/newsfirstlive-kannada/media/post_attachments/wp-content/uploads/2024/11/FENGAL.jpg)
ಫೆಂಗಲ್ ಚಂಡಮಾರುತ ತಮಿಳುನಾಡಿ ಲಗ್ಗೆ ಇಟ್ಟಿದೆ. ಚೆನ್ನೈನಲ್ಲಿ ಸುರಿಯುತ್ತಿರೋ ಮಳೆಯಿಂದ ರಸ್ತೆ, ಕೇರಿ ಸೇರಿ ಎಲ್ಲವೂ ನೀರಿನಿಂದ ತುಂಬಿ ತುಳುಕುತ್ತಿವೆ. ಇದರ ನಡುವೆ ಫೆಂಗಲ್ ಚಂಡಮಾರುತ ಎಫೆಕ್ಟ್​ ರಾಜ್ಯದ ಮೇಲೂ ಪರಿಣಾಮ ಬೀರಲಿದ್ದು ಅದರಲ್ಲೂ ಬೆಂಗಳೂರಿನ ಮೇಲೂ ಬೀಳುತ್ತೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ತಮಿಳುನಾಡಿಗೆ ಅಪ್ಪಳಿಸಲಿದೆ ‘ಫೆಂಗಲ್’ ಚಂಡಮಾರುತ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಫೆಂಗಲ್ ಚಂಡಮಾರುತ ಆಲ್ರೆಡಿ ತಮಿಳುನಾಡಿಗೆ ಎಂಟ್ರಿ ಕೊಟ್ಟಿದೆ. ಹವಾಮಾನ ಇಲಾಖೆಯು ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಭಾಗಗಳಿಗೆ ಬಾರೀ ಮೆಳಯ ಎಚ್ಚರಿಕೆಗಳನ್ನ ನೀಡಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
/newsfirstlive-kannada/media/post_attachments/wp-content/uploads/2024/08/BNG-RAIN-5.jpg)
ಭಾರತೀಯ ಹವಾಮಾನ ಇಲಾಖೆ ತಮಿಳುನಾಡಿನ ನಾಗಪಟ್ಟಣಂ, ತಿರುವರೂರ್ ಮತ್ತು ಮೈಲಾಡುತುರೈ ಜಿಲ್ಲೆಗಳಿಗೆ ಮತ್ತು ಕಾರೈಕಲ್ 4 ಜಿಲ್ಲೆಗಳಿಗೆ ರೆಡ್ ಅಲರ್ಟ್ ಸೇರಿದಂತೆ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿತ್ತು. ಅದರ ಮಂದುವರಿದ ಭಾಗವಾಗಿ ಇಂದು ತಮಿಳುನಾಡಿನ ಮೈಲಾಡುತುರೈ, ಕಡಲೂರು ಮತ್ತು ಕಾರೈಕಲ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಚೆಂಗಲ್ಪಟ್ಟು, ವಿಲ್ಲುಪುರಂ, ಅರಿಯಲೂರು, ತಂಜಾವೂರು, ತಿರುವರೂರು, ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಇವತ್ತು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ: ಬಾಲಿವುಡ್ ಬ್ಯೂಟಿಗೆ ಮನಸೋತ RCB ಮಾಜಿ ಬೌಲರ್.. ಪ್ರೀತಿ ಬಲೆಗೆ ಬಿದ್ರಾ ಸಿರಾಜ್?
ತಮಿಳೂನಾಡಿನ ತಿರುವಾರೂರು ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇತ್ತ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು. ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ಚೆನ್ನೈನಲ್ಲಿ ಮಳೆ ಆಟ ಮುಂದುವರೆದಿದೆ. ಶುರುವಾದ ಗ್ಯಾಪ್​ ಕೊಡದೇ ಧೋ ಅಂತಾ ಸುರಿಯುತ್ತಿದೆ. ಮಳೆಯ ಅಬ್ಬರಕ್ಕೆ ಚೆನ್ನೈನ ಅಣ್ಣಾ ನಗರ್​ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ.
/newsfirstlive-kannada/media/post_attachments/wp-content/uploads/2024/05/bng-rain1.jpg)
ಫೆಂಗಲ್ ಸೈಕ್ಲೋನ್ ಚೆನ್ನೈ ನಗರವನ್ನ ಆವರಿಸಿ 16ಕ್ಕೂ ಹೆಚ್ಚು ಗಂಟೆಗಳಾಗಿದ್ದು, ಅಲಂದೂರ್ ಮೆಟ್ರೋ ನಿಲ್ದಾಣದ ಸುತ್ತಾ ಮುತ್ತಾ ಹೆವಿ ಟ್ರಾಫಿಕ್​ ಉಂಟಾಗಿತ್ತು.. ಚೆನ್ನೈ ವ್ಯಾಸರ್ಪಾಡಿಯಲ್ಲಿ ಮಳೆಯ ಪ್ರಭಾವದಿಂದ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್​ ಆಗಿ ಬೆಂಕಿ ಹೊತ್ತಿಕೊಂಡಿದೆ. ತಮಿಳುನಾಡು ಮಾತ್ರವಲ್ಲದೇ ಕರುನಾಡಿನ ಮೇಲೆ ಫೆಂಗಲ್ ಎಫೆಕ್ಟ್​ ಇರಲಿದೆ ಅನ್ನೋದನ್ನ ಹವಾಮಾನ ಇಲಾಖೆ ತಿಳಿಸಿದೆ..
ಕರ್ನಾಟಕದ ವಿವಿಧ ಭಾಗಗಳಲ್ಲೂ ವರ್ಷಧಾರೆ ಸಾಧ್ಯತೆ
ತಮಿಳುನಾಡು ಮಾತ್ರವಲ್ಲದೇ ನೆರೆಯ ಕರ್ನಾಟಕದಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತ ಪರಿಣಾಮ ಬೆಂಗಳೂರಿನಲ್ಲೂ ಎಫೆಕ್ಟ್ ಆಗಲಿದ್ದು, ಮುಂದಿನ 3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ವೆದರ್​ ಚೇಂಚ್​ ಆಗಿ ಅನೇಕರಿಗೆ ಅರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈಗ ಚಳಿ ಜೊತೆಗೆ ಮಳೆ ಬರ್ತಿರೋದ್ರಿಂದ ಜನ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us