newsfirstkannada.com

ರಾಮನಗರ ಬೆಂಗಳೂರು ಸೇರ್ಪಡೆ ಬಗ್ಗೆ ಪುನರುಚ್ಚರಿಸಿದ ಡಿ.ಕೆ. ಶಿವಕುಮಾರ್: ಸರ್ಕಾರದ ಪ್ಲಾನ್​ ಏನು ಗೊತ್ತಾ?

Share :

Published March 16, 2024 at 7:54am

    ರಾಮನಗರ ಜಿಲ್ಲೆಯನ್ನ ಮಾಡ್ರನ್ ಜಿಲ್ಲೆಯಾಗಿ ಮಾಡ್ತೇವೆ

    ಕರ್ನಾಟಕದಲ್ಲಿ ಕ್ವಾಲಿಟಿ ಎಜುಕೇಶನ್ ಕೊಡುವ ಸಂಕಲ್ಪ

    ಪಂಚಾಯ್ತಿ ಮಟ್ಟದಲ್ಲಿ ಅತ್ಯಾಧುನಿಕ ಶಾಲೆಗಳ ನಿರ್ಮಾಣ

ರಾಮನಗರ ಬೆಂಗಳೂರು ಸೇರ್ಪಡೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪುನರುಚ್ಚರಿಸಿದ್ದಾರೆ. ರಾಮನಗರದಲ್ಲಿ ಸುದ್ದಿಗೋಷ್ಟಿ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ನಮ್ಮ ಸರ್ಕಾರ ಐತಿಹಾಸಿಕ ಕಾರ್ಯಕ್ರಮವೊಂದನ್ನ ತರಲು ಮುಂದಾಗಿದೆ ಎಂದು ಹೇಳಿದ್ದಾರೆ.

ಇದು ಬೆಂಗಳೂರು ಜಿಲ್ಲೆ, ರಾಮನಗರ ಅಂದ್ರೆ ಬೆಂಗಳೂರಿನ ಭಾಗ. ರಾಮನಗರ ಜಿಲ್ಲೆಯನ್ನ ಮಾಡ್ರನ್ ಜಿಲ್ಲೆಯಾಗಿ ಮಾಡ್ತೇವೆ. ನಾವು 2 ಸಾವಿರ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಸಿದ್ಧತೆ ಮಾಡ್ತಿದ್ದೇವೆ. ನಾನು ಮತ್ತು ಸಿಎಂ ಸಂಪುಟದಲ್ಲಿ ಪಬ್ಲಿಕ್ ಶಾಲೆಗಳ ನಿರ್ಮಾಣ ಬಗ್ಗೆ ಚರ್ಚೆ ಮಾಡಿದ್ದೇವೆ. ಮಂತ್ರಿಗಳ ತಂಡ ರಚನೆ ಮಾಡಿಕೊಂಡು ನಾನು ಅಧ್ಯಕ್ಷ ಆಗಿದ್ದೇನೆ. ಈ ಯೋಜನೆ ಬಗ್ಗೆ ರೂಪುರೇಷೆಗಳನ್ನ ತಯಾರು ಮಾಡ್ತಿದ್ದೇವೆ. 2 ಸಾವಿರ ಕೋಟಿ ಸಿಎಸ್ಆರ್ ಫಂಡ್ ಕೊಡಲು ಸಂಸ್ಥೆಗಳು ಮುಂದೆ ಬಂದಿವೆ ಎಂದು ಹೇಳಿದ್ದಾರೆ.

ಬಳಿಕ ಸಿಎಸ್ಆರ್ ಪಂಢ್ ನ ಮೊದಲ ಆದ್ಯತೆ ಪ್ರೈಮರ್ ಎಜುಕೇಶನ್ ಗೆ ನೀಡಬೇಕು. ರಾಜ್ಯದ ಎಲ್ಲಾ ಬ್ಯಾಂಕ್ಸ್, ಇಂಡಸ್ಟ್ರೀಸ್ ಸೇರಿ ಇತರ ಸಂಸ್ಥೆಗಳಿಗೆ ಈ ಬಗ್ಗೆ ಸರ್ಕಾರದಿಂದ ಪತ್ರ ಬರೆಯುತ್ತೇವೆ. ನಿಮ್ಮ ಸಿಎಸ್ಆರ್ ಫಂಡ್ ನ್ನು ಯಾವುದೋ ಕಾರ್ಯಗಳಿಗೆ ಖರ್ಚು ಮಾಡೋದು ಬೇಡ. ಮೊದಲ ಆದ್ಯತೆ ಶಿಕ್ಷಣ ವ್ಯವಸ್ಥೆಗೆ ನೀಡಬೇಕು. ಕರ್ನಾಟಕದಲ್ಲಿ ಕ್ವಾಲಿಟಿ ಎಜುಕೇಶನ್ ಕೊಡುವ ಸಂಕಲ್ಪ ಮಾಡಿದ್ದೇವೆ. ಗ್ರಾಮೀಣ ಪ್ರದೇಶದ ಜನರಿಗೆ ಕ್ವಾಲಿಟಿ ಎಜುಕೇಶನ್ ಸಿಗಬೇಕು. ಪಂಚಾಯ್ತಿ ಮಟ್ಟದಲ್ಲಿ ಅತ್ಯಾಧುನಿಕ ಶಾಲೆಗಳ ನಿರ್ಮಾಣ ಆಗಬೇಕು. ಸರ್ಕಾರದ ಸಹಭಾಗಿತ್ವದಲ್ಲಿ ಶಾಲೆಗಳು ನಿರ್ಮಾಣ ಆಗುತ್ತೆ ಎಂದಿದ್ದಾರೆ.

ಖಾಸಗಿ ಸಂಸ್ಥೆಗಳು ಬಿಲ್ಡಿಂಗ್ ನಿರ್ಮಾಣ ಮಾಡಿಕೊಟ್ರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಎಜುಕೇಶನ್ ಡಿಸೈನ್ ನೀಡ್ತಾರೆ. ದೇಶಕ್ಕೆ ಮಾದರಿ ಕಾರ್ಯಕ್ರಮ ಮಾಡುವ ಉದ್ದೇಶ ಇದೆ. ರಾಮನಗರ ಜಿಲ್ಲೆಯನ್ನ‌ ಮಾಡ್ರನ್ ಜಿಲ್ಲೆಯಾಗಿ ಮಾಡ್ತೇವೆ. ಅದಕ್ಕಾಗಿ ಇಲ್ಲಿಂದಲೇ ಈ ಯೋಜನೆ ಆರಂಭಕ್ಕೆ ಸಿದ್ಧತೆ ಮಾಡ್ತಿದ್ದೇವೆ. ಚುನಾವಣೆ ಮುಗಿದ ಬಳಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನಗರ ಬೆಂಗಳೂರು ಸೇರ್ಪಡೆ ಬಗ್ಗೆ ಪುನರುಚ್ಚರಿಸಿದ ಡಿ.ಕೆ. ಶಿವಕುಮಾರ್: ಸರ್ಕಾರದ ಪ್ಲಾನ್​ ಏನು ಗೊತ್ತಾ?

https://newsfirstlive.com/wp-content/uploads/2024/03/D-K-Shivakumar.jpg

Load More