/newsfirstlive-kannada/media/post_attachments/wp-content/uploads/2025/05/DK-SHIVAKUMAR-9.jpg)
ಬೆಂಗಳೂರು ಅಭಿವೃದ್ಧಿ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮದ ವಿಚಾರವಾಗಿ ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಗ್ರೇಟರ್ ಬೆಂಗಳೂರು ಅಥಾರಿಟಿ ಆಗಿ ನೋಟಿಪಿಕೇಷನ್ ಆಗಿದೆ. ಈ ಸಂಬಂಧ ಶಾಸಕರ ಸಲಹೆ ಕೇಳಿದ್ದೇನೆ. ಎಷ್ಟು ಕಾರ್ಪೋರೇಷನ್ ಆಗಬೇಕು ಎಂದು ಸಲಹೆ ಕೇಳಿದ್ದೇನೆ. ಸೆಪ್ಟೆಂಬರ್ 15 ಒಳಗಾಗಿ ಹೊಸ ಗ್ರೆಟರ್ ಬೆಂಗಳೂರು ಪ್ರಾಧಿಕಾರ ಆರಂಭ ಆಗಲಿದೆ. ಪ್ರೊಜೆಕ್ಟ್ ತಕ್ಕಂತೆ ಬಜೆಟ್ ಕೊಡಲು ಸರ್ಕಾರ ಸಿದ್ಧವಾಗಿದೆ ಎಂದರು.
ಕುಡಿಯುವ ನೀರಿಗೆ ಪ್ಲಾನ್ ಆ್ಯಕ್ಸನ್ ಮಾಡಿದ್ದೇವೆ. ಇಡೀ ಬೆಂಗಳೂರಲ್ಲಿ ಫುಟ್​ಪಾತ್​ ವ್ಯಾಪಾರ ನಿಲ್ಲಿಸುತ್ತೇವೆ. ನಾವು ಹೇಳಿದ ಜಾಗದಲ್ಲಿ ಮಾತ್ರವೇ ವ್ಯಾಪಾರ ಮಾಡಬೇಕು. 3755 ಜನ ತಳ್ಳುವ ಗಾಡಿ ಕೇಳಿದ್ದಾರೆ. ಕಾನೂನಿನಲ್ಲಿ ಪುಟ್​ಪಾತ್​ನಲ್ಲಿ ಅಂಗಡಿ ಹಾಕುವಂತಿಲ್ಲ. ಹೀಗಾಗಿ ಪ್ಲಾನ್ ಆಫ್ ಆ್ಯಕ್ಸನ್ ಅಂಗಡಿ ಹಾಕಲು ಅವಕಾಶ ಮಾಡಿಕೊಡುತ್ತೇವೆ.
ಇದನ್ನೂ ಓದಿ: ದೇವರ ಹೆಸರಲ್ಲಿ ಹಣಕ್ಕಾಗಿ ಡಿಮ್ಯಾಂಡ್.. ಕೊಡದಿದ್ದಕ್ಕೆ ದಾರಿಹೋಕನಿಗೆ ಚಾಟಿ ಏಟು..?
ಟೌನ್​​ಪ್ಲಾನ್​​ನಲ್ಲಿ ಬೇಸ್​ಮೆಂಟ್ ಮಾಡುವಂತಿಲ್ಲ. ಈಗಾಗಲೇ ಬಹಳಷ್ಟು ಕಡೆ ಪಾರ್ಕಿಂಗ್​ಗಾಗಿ ಬೇಸ್ಮೆಂಟ್ ಮಾಡಿದ್ದಾರೆ. ಬೆಂಗಳೂರು ನಗರದ ಆಸ್ತಿಗಳಿಗೆ ಇ-ಖಾತಾ ಮಾಡಲು ಹೇಳಿದ್ದೇನೆ. ಡಿಜಿಟಲೀಕರಣ ಮೂಲಕ ದಾಖಲೆ ನೀಡಲು ಮುಂದಾಗಿದ್ದೇವೆ. ಇ-ಖಾತೆಯಲ್ಲಿ ಬೆಂಗಳೂರಿನ ಜನರಿಗೆ ಆಸ್ತಿಗಳ ದಾಖಲೆಯನ್ನು ಒದಗಿಸುವ ಕೆಲಸ ಮಾಡ್ತೇವೆ ಎಂದರು.
ಇದನ್ನೂ ಓದಿ: ಮತ್ತೆ ಬಂತು ಕೊರೊನಾ.. ಈ ಮೂರು ಸಾಧನಗಳು ನಿಮ್ಮ ಮನೆಯಲ್ಲಿ ಇರಲೇಬೇಕು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us