/newsfirstlive-kannada/media/post_attachments/wp-content/uploads/2025/05/RCB_IPL_WIN.jpg)
ಸದ್ಯ ನಡೆಯುತ್ತಿರುವ ಐಪಿಎಲ್ ಸೀಸನ್​- 18 ಕೊನೆ ಹಂತಕ್ಕೆ ಬಂದಿದೆ. ಇನ್ನೇನು ಲೀಗ್ ಮ್ಯಾಚ್​ಗಳು ಮುಗಿಯುವ ಹಂತಕ್ಕೆ ಬಂದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇನ್ನೆರಡು ಪಂದ್ಯಗಳು ಇವೆ. ಪ್ಲೇ ಆಫ್​ಗೆ ಎಂಟ್ರಿಕೊಟ್ಟಿರುವ ಆರ್​ಸಿಬಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಭರವಸೆಯಲ್ಲಿದೆ. ಅದರಂತೆ ಈ ಸಲ ಆರ್​ಸಿಬಿ ಕಪ್​ ಗೆಲ್ಲಲೇಬೇಕು ಅಂತ ಅಭಿಮಾನಿಯೊಬ್ಬರು ಬೆಂಗಳೂರಿನಿಂದ ಸೈಕಲ್ ಯಾತ್ರೆಯಲ್ಲಿ ತೆರಳಿದ್ದಾರೆ.
ಈ ಕುರಿತು ಮಾತನಾಡಿದ ಸೈಕಲ್ ಯಾತ್ರೆ ಮಾಡುತ್ತಿರುವ ಆರ್​ಸಿಬಿಯ ಅಭಿಮಾನಿ, ಈ ಸಲ ಆರ್​ಸಿಬಿ ಟ್ರೋಫಿ ಗೆಲ್ಲಲಿ ಎಂದು ಬೆಂಗಳೂರಿನಿಂದ ಅಂಜಾನಾದ್ರಿಗೆ ಸೈಕಲ್ ಯಾತ್ರೆ ಮಾಡುತ್ತಿದ್ದೇನೆ. 18ನೇ ಸೀಸನ್​ನಲ್ಲಿ ಕಪ್​ ಗೆಲ್ಲಲಿ ಎಂದು ದೇವಾಸ್ಥಾನಕ್ಕೆ ಹೋಗುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಿಂದ 260 ಕಿಲೋ ಮೀಟರ್ ದೂರ ಬಂದಿದ್ದೇನೆ. ಇನ್ನೂ 176 ಕಿಲೋ ಮೀಟರ್ ದೂರ ಸೈಕಲ್​ನಲ್ಲಿ ಹೋಗಿ ಅಂಜನಾದ್ರಿ ಬೆಟ್ಟ ತಲುಪುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: RCB ಟೀಮ್​ಗೆ ರಣಬೇಟೆಗಾರ ಎಂಟ್ರಿ.. ಸ್ಪೀಡ್‌ಸ್ಟರ್ ಮಾರಕಕ್ಕೆ ಎದುರಾಳಿ ಉಡೀಸ್ ಪಕ್ಕಾ!
/newsfirstlive-kannada/media/post_attachments/wp-content/uploads/2025/05/RCB_IPL_WIN_1.jpg)
ಅಂಜನಾದ್ರಿ ಬೆಟ್ಟ ತಲುಪಿದ ಮೇಲೆ ಆರ್​ಸಿಬಿ ಟ್ರೋಫಿ ಗೆಲ್ಲಲಿ ಎಂದು ವಿಶೇಷವಾದ ಪೂಜೆ ಮಾಡಿಸುತ್ತೇನೆ. ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ಈಗಾಗಲೇ ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿಯಾಗಿದೆ. ಕಪ್​ ಗೆಲ್ಲುವುದೊಂದೆ ಬಾಕಿ ಇದೆ. ಈ ಸಲ ಕಪ್ ಹೊಡೆದೇ ಹೊಡೆಯುತ್ತೆ. ನನ್ನ ಫೇವರಿಟ್ ಪ್ಲೇಯರ್ ವಿರಾಟ್ ಕೊಹ್ಲಿ. ಅವರ ಅಗ್ರೆಸ್ಸೀವ್ ಎಂದರೆ ತುಂಬಾ ಇಷ್ಟ. ಸ್ಟೇಡಿಯಂಗೆ ಹೋದಾಗ ವಿರಾಟ್ ಕೊಹ್ಲಿ ಅವರನ್ನೇ ಹೆಚ್ಚು ನೋಡುತ್ತೇನೆ. ಅವರು ಪ್ರತಿಯೊಂದು ಬಾಲ್​ಗೂ ಇಂಪಾರ್ಟೆಂಟ್ ಕೊಡುತ್ತಾರೆ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಗಳಿಸಿದ್ದಾರೆ. ಇಲ್ಲಿವರೆಗೆ ನಡೆದ ಪಂದ್ಯಗಳಿಂದ 505 ರನ್​ ಗಳಿಸಿದ್ದಾರೆ. ಅದರಂತೆ ತಂಡದಲ್ಲಿ ಜೋಶ್ ಹ್ಯಾಜಲ್ವುಡ್​ ಅವರು 18 ವಿಕೆಟ್​ ಕಬಳಿಸಿ ಉತ್ತಮ ಕೊಡುಗೆ ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us