/newsfirstlive-kannada/media/post_attachments/wp-content/uploads/2023/12/CYBER_CRIME_1.jpg)
ವಂಚನೆಯ ವಿಧಾನದಲ್ಲಿ ಅಪ್ಡೇಟ್ ಆಗಿರುವ ಖದೀಮರು. ಸೈಬರ್ ಕಳ್ಳರು ಮತ್ತೊಂದು ಹಾದಿ ಕಂಡುಕೊಂಡಿದ್ದಾರೆ. ನೀವೇನಾದರೂ ಸೋಶಿಯಲ್ ಮೀಡಿಯಾ ಯೂಸ್ ಮಾಡುವವರಾಗಿದ್ದರೆ, ಮೊಬೈಲ್ನಲ್ಲಿ ಸ್ಕ್ರಾಲ್ ಮಾಡುವ ಮುನ್ನ ಹುಷಾರಾಗಿರಿ. ಯಾಕೆಂದರೆ ಒಂದೇ ಒಂದು ಕ್ಲಿಕ್ಗೆ ಮುಂಬೈನ ವ್ಯಕ್ತಿ ಐಟಿ ಉದ್ಯೋಗಿ ಒಬ್ಬರು ಬರೋಬ್ಬರಿ 1.6 ಕೋಟಿ ರೂಪಾಯಿ ಹಣವನ್ನು ಕಳ್ಕೊಂಡಿದ್ದಾರೆ!
ವಂಚನೆ ಆಗಿದ್ದು ಹೇಗೆ?
ವಂಚನೆಗೆ ಬಲಿಯಾದ ಸಂತ್ರಸ್ತೆ ಇಂಟರ್ನೆಟ್ ಬ್ರೌಸ್ ಮಾಡ್ತಿದ್ದರು. ಅಲ್ಲಿ ಷೇರು ಮಾರುಕಟ್ಟೆ ಹೂಡಿಕೆಗಳನ್ನು ಉತ್ತೇಜಿಸುವ ಜಾಹೀರಾತು ನೋಡಿದರು. ಜಾಹೀರಾತು ಹೂಡಿಕೆಯ ಮೇಲೆ ಗಣನೀಯ ಲಾಭದ ಭರವಸೆ ನೀಡ್ತಿತ್ತು. ಇದು ಅವರ ಆಸಕ್ತಿಯನ್ನು ಕೆರಳಿಸಿತು. ಹಾಗಾಗಿ ಜಾಹೀರಾತಿನ ಅಡಿಯಲ್ಲಿರುವ ಲಿಂಕ್ ಕ್ಲಿಕ್ ಮಾಡಿದರು. ಲಿಂಕ್ ಕ್ಲಿಕ್ ಮಾಡಿದ ತಕ್ಷಣ, 125 ಸದಸ್ಯರನ್ನು ಹೊಂದಿರುವ ವಾಟ್ಸ್ಆ್ಯಪ್ ಗುಂಪಿಗೆ ಸೇರಿಸಲಾಯಿತು. ಇಲ್ಲಿ ತಜ್ಞರು ನೀಡಿದ ಸಲಹೆಯಿಂದ ಅನೇಕ ಸದಸ್ಯರು ಗಮನಾರ್ಹ ಲಾಭ ಗಳಿಸಿದ್ದಾರೆ ಎಂದು ಕಿಡಿಗೇಡಿಗಳು ವಿವರಿಸಿದರು.
ಇದು ಹೌದೆಂದು ನಂಬಿದ ಸಂತ್ರಸ್ತೆ ತಮ್ಮ ಖಾತೆಯ ವಿವರವನ್ನು WhatsApp ಗ್ರೂಪ್ಗೆ ಹಂಚಿಕೊಂಡಿದ್ದಾರೆ. ಕೊನೆಗೆ ಕಾನೂನು ಬದ್ಧವಾಗಿರುವ ಮಾರ್ಕೆಟಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿದರು. ಹಾಗೆ ಮಾಡಿದರು. ಆಗಸ್ಟ್ 16 ರಿಂದ ಆಗಸ್ಟ್ 20 ರವರ ಅವಧಿಯಲ್ಲಿ 1.6 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಮೇಲೆ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಅಲ್ಲದೇ ಹಣವನ್ನು ವಾಪಸ್ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ವಿಫಲವಾಗಿದೆ. ನೀವು ಯಾಮಾರಬಹುದು ಹುಷಾರಾಗಿರಿ!
ಇದನ್ನೂ ಓದಿ:ರೋಹಿತ್ ಶರ್ಮಾ ಅಬ್ಬರ; ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ