newsfirstkannada.com

ನಿದ್ದೆಯಲ್ಲಿದ್ದವರಿಗೆ ಆಘಾತ.. ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟಕ್ಕೆ ಒಂದೇ ಕುಟುಂಬದ ಐವರ ಸ್ಥಿತಿ ಗಂಭೀರ

Share :

Published May 30, 2024 at 12:50pm

Update May 30, 2024 at 1:05pm

  ಬಾಡಿಗೆ ಮನೆಯಲ್ಲಿ ವಾಸವಿದ್ದ ಇಡೀ ಕುಟುಂಬಕ್ಕೆ ಆಘಾತ

  ಅಡುಗೆ ಸಿಲಿಂಡರ್ ಸ್ಫೋಟಕ್ಕೆ ಮೂವರು ಮಕ್ಕಳಿಗೆ ಗಂಭೀರ ಗಾಯ

  ಅಡುಗೆ ಸಿಲಿಂಡರ್ ಲೀಕ್ ಆದ ಪರಿಣಾಮ ಭಾರೀ ಅಗ್ನಿ ಅವಘಡ

ಬೆಂಗಳೂರು: ಅಡುಗೆ ಸಿಲಿಂಡರ್ ಲೀಕ್ ಆದ ಪರಿಣಾಮ ಭಾರೀ ಅಗ್ನಿ ಅವಘಡ ಸಂಭವಿಸಿರೋ ಘಟನೆ ಇಂದು ಬೆಳಗ್ಗೆ ಎಂ.ಎಸ್ ನಗರದಲ್ಲಿ ನಡೆದಿದೆ. ಬೆಂಕಿಯ ಜ್ವಾಲೆಗೆ ಮನೆಯಲ್ಲಿದ್ದ ಗಂಡ-ಹೆಂಡತಿ ಮೂರು ಜನ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೇಪಾಳ ಮೂಲದ ಕುಟುಂಬ ಸಂಪಿಗೇಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಡುಗೆ ಸಿಲಿಂಡರ್ ಸ್ಫೋಟಕ್ಕೆ ಒಂದೇ ಕುಟುಂಬದ ಪತಿ, ಪತ್ನಿ ಹಾಗೂ ಮೂರು ಮಕ್ಕಳಿಗೆ ಗಂಭೀರ ಸುಟ್ಟ ಗಾಯಗಳಾಗಿದೆ.

ಇದನ್ನೂ ಓದಿ: ಬಾಡಿಗೆಗೆ ಸಿಗ್ತೇನೆ ಎಂದ ಭಾರತೀಯ ಯುವತಿ! ಆದ್ರೆ ಡೇಟಿಂಗ್​, ಮೀಟಿಂಗ್​​ಗೆ​ ಇಂತಿಷ್ಟು ಫಿಕ್ಸ್​! ನೋ ಕಾಂಪ್ರೊಮೈಸ್​ 

ಮದನ್ ಚೌಹಾರ (37) ಹೆಂಡತಿ ಪ್ರೇಮ್ ಜಾಲ (28) ಮಕ್ಕಳಾದ ಹಿರದ್ (12) ಪ್ರಶಾಂತ್ (06) ಅನಿತಾ (8) ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಂಪಿಗೆಹಳ್ಳಿ ಸಮೀಪದ ಎಂಎಸ್ ನಗರದಲ್ಲಿ ಬೆಳಗ್ಗೆ ಸಂಭವಿಸಿರುವ ದಾರುಣ ಘಟನೆ ಇದಾಗಿದೆ. ಮನೆಯಲ್ಲಿದ್ದ ಗಂಡ-ಹೆಂಡತಿ ಮೂರು ಜನ ಮಕ್ಕಳಿಗೂ ಶೇಕಡಾ 90ರಷ್ಟು ಸುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿದ್ದೆಯಲ್ಲಿದ್ದವರಿಗೆ ಆಘಾತ.. ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟಕ್ಕೆ ಒಂದೇ ಕುಟುಂಬದ ಐವರ ಸ್ಥಿತಿ ಗಂಭೀರ

https://newsfirstlive.com/wp-content/uploads/2024/05/Bangalore-Blast-Case.jpg

Load More