/newsfirstlive-kannada/media/post_attachments/wp-content/uploads/2025/02/Dk-Shivakumar-Esha-Foundation.jpg)
ಡಿಸಿಎಂ ಡಿ.ಕೆ.ಶಿವಕುಮಾರ್ರ ಇತ್ತೀಚಿನ ಒಂದೊಂದು ನಡೆಯೂ. ಒಂದೊಂದು ಹೇಳಿಕೆಯು ಕೇವಲ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲೂ ಭಾರೀ ಸದ್ದು ಮಾಡ್ತಿವೆ. ಮಹಾಕುಂಭಮೇಳವನ್ನು ಕಾಂಗ್ರೆಸ್ ಹೈಕಮಾಂಡ್ ಟೀಕಿಸಿತ್ತು. ಆದ್ರೆ ಡಿಸಿಎಂ ಡಿಕೆಶಿ ಅದೇ ಪ್ರಯಾಗ್ರಾಜ್ನ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಇದು ಕಾಂಗ್ರೆಸ್ಗೆ ಮುಖಭಂಗ ತರಿಸಿತು. ಇದೀಗ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಶಿವರಾತ್ರಿ ಧಾನ್ಯ ಮಾಡಿದ್ದು.. ಅದರಲ್ಲೂ ಅಮಿತ್ ಶಾ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ನ ನಿದ್ದೆ ಗೆಡಿಸಿದಿದೆ. ಹೀಗಾಗಿ ಡಿಕೆಶಿಯ ನಡೆ-ನುಡಿ ಬಗ್ಗೆ ಕಾಂಗ್ರೆಸ್ನ ರಾಜ್ಯ ನಾಯಕರು ಮಾತ್ರವಲ್ಲ, ಹೈಕಮಾಂಡ್ ನಾಯಕರು ಗರಂ ಆಗಿದ್ರು.. ಆದ್ರೆ ಈ ಎಲ್ಲ ಟೀಕೆ ಟಿಪ್ಪಣಿಗಳಿಗೆ ಡಿಕೆಶಿ ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ.
ಇಶಾ ಕೇಂದ್ರದಲ್ಲಿ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಎಐಸಿಸಿ ಕಾರ್ಯದರ್ಶಿ ವಿ.ಪಿ. ಮೋಹನ್ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ರು. ಇದಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿರುವ ಡಿ.ಕೆ.ಶಿ, ನಾನು ಹೋಗಿದ್ದು ಶಿವರಾತ್ರಿಗೆ, ಅದು ನನ್ನ ವೈಯಕ್ತಿಕ ನಂಬಿಕೆ. ಹೈಕಮಾಂಡ್ನ ದೊಡ್ಡ ನಾಯಕರ ಬಗ್ಗೆ ನಾನು ಮಾತನಾಡಲ್ಲ. ಯಾವ ಎಐಸಿಸಿ ಯಾವ ಲೀಡರ್. ಯಾವ ನ್ಯಾಷನಲ್ ಲೀಡರ್. ಯಾರ್ ಏನ್ ಕಮೆಂಟ್ ಮಾಡಿದ್ರು ಡೋಂಟ್ಕೇರ್ ಎಂಬಂತೆ ರಿಯಾಕ್ಟ್ ಮಾಡಿದ್ದಾರೆ. ಇನ್ನು ಭಾಷದ ವೇಳೆ ಡಿಕೆಶಿ ಮುಂದೆಯೇ ಕಾಂಗ್ರೆಸ್ ಪಕ್ಷವನ್ನು ಸದ್ಗುರು ಟೀಕಿಸಿದ ಆರೋಪಕ್ಕೂ ಡಿಕೆಶಿ ಕೊಟ್ಟ ಉತ್ತರ ಹೇಗಿತ್ತು ನೀವೇ ಕೇಳಿ.
ಇದನ್ನೂ ಓದಿ:ಜಗ್ಗಿ ವಾಸುದೇವ್ ಮಾತಿಗೆ ಎಲ್ಲರಿಂದಲೂ ಚಪ್ಪಾಳೆ.. ಡಿ.ಕೆ ಶಿವಕುಮಾರ್ ಮಾತ್ರ ಮೌನ; ಯಾಕೆ? VIDEO
ಇನ್ನು ಕುಂಭಮೇಳದಲ್ಲಿ ಭಾಗಿಯಾಗಿದಕ್ಕೆ ವಿರೋಧಿಸಿದ ಸ್ವಪಕ್ಷದ ನಾಯಕರಿಗೆ ಡಿಕೆಶಿ ಸಖತ್ ಟಕ್ಕರ್ ನೀಡಿದ್ದಾರೆ. ಸಾವಿರ ಜನ ವಿರೋಧ ಮಾಡಲಿ.. ಅದು ನನ್ನ ವೈಯಕ್ತಿಕ ನಂಬಿಕೆ. ನಮ್ಮವ್ರು ನಮ್ಮ ಮಠಕ್ಕೆ ಬರಲ್ಲ ಅಂತಾರೆ.. ನನಗೆ ಎಲ್ಲಿ ಒಳ್ಳೆಯದಾಗುತ್ತೋ ಅಲ್ಲಿಗೆ ಹೋಗ್ತೇನೆ. ಅದು ನನ್ನ ನಂಬಿಕೆ. ಕುಂಭಮೇಳ ನಮ್ಮ ನೀರು, ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಬಿಗಿ ಪಟ್ಟು; ಯಾವಾಗ? ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ!
ಇನ್ನು ಡಿಕೆಶಿ ಸ್ವಾಪ್ಟ್ ಹಿಂಧುತ್ವದ ಮೊರೆ ಹೋಗಿದ್ದಾರೆ ಎಂಬ ಕೆಲವರ ಮಾತಿಗೂ ಡಿಸಿಎಂ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ಹಿಂದೆ ಎಸ್.ಎಂ.ಕೃಷ್ಣ ಅವರ ಪಾಂಚ್ಯಜನ್ಯ ಯಾತ್ರೆ ಮಾಡಿಸಿದೆ. ಆಗ ಕೆಲವರು ಸೋನಿಯಾ ಗಾಂಧಿ ಅವರಿಗೆ ದೂರು ನೀಡಿದ್ರು. ಪಾಂಚಜನ್ಯ ಬಿಜೆಪಿಯದ್ದು ಅಂದ್ರು.. ಬಿಜೆಪಿಯವರಿಗೆ ಹಿಂದೂಗಳನ್ನ ಬರೆದುಕೊಟ್ಟಿದ್ದಾರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆಶಿಯ ಒಂದೊಂದು ನಡೆಯೂ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ್ತಿದೆ. ಇದೆಲ್ಲಕ್ಕೂ ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವ್ನು ಡಿ.ಕೆ.ಶಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ