/newsfirstlive-kannada/media/post_attachments/wp-content/uploads/2025/04/Cyber-Crime-Reels-Stars.jpg)
ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸರು IPL ಬೆಟ್ಟಿಂಗ್ ಪ್ರಮೋಟ್ ಮಾಡುತ್ತಿದ್ದ ರೀಲ್ಸ್ ಸ್ಟಾರ್ಸ್‌ಗೆ ನೋಟಿಸ್ ನೀಡಿದ್ದರು. ರೀಲ್ಸ್ ಸ್ಟಾರ್ಸ್ ಬೆನ್ನಲ್ಲೆ ಇದೀಗ ಸ್ಯಾಂಡಲ್‌ವುಡ್ ಸ್ಟಾರ್ಸ್ ಮೇಲೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಕಣ್ಣಿಟ್ಟಿದ್ದಾರೆ.
ಸಿಸಿಬಿ ಪೊಲೀಸರು ಸ್ಯಾಂಡಲ್‌ವುಡ್, ಸೀರಿಯಲ್ ಹಾಗೂ ಸಿನಿಮಾ ತಾರೆಗಳ ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಕೆಲ ಕಿರುತೆರೆ ನಟ ನಟಿಯರು ಐಪಿಎಲ್ ಬೆಟ್ಟಿಂಗ್ ಸ್ಟೋರಿ ಪ್ರಮೋಟ್ ಮಾಡಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಈಗಾಗಲೇ ಹಲವರ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/02/NF_CYBER_CRIME_2.jpg)
ಇದಿಷ್ಟೇ ಅಲ್ಲ ಇನ್ನೆರಡು ದಿನಗಳಲ್ಲಿ ಸ್ಯಾಂಡಲ್‌ವುಡ್ ನಟ, ನಟಿಯರಿಗೂ ನೋಟಿಸ್ ನೀಡಲಿಕ್ಕೆ ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸ್ಯಾಂಡಲ್‌ವುಡ್ ನಟ, ನಟಿಯರ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಸೈಬರ್ ಕ್ರೈಂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ಯಾರ್ ಯಾರಿಗೆ ನೋಟಿಸ್?
ಇದುವರೆಗೂ ಐಪಿಎಲ್ ಬೆಟ್ಟಿಂಗ್ ಪ್ರಮೋಟ್ ಮಾಡ್ತಿದ್ದ ರೀಲ್ಸ್ ಸ್ಟಾರ್ಸ್‌ಗಳಾದ ಸೋನುಗೌಡ, ಶಿಲ್ಪಗೌಡ, ದೀಪಕ್ ಗೌಡ, ವರುಣ್ ಆರಾಧ್ಯ ಸೇರಿ 40ಕ್ಕೂ ಹೆಚ್ಚು ಮಂದಿಗೆ ನೋಟಿಸ್ ನೀಡಲಾಗಿದೆ. ಇದೀಗ ಸ್ಯಾಂಡಲ್‌ವುಡ್, ಸೀರಿಯಲ್ ಹಾಗೂ ಸಿನಿಮಾ ತಾರೆಗಳಿಗೂ ಸಂಕಷ್ಟ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us