ಅಮೆರಿಕದಲ್ಲಿ ಟ್ರಂಪ್‌ ಹೋಟೆಲ್‌ ಮುಂದೆ ಟೆಸ್ಲಾ ಸೈಬರ್‌ ಟ್ರಕ್ ಸ್ಫೋಟ; ಅಸಲಿಗೆ ಆಗಿದ್ದೇನು?

author-image
Ganesh Nachikethu
Updated On
Trump: ಡೊನಾಲ್ಡ್‌ ಟ್ರಂಪ್‌ ಗೆಲುವಿಗೆ ಕಾರಣವೇನು? ಮೊದಲ ವಿಕ್ಟರಿ ಭಾಷಣದಲ್ಲಿ ಹೇಳಿದ್ದೇನು?
Advertisment
  • ಅಮೆರಿಕದಲ್ಲಿ ಟ್ರಂಪ್‌ ಮಾಲೀಕತ್ವದ ಹೋಟೆಲ್‌ ಮುಂದೆ ಬ್ಲಾಸ್ಟ್​​
  • ಲಾಸ್ ವೇಗಾಸ್‌ನಲ್ಲಿರೋ ಟ್ರಂಪ್​​ ಹೋಟೆಲ್​ ಮುಂದೆ ಟ್ರಕ್​ ಸ್ಫೋಟ
  • ಟ್ರಂಪ್​​ ಹೋಟೆಲ್​ ಮುಂದೆ ನಡೆದ ಈ ದುರಂತದಲ್ಲಿ ಒಬ್ಬರು ಸಾವು!

ನ್ಯೂಯಾರ್ಕ್‌: ಅಮೆರಿಕಾದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮಾಲೀಕತ್ವದ ಹೋಟೆಲ್‌ ಹೊರಗೆ ಟೆಸ್ಲಾ ಸೈಬರ್‌ ಟ್ರಕ್ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ ಲಾಸ್ ವೇಗಾಸ್‌ನಲ್ಲಿರೋ ಟ್ರಂಪ್​​ ಹೋಟೆಲ್​ ಮುಂದೆ ನಡೆದ ಈ ದುರಂತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಈ ಸಂಬಂಧ ಮಾತಾಡಿದ ಲಾಸ್ ವೇಗಾಸ್ ಶೆರಿಫ್ ಕೆವಿನ್ ಮೆಕ್‌ಮಹಿಲ್ ಅವರು, ಟೆಸ್ಲಾ ಸೈಬರ್‌ ಟ್ರಕ್ ಸ್ಫೋಟಕ್ಕೂ ಮೊದಲು ಟ್ರಂಪ್ ಇಂಟರ್ನ್ಯಾಷನಲ್ ಹೋಟೆಲ್ ಗೇಟ್​​ ಬಳಿ ಬಂದಿದೆ. ಹೋಟೆಲ್​ ಗೇಟ್​ ಮುಂದೆಯೇ ಸೈಬರ್​ ಟ್ರಕ್​ ನಿಲ್ಲಿಸಲಾಗಿತ್ತು. ಈ ಟ್ರಕ್​ಗೆ ಮೊದಲು ಬೆಂಕಿ ಹೊತ್ತಿಕೊಂಡು ನಂತರ ಸ್ಫೋಟ ಸಂಭವಿಸಿದೆ ಎಂದಿದ್ದಾರೆ.


">January 2, 2025

ಒಂದು ಸಾವು ಮತ್ತು ಹಲವರಿಗೆ ಗಾಯ

ಸೈಬರ್‌ ಟ್ರಕ್‌ನೊಳಗಿದ್ದ ಮ್ಯಾಕ್‌ ಮಹಿಲ್‌ ಅನ್ನೋ ವ್ಯಕ್ತಿ ಮೃತಪಟ್ಟಿದ್ದಾನೆ. ಇಷ್ಟೇ ಅಲ್ಲ ಜತೆಗೆ 7 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರೋ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್, ಟ್ರಕ್​​ನಲ್ಲಿ ದೊಡ್ಡ ಪಟಾಕಿಗಳನ್ನು ಸಾಗಿಸಲಾಗುತ್ತಿತ್ತು. ಹಾಗಾಗಿ ಇದರಿಂದ ಸ್ಫೋಟ ಸಂಭವಿಸಿದೆ. ಇದು ಟ್ರಕ್‌ನಿಂದ ಉಂಟಾದ ಸಮಸ್ಯೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯುಎಸ್​​ ಪೊಲೀಸರಿಂದ ತನಿಖೆ

ಸದ್ಯ ಅಮೆರಿಕ ಪೊಲೀಸ್ರು ಟ್ರಕ್​ ಸ್ಫೋಟದ ಬಗ್ಗೆ ಕೇಸ್​ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಯಾವ ಕಾರಣಕ್ಕಾಗಿ ಈ‘-ಃ+ಶ್ಟರೀ ಆಗಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂದು ಪೊಲೀಸ್​​ ತನಿಖೆಯಲ್ಲಿ ಬಯಲಾಗಬೇಕಿದೆ.

ಇದನ್ನೂ ಓದಿ:ಚಿನ್ನಸ್ವಾಮಿ ‘ಚಾಲೆಂಜ್’​​ಗೆ ಪರ್ಫೆಕ್ಟ್​ ಪ್ಲಾನ್​ ಸಿದ್ಧ.. ತೆರೆ ಹಿಂದೆ ತಜ್ಞರಿಂದ ಭರ್ಜರಿ ಸ್ಟ್ರಾಟರ್ಜಿ..! ಏನದು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment