/newsfirstlive-kannada/media/post_attachments/wp-content/uploads/2024/10/Smartphone-3.jpg)
ಬಂಗಾಳಕೊಳ್ಳಿಯಲ್ಲಿ ಉಂಟಾದ ಚಂಡಮಾರುತದಿಂದ ಭಾರತದ ಉದ್ದಗಲಕ್ಕೂ ಮಳೆಯಾಗುತ್ತಿದೆ. ಹವಮಾನ ಇಲಾಖೆ ಈ ಚಂಡಮಾರುತಕ್ಕೆ ‘ಡಾನಾ’ ಎಂದು ಹೆಸರಿಟ್ಟಿದ್ದು, ಅದರ ಮೇಲೆ ಕಣ್ಣಿಟ್ಟಿದೆ. ‘ಡಾನಾ’ದಿಂದ ಕೆಲವೆಡೆ ಮಳೆ ನಿರಂತರ ಸುರಿಯುತ್ತಿದ್ದು, ಇದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಈ ಚಂಡಮಾರುತದ ಚಲನೆಯನ್ನು ಸ್ಮಾರ್ಟ್ಫೋನ್ನಲ್ಲೇ ಟ್ರ್ಯಾಕ್ ಮಾಡಬಹುದಾಗಿದೆ. ಅದರ ಭೀಕರತೆ ಎಷ್ಟಿರುತ್ತೆ ಎಂದು ಕೆಲವು ಆ್ಯಪ್ಗಳ ಮೂಲಕ ಮುಂಚಿತವಾಗಿಯೇ ತಿಳಿದುಕೊಳ್ಳಬಹುದಾಗಿದೆ. ಅದಕ್ಕಾಗಿ ಕೆಲವೊಂದು ಆ್ಯಪ್ಗಳಿದ್ದು, ಅದರ ಮೂಲಕ ಸೂಕ್ತ ಮಾಹಿತಿ ಪಡೆಯಬಹುದಾಗಿದೆ.
ಸೈಕ್ಲೋನ್ ಕುರಿತ ಮಾಹಿತಿ ನೀಡುವ ಆ್ಯಪ್ಗಳಿವು
1. ಜೂಮ್ ಅರ್ಥ್ (Zoom Earth): ಚಂಡಮಾರುತವನ್ನು ಟ್ರ್ಯಾಕ್ ಮಾಡುವ ಆ್ಯಪ್ ಇದಾಗಿದೆ. ಸೈಕ್ಲೋನ್ ಪ್ರಸ್ತುತ ಇರುವ ಸ್ಥಳ ಮತ್ತು ಚಲನೆಯನ್ನು ನೋಡಲು ಅನುಮತಿಸುತ್ತದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಬಳಕೆಗೆ ಸಿಗುತ್ತಿದೆ
2. ವಿಂಡಿ.ಕಾಮ್ (Windy.com): ಈ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಮೂಲಕ ಸೈಕ್ಲೋನ್‌ಗಳ ನೈಜ-ಸಮಯದ ಟ್ರ್ಯಾಕಿಂಗ್ ಪಡೆಯಬಹುದಾಗಿದೆ. ಇದು ಸುಮಾರು 700,000 ಬಳಕೆದಾರರ ವಿಮರ್ಶೆಗಳನ್ನು ಸ್ವೀಕರಿಸಿದೆ. ಸುಮಾರು 10 ಮಿಲಿಯನ್ ಡೌನ್‌ಲೋಡ್ ಕಂಡಿದೆ.
ಇದನ್ನೂ ಓದಿ: ಹಬೀಬಿ.. ಉಬರ್ನಲ್ಲಿ ಇನ್ಮುಂದೆ ಒಂಟೆ ರೈಡ್ ಮಾಡ್ಬೋದು!
3. ವಿಂಡ್‌ಫೈಂಡರ್ (windfinder) : ಈ ಅಪ್ಲಿಕೇಶನ್ ಅನ್ನು 5 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ ಮತ್ತು 4.7-ಸ್ಟಾರ್ ರೇಟಿಂಗ್ ಪಡೆದಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೌನ್ಲೋಡ್ಗೆ ಸಿಗಲಿದೆ.
4. ವಿಂಡಿ.ಆ್ಯಪ್ (Windy.app) : ಇದು ಕೂಡ ಚಂಡಮಾರುತದ ಕುರಿತು ಮಾಹಿತಿ ಒದಗಿಸುತ್ತದೆ. ಸುಮಾರು 5 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿರುವ ಈ ಆ್ಯಪ್ ಅನ್ನು ಅನೇಕರು ಬಳಸುತ್ತಿದ್ದಾರೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ 4.8 ರೇಟಿಂಗ್ ಪಡೆದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಿಲ್ಲದ ಮಳೆ ಅವಾಂತರ.. ಆಟೋ, ಬೈಕ್ ಮೇಲೆ ಬಿದ್ದ ಮರ, ಮುಂದುವರೆದ ರಕ್ಷಣಾ ಕಾರ್ಯ
5. ಮೈ ಹರಿಕೇನ್ ಟ್ರ್ಯಾಕರ್ ಮತ್ತು ಅಲರ್ಟ್ (My Hurricane Tracker & Alerts) : ಈ ಆ್ಯಪ್ ಕೂಡ ಚಂಡಮಾರುತಗಳು ಮತ್ತು ಚಂಡಮಾರುತಗಳನ್ನು ಟ್ರ್ಯಾಕಿಂಗ್ ಮಾಡುವ ವೈಶಿಷ್ಟ್ಯತೆಯನ್ನು ಹೊಂದಿದೆ. 4.7 ಸ್ಟಾರ್‌ಗಳ ರೇಟಿಂಗ್ ಜೊತೆಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೌನ್ಲೋಡ್ಗೆ ಸಿಗುತ್ತಿದೆ.
6. ದಿ ವೆದರ್ ಚಾನೆಲ್ (The weather Channel) : ಇದು ಹವಾಮಾನ ಕುರಿತು ಮಾಹಿತಿ ನೀಡುವ ಅಪ್ಲಿಕೇಶನ್. ಗೂಗಲ್ ಪ್ಲೇ ಸ್ಟೋರ್ನಲ್ಲಿ 4.7 ಸ್ಟಾರ್‌ಗಳ ರೇಟಿಂಗ್ ಹೊಂದಿದೆ. ಇದು ಸೈಕ್ಲೋನ್‌ಗಳ ನೈಜ-ಸಮಯದ ಟ್ರ್ಯಾಕಿಂಗ್ ಕುರಿತು ಮಾಹಿತಿ ಒದಗಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ