/newsfirstlive-kannada/media/post_attachments/wp-content/uploads/2024/12/JOB_CWC.jpg)
ಕೇಂದ್ರೀಯ ಉಗ್ರಾಣ ನಿಗಮ (ಸಿಡಬ್ಲುಸಿ)ವು ಹೊಸ ಹುದ್ದೆಗಳನ್ನು ನೇಮಕಾತಿ ಮಾಡಲು ನೋಟಿಫಿಕೆಶನ್ ರಿಲೀಸ್ ಮಾಡಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ವಿವಿಧ ಹುದ್ದೆಗಳನ್ನು ಇಲಾಖೆ ತುಂಬುತ್ತಿದ್ದು ಆಯ್ಕೆ ಆದವರನ್ನು ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಕ್ಕೆ ನೇಮಕ ಮಾಡಲಾಗುತ್ತದೆ.
ಹುದ್ದೆಗಳ ವಿವರ ಇರುವ ಮಾಹಿತಿಯನ್ನು ಡಿಸೆಂಬರ್ 14 ರಂದು ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಷನ್ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕವನ್ನು ತಿಳಿಸಲಾಗಿದೆ. ಯಾವ್ಯಾವ ಹುದ್ದೆಗೆ ಎಷ್ಟೇಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು ಎನ್ನುವ ಮಾಹಿತಿ ಇಲ್ಲಿದೆ. ಅಲ್ಲದೇ ಅರ್ಜಿ ಶುಲ್ಕ, ವಿದ್ಯಾರ್ಹತೆ ಸೇರಿ ಇತರೆ ಮಾಹಿತಿ ಇದು ಒಳಗೊಂಡಿದೆ.
ಹುದ್ದೆಗಳ ಹೆಸರು- ಮ್ಯಾನೇಜ್‌ಮೆಂಟ್ ಟ್ರೈನಿ, ಅಕೌಂಟೆಂಟ್, ಸೂಪರಿಂಟೆಂಡೆಂಟ್ ಮತ್ತು ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳು
ಒಟ್ಟು ಉದ್ಯೋಗಗಳು- 179
ಹುದ್ದೆಗಳಿಗೆ ತಕ್ಕಂತೆ ವೇತನ ಶ್ರೇಣಿ ಹೇಗಿದೆ..?
29,000- 93,000 ರೂಪಾಯಿಗಳು
40,000- 1,40,000 ರೂಪಾಯಿಗಳು
60,000- 1,80,000 ರೂಪಾಯಿಗಳು
ಹುದ್ದೆಯ ಹೆಸರು ಹಾಗೂ ಎಷ್ಟು ಹುದ್ದೆಗಳು?
ಮ್ಯಾನೇಜ್‌ಮೆಂಟ್ ಟ್ರೈನಿ (ಜನರಲ್)- 40
ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಷಿಯನ್)- 13
ಅಕೌಂಟೆಂಟ್- 09
ಸೂಪರಿಂಟೆಂಡೆಂಟ್- 22
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- 81
ಸೂಪರಿಂಟೆಂಡೆಂಟ್- (G)- SRD (NE)- 02
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ SRD (NE)- 10
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ SRD (UT of Ladakh)- 02
ಇದನ್ನೂ ಓದಿ: BSFನಲ್ಲಿ ಅನುಭವಸ್ಥರಿಗೆ ಉದ್ಯೋಗ ಅವಕಾಶ.. ಮಾಸಿಕ ವೇತನ ಶ್ರೇಣಿ 85,000 ರೂಪಾಯಿ
ವಯಸ್ಸಿನ ಮಿತಿ- 28 ರಿಂದ 30 ವರ್ಷದವರಿಗೆ ಅವಕಾಶ
ಅರ್ಜಿ ಶುಲ್ಕ ಎಷ್ಟು ಇದೆ..?
EWS, OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು- 1,350 ರೂಪಾಯಿ
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- 500 ರೂಪಾಯಿ
ಆಯ್ಕೆ ಪ್ರಕ್ರಿಯೆ
- ಆನ್ಲೈನ್ ಟೆಸ್ಟ್
- ದಾಖಲೆ ಪರಿಶೀಲನೆ
- ಸಂದರ್ಶನ
ಶೈಕ್ಷಣಿಕ ಅರ್ಹತೆ ಏನಿದೆ?
- ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಪದವಿ
- ಕೃಷಿ ವಿಭಾಗದಲ್ಲಿ ಪದವಿ (ಜೂವಲಾಜಿ, ಕೆಮಿಸ್ಟ್ರಿ, ಮೈಕ್ರೋ ಬಯಲಾಜಿ, ಎಂಟಮಲಾಜಿ, ಬಯೋ ಕೆಮಿಸ್ಟ್ರಿ)
- ಬಿಕಾಮ್, ಬಿಎ
- ಸ್ನಾತಕೋತ್ತರ ಪದವಿ
ಇಂಪಾರ್ಟೆಂಟ್ ದಿನಾಂಕಗಳು
ನೋಟಿಫಿಕೆಶನ್ ರಿಲೀಸ್ ಮಾಡಿದ ದಿನಾಂಕ- 14 ಡಿಸೆಂಬರ್ 2024
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- 14 ಡಿಸೆಂಬರ್ 2024
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 12 ಜನವರಿ 2025
ಅಭ್ಯರ್ಥಿಗಳು ಈ ಲಿಂಕ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು- www.cewacor.nic.in
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ