/newsfirstlive-kannada/media/post_attachments/wp-content/uploads/2024/10/CYCLONE.jpg)
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಡಾನಾ ಚಂಡಮಾರುತವು (Cyclone Dana) ಬೆಚ್ಚಿಬೀಳಿಸಿದೆ. ಪುರಿ ಮತ್ತು ಸಾಗರ್ ದ್ವೀಪದ ನಡುವೆ ಒಡಿಶಾ-ಪಶ್ಚಿಮ ಬಂಗಾಳದ ಕರಾವಳಿಯನ್ನು ‘ಡಾನಾ’ ಚಂಡಮಾರುತವು ತಲುಪುವ ನಿರೀಕ್ಷೆಯಿದೆ.
ಹೀಗಾಗಿ ಇತರ ರಾಜ್ಯಗಳ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ನಾಳೆಯಿಂದ ಅಕ್ಟೋಬರ್​ 25ರವರೆಗೆ ಪುರಿಗೆ ಭೇಟಿ ನೀಡದಂತೆ ಸಚಿವ ಸುರೇಶ್​ ಪೂಜಾರಿ ಮನವಿ ಮಾಡಿದ್ದಾರೆ. ಮಯೂರ್‌ಭಂಜ್, ಕಟಕ್, ಜಾಜ್‌ಪುರ್, ಬಾಲಸೋರ್, ಭದ್ರಕ್, ಕೇಂದ್ರಪಾರಾ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮತ್ತು ಇದು ಹಠಾತ್ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಮುಂಜಾಗೃತ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆ ಸ್ಪೆಷಲ್ ಗಿಫ್ಟ್; ಅರ್ಹ ಮಹಿಳೆಯರಿಗೆ ಸರ್ಕಾರದಿಂದ ಉಚಿತ ಸಿಲಿಂಡರ್..!
ಚಂಡಮಾರುತದ ತೀವ್ರತೆಯು ನಾಳೆ ಬೆಳಗ್ಗೆ ಕಮ್ಮಿ ಇರುತ್ತದೆ, ಆದರೆ ಗುರುವಾರ ಮತ್ತು ಶುಕ್ರವರಾರ ಅದರ ತೀವ್ರತೆ ಹೆಚ್ಚಿರಲಿದೆ. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಪುರಿ ಮತ್ತು ಸಾಗರ ಐಲ್ಯಾಂಡ್​​ನ ಮಧ್ಯದಲ್ಲಿ ಸೈಕ್ಲೋನ್ ಲ್ಯಾಂಡ್​ಫಾಲ್ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲಿಲ್ಲಿ ಎಫೆಕ್ಟ್​..?
ಗಂಜಮ್, ಪುರಿ, ಜಗತ್​ಸಿಂಗ್​ಪುರ್, ಕೇಂದ್ರಾಪುರ, ಭದ್ರಕ್, ಬಾಲಸೋರ್, ಮಯೂರಬಂಜ್, ಕೆಒಂಜನರ್, ಜೈಪುರ, ಅಂಗುಲ್, ಖುದ್ರಾ, ನಯಾಗರ್, ಕಟಕ್​​​ನಲ್ಲಿ ಅಕ್ಟೋಬರ್ 23-25ರವರೆಗೆ ಸೈಕ್ಲೋನ್ ಎಫೆಕ್ಟ್ ಕಾಡಲಿದೆ. ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶ, ಅಸ್ಸಾಂ, ತ್ರಿಪುರಾ, ಮಿಜೋರಾಂ, ಮೆಘಾಲಯ, ದೆಹಲಿಯಲ್ಲಿ ಭಾರೀ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ, ಅಂಡಮನ್, ನಿಕೋಬಾರ್​​ನಲ್ಲೂ ಮಳೆಯ ನಿರೀಕ್ಷೆ ಇದೆ. ಈಗಾಗಲೇ ಕರ್ನಾಟಕದಲ್ಲಿ ಮಳೆಯಿಂದಾಗಿ ಜನ ತೊಂದರೆಗೆ ಒಳಗಾಗಿದ್ದಾರೆ. ಇದೀಗ ಡಾನ ಸೈಕ್ಲೋನ್ ಶುರುವಾಗಿದ್ದು, ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us