧ ಉದ್ಯೋಗಗಳು ಇಲಾಖೆಯಲ್ಲಿ ಖಾಲಿ ಇದ್ದು ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಕೇಂದ್ರ ಸರ್ಕಾರದಡಿ ಬರುವ ಹುದ್ದೆಗಳು ಆಗಿದ್ದರಿಂದ ಆಯ್ಕೆ ಆದ ಅಭ್ಯರ್ಥಿಗಳು ಉತ್ತಮ ಮಟ್ಟದ ಸಂಬಳ, ಭತ್ಯೆಗಳನ್ನು ನಿರೀಕ್ಷಿಸಬಹುದು.

ಕೇಂದ್ರೀಯ ಉಗ್ರಾಣ ನಿಗಮವೂ ಆನ್‌ಲೈನ್ ಅಪ್ಲಿಕೆಶನ್ ಲಿಂಕ್ ಅನ್ನು ಅಧಿಕೃತ ವೆಬ್‌ಸೈಟ್​ನಲ್ಲಿ ನೀಡಿದೆ. www.cewacor.nic.in. ಈ ಲಿಂಕ್ ಮೂಲಕ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾವ ಯಾವ ಹುದ್ದೆಗೆ ಎಷ್ಟೇಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತೆ, ಅರ್ಜಿ ಶುಲ್ಕ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕದ ಮಾಹಿತಿ ಇದೆ.

ತಿಂಗಳ ಸಂಬಳ ಹೇಗಿದೆ..?

29,000- 93,000 ರೂಪಾಯಿ
40,000- 1,40,000 ರೂಪಾಯಿ
60,000- 1,80,000 ರೂಪಾಯಿ

ಉದ್ಯೋಗಗಳ ಹೆಸರು

ಮ್ಯಾನೇಜ್‌ಮೆಂಟ್ ಟ್ರೈನಿ, ಅಕೌಂಟೆಂಟ್, ಸೂಪರಿಂಟೆಂಡೆಂಟ್ ಮತ್ತು ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್‌ ಹುದ್ದೆಗಳು

ಒಟ್ಟು ಉದ್ಯೋಗಗಳು- 179

publive-image

ಇದನ್ನೂ ಓದಿ:ಅಬಕಾರಿ ಇಲಾಖೆಯ 1,000ಕ್ಕೂ ಅಧಿಕ ಉದ್ಯೋಗಗಳ ನೇಮಕಕ್ಕೆ ಅನುಮತಿ.. PUC ಓದಿದವರಿಗೂ ಚಾನ್ಸ್

ವಯಸ್ಸಿನ ಮಿತಿ- 28 ರಿಂದ 30 ವರ್ಷದವರಿಗೆ ಅವಕಾಶ

ಅರ್ಜಿ ಶುಲ್ಕ ಎಷ್ಟು ಇದೆ..?

ಎಸ್​​ಸಿ, ಎಸ್​ಟಿ ಅಭ್ಯರ್ಥಿಗಳು- 500 ರೂಪಾಯಿ

EWS, OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು- 1,350 ರೂಪಾಯಿ

ಹುದ್ದೆಗೆ ತಕ್ಕಂತೆ ಎಷ್ಟು ಕೆಲಸ ಖಾಲಿ ಇವೆ?

  • ಮ್ಯಾನೇಜ್‌ಮೆಂಟ್ ಟ್ರೈನಿ (ಜನರಲ್)- 40
  • ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಷಿಯನ್)- 13
  • ಅಕೌಂಟೆಂಟ್- 09
  • ಸೂಪರಿಂಟೆಂಡೆಂಟ್- 22
  • ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್‌- 81
  • ಸೂಪರಿಂಟೆಂಡೆಂಟ್- (G)- SRD (NE)- 02
  • ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್‌ SRD (NE)- 10
  • ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್‌ SRD (UT of Ladakh)- 02

ಆಯ್ಕೆ ಪ್ರಕ್ರಿಯೆ

  • ಆನ್​ಲೈನ್ ಟೆಸ್ಟ್
  • ದಾಖಲೆ ಪರಿಶೀಲನೆ
  • ಸಂದರ್ಶನ

ಶೈಕ್ಷಣಿಕ ಅರ್ಹತೆ

  • ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಪದವಿ
  • ಕೃಷಿ ವಿಭಾಗದಲ್ಲಿ ಪದವಿ (ಜೂವಲಾಜಿ, ಕೆಮಿಸ್ಟ್ರಿ, ಮೈಕ್ರೋ ಬಯಲಾಜಿ, ಎಂಟಮಲಾಜಿ, ಬಯೋ ಕೆಮಿಸ್ಟ್ರಿ)
  • ಬಿಕಾಮ್, ಬಿಎ
  • ಸ್ನಾತಕೋತ್ತರ ಪದವಿ

ಅತಿ ಮುಖ್ಯ ದಿನಾಂಕಗಳು

ನೋಟಿಫಿಕೆಶನ್ ರಿಲೀಸ್ ಮಾಡಿದ ದಿನಾಂಕ- 14 ಡಿಸೆಂಬರ್ 2024
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 12 ಜನವರಿ 2025

ಈ ಲಿಂಕ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು- http://www.cewacor.nic.in

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment