GHIBLI ಮಾಯೆಗೆ ನೀವು ಮರುಳಾದ್ರಾ? ಇದು ಒಳ್ಳೇದಾ.. ಕೆಟ್ಟದ್ದಾ? ಸೈಬರ್ ಎಕ್ಸ್​​ಪರ್ಟ್​ಗಳ ಎಚ್ಚರಿಕೆ!

author-image
admin
Updated On
GHIBLI ಮಾಯೆಗೆ ನೀವು ಮರುಳಾದ್ರಾ? ಇದು ಒಳ್ಳೇದಾ.. ಕೆಟ್ಟದ್ದಾ? ಸೈಬರ್ ಎಕ್ಸ್​​ಪರ್ಟ್​ಗಳ ಎಚ್ಚರಿಕೆ!
Advertisment
  • GHIBLI ಒಳ್ಳೇದಾ.. ಕೆಟ್ಟದ್ದಾ..? ಎಕ್ಸ್​​ಪರ್ಟ್​ಗಳ ವಾರ್ನಿಂಗ್‌ ಏನು?
  • ಓಪನ್ AIನಿಂದ ಸೃಷ್ಠಿಯಾಗಿರೋ GHIBLI ಫೋಟೋ ಆತಂಕ
  • ನಿಮ್ಮ ಡೇಟಾ.. ಪರ್ಸನಲ್ ಮಾಹಿತಿ ಲೀಕ್ ಆಗೋ ಸಾಧ್ಯತೆ ಇದ್ಯಾ?

ಘಿಬ್ಲಿ.. ಘಿಬ್ಲಿ.. ಘಿಬ್ಲಿ.. ಇದೊಂಥರ ಟ್ರೆಂಡ್ ಆಗೋಗಿದೆ. ಯಾರು ನೋಡಿದ್ರೂ ಈ ಘಿಬ್ಲಿ ಬಗ್ಗೆನೇ ಮಾತಾಡ್ತಿದ್ದಾರೆ. ಕಿಕ್ ಹೊಡಿಯೋ ನಶೆ ಥರ ಘಿಬ್ಲಿ ಫೋಟೋಗೆ ಅಡಿಕ್ಟ್ ಆಗ್ತಿದ್ದಾರೆ. ನೀವು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಈ ಘಿಬ್ಲಿ ಫೋಟೋಗಳನ್ನ ನೋಡ್ತಿರಬಹುದು.

ಜೊತೆಗೆ ನಿಮ್ಮ ಅಸಲಿ ಫೋಟೋನಾ ಘಿಬ್ಲಿ ಫೋಟೋಗೆ ಕನ್ವರ್ಟ್​ ಮಾಡಿಕೊಂಡು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿರಬಹುದು. ಅಷ್ಟಕ್ಕೂ ನಾವು, ಈ ಘಿಬ್ಲಿ ಫೋಟೋ ಯಾವ ತರ ಎಡಿಟ್ ಮಾಡೋದು ಅಂತ ಹೇಳೋಕೆ ಬಂದಿಲ್ಲ. ಇದು ಎಷ್ಟು ಸೇಫ್ ಅಂತ ಕೆಲ ತಜ್ಞರತ್ರಾ ಮಾಹಿತಿ ಪಡೆದು ನಿಮಗೆ ಹೇಳ್ತಿದ್ದೀವಿ.

publive-image

GPT4ನಿಂದ ಈ ಘಿಬ್ಲಿ ಫೋಟೋಗಳು ಸಖತ್ ಟ್ರೆಂಡ್ ಮಾಡಿಬಿಟ್ಟಿದೆ. ಲಕ್ಷಾಂತರ, ಕೋಟ್ಯಾಂತರ ಜನರು ತಮ್ಮ ಫೋಟೋಗಳನ್ನು ಖುಷಿಗಾಗಿ ಕನ್ವರ್ಟ್​ ಮಾಡ್ಕೊಂಡು, AI ಅಪ್ಲಿಕೇಶನ್‌ಗಳಿಗೆ ಅಪ್‌ಲೋಡ್ ಮಾಡ್ತಿರೋದು ಅಪಾಯಕ್ಕೆ ಕಟ್ಟಿಟ್ಟ ಬುತ್ತಿ ಅಂತ ಸೈಬರ್ ಎಕ್ಸ್​​ಪರ್ಟ್​ಗಳು ಎಚ್ಚರಿಕೆ ಕೊಟ್ಟಿದ್ದಾರೆ. ಈ ಘಿಬ್ಲಿ ಎಷ್ಟು ಡೆಂಜರಸ್, ಆನ್​​ಲೈನ್​ ಆ್ಯಪ್​​ಗಳಿಗೆ ಅಪ್​ಲೋಡ್​ ಮಾಡ್ತಾ ಪರ್ಸನಲ್ ಫೋಟೋಸ್​ನಿಂದ ಸ್ಕ್ಯಾಮ್​ ಮಾಡಬಿಟ್ರೆ ಅನ್ನೋ ಎಚ್ಚರಿಕೆಯನ್ನ ಎಕ್ಸ್​​ಪರ್ಟ್​ಗಳು ಕೊಟ್ಟಿದ್ದಾರೆ. ಘಿಬ್ಲಿ ಟ್ರೆಂಡ್‌ಗೋಸ್ಕರ ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಸೇಫಾ ಅನ್ನೋ ಪ್ರಶ್ನೆಗೆ ತಜ್ಞರು ಹೇಳಿದ್ದು, ಒಂದೇ ಒಂದು ಉತ್ತರ ಇಲ್ಲ ಅಂತ.

ಪ್ರಸಿದ್ದ ಜಪಾನೀಸ್ ಅನಿಮೇಷನ್ ಸ್ಟುಡಿಯೋದಲ್ಲಿ ಘಿಬ್ಲಿ ಥರಾನೇ ತಮ್ಮ ತಮ್ಮ ಫೋಟೋಸ್​​ಗಳನ್ನ ಅಪ್ಲೋಡ್​​ ಮಾಡೋದು ಹೆಚ್ಚಾಗಿದೆ. ಇದು ಶುರುವಾಗಿದ್ದು, ಗ್ರ್ಯಾಂಡ್ ಸ್ಲ್ಯಾಟಿನ್ ಅನ್ನೋ ಅಮೆರಿಕಾದ ಒಬ್ಬ ಸಾಫ್ಟ್​​ವೇರ್ ಇಂಜಿನಿಯರ್, ಹೋದ ವಾರ ಇದನ್ನ ತಮ್ಮ X ಅಕೌಂಟ್​ನಲ್ಲಿ ಹಾಕಿದ್ರು.

publive-image

ಈ ಘಿಬ್ಲಿ ಜೆನೆರೇಟ್ ಆ್ಯಪ್, ಮೊದಲು ಓಪನ್ ಎಐ, ಇಮೇಜ್ ಜೆನೆರೇಟ್ ಮಾಡೋ ಟೂಲ್ಸ್​ಗಳನ್ನ ಈಗ ಅಪ್​ಡೇಟ್ ಮಾಡಿದೆ. ಅದಕ್ಕೋಸ್ಕರ ಅಮೆರಿಕಾದ ಸಾಫ್ಟ್​​ವೇರ್ ಇಂಜಿನಿಯರ್, ತಮ್ಮ ಕುಟುಂಬದ ಫೋಟೋಗೆ ಘಿಬ್ಲಿ ಸ್ಟೈಲ್ ಮಾಡ್ಕೊಡು ಅಂತ ಕೇಳಿಕೊಂಡಿದ್ದಾರೆ. ಯಾವಾಗ ಹೊಸ ಫೋಟೋ ಕೈಗೆ ಸಿಕ್ತೋ, ಆಗಲೇ ಆ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಆಮೇಲೆ ಅದು ಸಖತ್ ವೈರಲ್ ಆಗೋಯ್ತು.

ನಿಮಗೆ ಈ ಘಿಬ್ಲಿ ಫೋಟೋ ಬೇಕೂ ಅಂದ್ರೆ, ಆ ಚಾಟ್ ಬಾಕ್ಸ್​​ನಲ್ಲಿ ಫೋಟೋವನ್ನ ಅಪ್​ಲೋಡ್ ಮಾಡಬೇಕು. ಕೆಲ ಆ್ಯಪ್​ಗಳಲ್ಲಿ ಸೈನ್​ ಅಪ್ ಕೇಳುತ್ತೆ. ಇದ್ರಿಂದ ಓಪನ್ ಎಐ ಪರ್ಮಿಷನ್​ನಿಂದ ಗ್ಯಾಲರಿಯಲ್ಲಿರೋ ಫೋಟೋಗಳನ್ನ ಆಯ್ಕೆ ಮಾಡ್ಕೊಳ್ಳೋ ಆಪ್ಶನ್‌ ಅನ್ನು ಮೊದಲೇ ಕೊಟ್ಟಿರ್ತೀರ. ಇದ್ರಿಂದ ನಿಮ್ಮ ಪರ್ಸನಲ್ ಡೇಟಾ ಹಾಗೂ ಪರ್ಸನಲ್ ಮಾಹಿತಿಗಳನ್ನ ಆ್ಯಕ್ಸೆಸ್ ಮಾಡ್ಕೊಂಡು, ದುರುಪಯೋಗ ಆಗೋ ಚಾನ್ಸ್ ಜಾಸ್ತಿ ಇರುತ್ತೆ.

publive-image

ಈ ಘಿಬ್ಲಿಗೂ ಮುಂಚೆ, ಕ್ಲಿಯರ್ ವ್ಯೂ ಅನ್ನೋ ಎಐ ಬಂದಿತ್ತು. ಅದು ಯೂಸರ್ ಪರ್ಮಿಷನ್​ ಇಲ್ಲದೇನೆ ಫೋಟೋಗಳನ್ನ ಬಳಸಿಕೊಳ್ತಿತ್ತು. ಒಂದು ಲೆಕ್ಕದಲ್ಲಿ ನಾವೇ ಓಪನ್ ಎಐಗೆ ಪರ್ಮಿಷನ್​​ ಕೊಟ್ಟಂತೆ ಆಗ್ತಿತ್ತು. ಇದ್ರಿಂದ ಎಷ್ಟೋ ಜನ ಪರಿಣಾಮಗಳನ್ನ ಎದುರಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿವೆ.

ಇದನ್ನೂ ಓದಿ: ನಿತ್ಯಾನಂದ ಬದುಕಿದ್ದಾರಾ? ದೇಹತ್ಯಾಗ ಮಾಡಿದ್ದಾರಾ? ಕೊನೆಗೂ ‘ಕೈಲಾಸದಿಂದ ಬಂತು ಅತಿ ದೊಡ್ಡ ಸುದ್ದಿ‘! 

ಯಾವುದೇ ವಸ್ತುವೇ ಆಗಿರಲಿ, ಮನುಷ್ಯರೇ ಆಗಿರಲಿ, ಅಥವಾ ಟೆಕ್ನಾಲಜಿಯೇ ಆಗಿರಲಿ. ಎಲ್ಲದಕ್ಕೂ ಲಿಮಿಟ್ ಅನ್ನೋದು ಇರ್ಲೆಬೇಕು. ಇವತ್ತಿನ ಖುಷಿ, ನಾಳೆಯ ದುಃಖಕ್ಕೆ ಕಾರಣ ಆಗುತ್ತೆ ಅಂತಾರೆ.. ಖುಷಿಯಿಂದ ಈ ಘಿಬ್ಲಿ ಫೋಟೋಗಳನ್ನ ಪಡೆದುಕೊಳ್ತಿದ್ದೀರ ಓಕೆ. ಅದ್ರ ಜೊತೆಗೆ, ನಿಮ್ಮ ಪರ್ಸನಲ್ ವಿಚಾರಗಳು ಹಾಗೂ ಫೋಟೋಸ್​ಗಳು ದೊಡ್ಡ ಸ್ಕ್ಯಾಮ್​ಗೆ ಒಳಗಾಗಬಾರದು ಅನ್ನೋ ಸಣ್ಣ ಕಾಳಜಿ ನಮ್ಮದು.. ಯಾವುದಕ್ಕೂ ಎಚ್ಚರಿಕೆಯಿಂದ ಟೆಕ್ನಾಲಜಿ ಯೂಸ್ ಮಾಡಿಕೊಳ್ಳಿ. ಅಡಿಕ್ಟ್ ಆಗೋಕೆ ಮುಂಚೆ ಒಮ್ಮೆ ಯೋಚ್ನೆ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment