newsfirstkannada.com

ಬಿಪರ್​ಜಾಯ್​ ಚಂಡಮಾರುತ ಉಗ್ರ ರೂಪ.. ಕಡಲಂಚಿನ ಮನೆಗಳು ಸಮುದ್ರದ ಪಾಲು

Share :

Published June 13, 2023 at 9:30pm

    ರಾಜ್ಯದ ಕರಾವಳಿ ಭಾಗದಲ್ಲಿ ಬಿರುಗಾಳಿ ಸಮೇತ ವರುಣಾರ್ಭಟ

    ಕ್ಷಣ ಕ್ಷಣಕ್ಕೂ ಸಮುದ್ರ ನೀರು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ..!

    ಶಾಶ್ವತ ತಡೆಗೋಡೆಗೆ ಒತ್ತಾಯಿಸುತ್ತಿರುವ ಸ್ಥಳೀಯ ನಿವಾಸಿಗಳು

ರಾಜ್ಯದಲ್ಲಿ ಬಿಪರ್​ಜಾಯ್​ ಚಂಡಮಾರುತದ ಅಬ್ಬರ ಜೋರಾಗಿದೆ. ಮಳೆರಾಯನ ಹೊಡೆತಕ್ಕೆ ಸಮುದ್ರದಲ್ಲಿ ನೀರು ಹೆಚ್ಚಾಗಿದ್ದು ಅಲೆಗಳು ಕಡಲತಡಿಗೆ ಅಪ್ಪಳಿಸುತ್ತಿವೆ. ಪರಿಣಾಮ ಕಡಲಂಚಿನ ಮನೆಗಳು ಹಾಗೂ ಮರಗಳು ಸಮುದ್ರದ ಪಾಲಾಗುತ್ತಿವೆ. ಇದರಿಂದ ಕಡಲತಡಿಯ ಮಕ್ಕಳು ಆತಂಕದಲ್ಲಿದ್ದಾರೆ.

ಬಿಪರ್​ಜಾಯ್​ ಅಬ್ಬರದ ಎಫೆಕ್ಟ್​ ರಾಜ್ಯದಲ್ಲಿ ಜೋರಾಗಿದೆ. ಅದರಲ್ಲೂ ಕರಾವಳಿ ಭಾಗಗಳಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು ಕಡಲಿನಲ್ಲಿ ನೀರಿನ ಪ್ರಮಾಣ ಅಧಿಕವಾಗಿ ಕಡಲ್ಕೊರೆತ ಹೆಚ್ಚಾಗಿದೆ.

ಮಂಗಳೂರಿನ ಕಿನಾರೆಗೆ ಅಪ್ಪಳಿಸುತ್ತಿರುವ ಭಾರೀ ಅಲೆಗಳು

ಬಿಪರ್​ಜಾಯ್ ಆರ್ಭಟಕ್ಕೆ ಮಂಗಳೂರಿನ ಕಡಲ ಕಿನಾರೆಗೆ ಭಾರೀ ಅಲೆಗಳು ಅಪ್ಪಳಿಸುತ್ತಿವೆ. ಉಳ್ಳಾಲ, ಉಚ್ಚಿಲ, ಸೋಮೇಶ್ವರ ಭಾಗದಲ್ಲಿ ಅಲೆಗಳಬ್ಬರ ಜೋರಾಗಿದೆ. ಬಟ್ಟಾಪಾಡಿ ಪ್ರದೇಶದಲ್ಲಿ ಕಡಲಕೊರೆತ ತೀವ್ರಗೊಂಡಿದೆ. ಕ್ಷಣ ಕ್ಷಣವೂ ಸಮುದ್ರರಾಜ ಭೂಮಿಯನ್ನು ನುಂಗುತ್ತಿದ್ದಾನೆ. ಪರಿಣಾಮ ಕಡಲ ಒಡಲುನ್ನು ಸಮುದ್ರ ತೀರದ ಮನೆಗಳು ಹಾಗೂ ಮರಗಳು ಸೇರುತ್ತಿವೆ. ಇನ್ನು ರಕ್ಕಸ ಅಲೆಗಳ ಹೊಡೆತಕ್ಕೆ‌‌ ಮನೆ ಸಮುದ್ರ ಪಾಲಾಗುವ ಭೀತಿಯಲ್ಲಿ ಬಟ್ಟಪ್ಪಾಡಿ ತೀರದ ಜನರಲ್ಲಿ ಆತಂಕ ತೀವ್ರಗೊಂಡಿದೆ.

ಕಡಲ ಕೊರೆತ.. ಕಡಲತಡಿಯಲ್ಲಿ ಸ್ಯಾಂಡ್ ಬ್ಯಾಗ್ ಬಳಕೆ

ಮಂಗಳೂರು ಹೊರವಲಯದ ಮೀನಕಳಿಯ‌ ಎಂಬಲ್ಲಿ ಮತ್ತೇ ಕಡಲ ಕೊರೆತದ ಭೀತಿ ಶುರುವಾಗಿದೆ. ಮೀನ‌ಕಳಿಯ ಕಳೆದ ವರ್ಷ ಕಡಲ ಕೊರೆತಕ್ಕೆ ತುತ್ತಾಗಿದ್ದು, ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಕಾಂಕ್ರೀಟ್ ರಸ್ತೆ ಮತ್ತು 4 ಮನೆಗಳು ಸಮುದ್ರದ ಪಾಲಾಗಿತ್ತು. ಈ ಬಾರಿ ಜನರಲ್ಲಿ ಕಡಲ ಕೊರೆತದ‌‌ ಆತಂಕ ಶುರುವಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕಡಲ ತಡಿಯಲ್ಲಿ 200ಕ್ಕೂ ಹೆಚ್ಚು ಸ್ಯಾಂಡ್ ಬ್ಯಾಗ್​​​​ಗಳನ್ನು ಬಳಸಿ ತಾತ್ಕಾಲಿಕ ಪರಿಹಾರ ಮಾಡಲಾಗಿದೆ. ಸ್ಥಳೀಯರು ಶಾಶ್ವತ ತಡೆಗೋಡೆಗೆ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಹೆಚ್ಚಾದ ಕಡಲ್ಕೊರೆತದ ಭೀತಿ

ಉಡುಪಿಯಲ್ಲಿ ಬಿಪರ್​ಜಾಯ್ ಚಂಡಮಾರುತದ ಎಫೆಕ್ಟ್​ಗೆ ಕಾಪುವಿನ ಮೂಳೂರಿನಲ್ಲೂ ಕಡಲ್ಕೊರೆತದ ಭೀತಿ ಹೆಚ್ಚಾಗಿದೆ. ಕಳೆದ ವರ್ಷ ದಡಕ್ಕೆ ಹಾಕಿದ ಕಲ್ಲು ಬಂಡೆಗಳು ಸಮುದ್ರ ಪಾಲಾಗಿವೆ. ಈ ಬಾರಿಯೂ ಕಡಲ್ಕೊರೆತದ ಭೀತಿ ಹಿನ್ನೆಲೆ ಮುಳೂರು ಭಾಗದ ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಅಲೆಗಳ ಹೊಡೆತಕ್ಕೆ ತೆಂಗಿನ ಮರಗಳು ಸಿಲುಕಿ ದರೆಗುರುಳುತ್ತಿವೆ.

ಪೆಟ್ರೋಲ್​ ಬಂಕ್​​ಗೆ ಮಳೆ ನೀರು.. ಕೆಟ್ಟು ನಿಂತ ವಾಹನಗಳು

ಸಿಲಿಕಾನ್​ ಸಿಟಿಯಲ್ಲಿ ಮೊನ್ನೆ ಸುರಿದ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಭಾರತ್​ ಪೆಟ್ರೋಲಿಯಂ ಬಂಕ್​ನಲ್ಲಿ ವಾಹನಗಳಿಗೆ ನೀರು ಮಿಶ್ರಿತ ಪೆಟ್ರೋಲ್, ಡಿಸೇಲ್ ಹಾಕಿರುವ ಪರಿಣಾಮ ವಾಹನಗಳು ಕೆಟ್ಟು ನಿಂತಿವೆ. ವಾಹನ ಸವಾರರು ಬಂಕ್​ನಲ್ಲೇ ತಮ್ಮ ವಾಹನಗಳನ್ನ ಕ್ಲೀನ್ ಮಾಡ್ಕೊಂಡು ಟೋಯಿಂಗ್ ಮಾಡ್ಕೊಂಡು ವಾಪಸ್​ ತೆಗೆದುಕೊಂಡು ಹೋಗಿದ್ದಾರೆ. ಬಿಎಂಡಬ್ಲ್ಯೂ ಸೇರಿ ಐಷಾರಾಮಿ ಕಾರುಗಳು ಸಹ ಕೆಟ್ಟು ನಿಂತಿದ್ದು, ಕಾರು ಮಾಲೀಕರು ಇನ್ಸೂರೆನ್ಸ್ ಕ್ಲೈಂ ಮಾಡೋಕೆ ಮುಂದಾಗಿದ್ದಾರೆ.

ಭಾರೀ ಮಳೆ ಹಿನ್ನೆಲೆ ಮಳೆ ಪರಿಹಾರ ಕ್ರಮಕ್ಕೆ ಮಾಜಿ ಸಿಎಂ ಬೊಮ್ಮಾಯಿ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಇನ್ನು ಇಂದಿನಿಂದ ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಮಳೆರಾಯ ಆರ್ಭಟಿಸಲಿದ್ದಾನೆ ಅಂತ ಈಗಾಗಲೇ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕರಾವಳಿ ಭಾಗಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ. ಬಿಪರ್​ಜಾಯ್ ಚಂಡಮಾರುತ ರಾಜ್ಯ ಹಾಗೂ ದೇಶದಲ್ಲಿ ಅಬ್ಬರಿಸಿ ಅವಾಂತರ ಸೃಷ್ಟಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಪರ್​ಜಾಯ್​ ಚಂಡಮಾರುತ ಉಗ್ರ ರೂಪ.. ಕಡಲಂಚಿನ ಮನೆಗಳು ಸಮುದ್ರದ ಪಾಲು

https://newsfirstlive.com/wp-content/uploads/2023/06/BIPARJOY_KARNATAKA.jpg

Load More