newsfirstkannada.com

Cyclone Remal Alert: ಕರ್ನಾಟಕದಲ್ಲಿ ಭಾರೀ ಮಳೆಯ ಎಚ್ಚರಿಕೆ..

Share :

Published May 23, 2024 at 11:32am

    ಸೈಕ್ಲೋನ್​ನಿಂದ ರಾಜ್ಯದಲ್ಲಿ ಎಷ್ಟು ದಿನ ಮಳೆ ಆಗಲಿದೆ..?

    ಸೈಕ್ಲೋನ್​​ನಿಂದ ಮುಂಗಾರು ಮಳೆ ಜೋರಾಗುವ ಎಚ್ಚರಿಕೆ

    ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಬಳಿ ಸೈಕ್ಲೋನ್ ಭೂ-ಸ್ಪರ್ಷ

ಬೆಂಗಳೂರು: ಬಂಗಾಳಕೊಳ್ಳಿಯಲ್ಲಿ ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಮುಂದಿನ ಐದು ದಿನ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ‌ 48 ಗಂಟೆಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ಸ್ ಉಷ್ಣಾಂಶ ಇರಲಿದೆ. ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಂಡ ಪರಿಣಾಮ ಸೈಕ್ಲೋನ್ ಸೃಷ್ಟಿಯಾಗಿದೆ. ನಾಳೆ ರಿಮಲ್ (Cyclone Remal) ಹೆಸರಿನ ಸೈಕ್ಲೋನ್ ಸೃಷ್ಟಿಯಾಗಲಿದೆ. ಇದು ಬಂಗಾಳ ಕೊಲ್ಲಿಯಲ್ಲಿ ಉತ್ತರಾಭಿಮುಖವಾಗಿ ಚಲಿಸಲಿದೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಹೋಗುವವರೇ ಹುಷಾರ್​.. ನೀವು ಓದಲೇಬೇಕಾದ ಸ್ಟೋರಿ ಇದು..!

ಮೇ 26 ರಂದು ಪಶ್ಚಿಮ ಬಂಗಾಳ ಅಥವಾ ಬಾಂಗ್ಲಾದೇಶದ ಬಳಿ ಸೈಕ್ಲೋನ್ ಭೂ-ಸ್ಪರ್ಷ ಮಾಡಲಿದೆ. ಸೈಕ್ಲೋನ್ ಪರಿಣಾಮವಾಗಿ ಪಶ್ಚಿಮ ಬಂಗಾಳ, ಒರಿಸ್ಸಾ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್​ನಿಂದ ಮುಂಗಾರು ಮಳೆ ತೀವ್ರವಾಗುವ ಸಾಧ್ಯತೆಯೂ ಇದೆ. ಕರ್ನಾಟಕದ ಬಳ್ಳಾರಿ, ಬೆಳಗಾವಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ:ಕಳೆದುಕೊಳ್ಳುವಾಗ ಯಾವಾಗಲೂ ನೋವು ಇರುತ್ತದೆ, ಆದರೆ.. ಎದೆಗುಂದದ ಎಬಿ ಡಿವಿಲಿಯರ್ಸ್

ಇದನ್ನೂ ಓದಿ:ಸೋತ ಆರ್​ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cyclone Remal Alert: ಕರ್ನಾಟಕದಲ್ಲಿ ಭಾರೀ ಮಳೆಯ ಎಚ್ಚರಿಕೆ..

https://newsfirstlive.com/wp-content/uploads/2024/05/rain24.jpg

Load More