ಡಿಕೆ ಶಿವಕುಮಾರ್ ಹವ್ಯಾಸವೇನು? ಕವನ ಬರೆಯುತ್ತಾರಾ? ಈ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಡಿಸಿಎಂ

author-image
AS Harshith
Updated On
ಡಿಕೆ ಶಿವಕುಮಾರ್ ಹವ್ಯಾಸವೇನು? ಕವನ ಬರೆಯುತ್ತಾರಾ? ಈ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಡಿಸಿಎಂ
Advertisment
  • ಕರ್ನಾಟಕ ಲೋಕಸಭಾ ಚುನಾವಣೆಗೆ ನಾಳೆ ಒಂದೇ ದಿನ ಬಾಕಿ
  • ಮನೆ, ಮಕ್ಕಳು, ವಿದ್ಯಾಭ್ಯಾಸದ ಬಗ್ಗೆ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಡಿಕೆಶಿ
  • ಡಿಕೆಶಿಯವರಿಗೆ ಪತ್ನಿ ವಿಚಾರದಲ್ಲಿ ಇಷ್ಟವಾಗುವ ಗುಣ ಯಾವುದು ಗೊತ್ತಾ?

ಕರ್ನಾಟಕ ಲೋಕಸಭಾ ಚುನಾವಣೆಗೆ ನಾಳೆ ಒಂದೇ ದಿನ ಬಾಕಿ ಇದೆ. ಈಗಾಗಲೇ ರಾಜ್ಯ ರಾಜಕಾರಣಿಗಳು ಬಿರುಸಿನ ಮತ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್​ ಡಿಸಿಎಂ ಡಿಕೆ ಶಿವಕುಮಾರ್​ ನ್ಯೂಸ್​​ ಫಸ್ಟ್​ ಜೊತೆಗೆ ಮಾತನಾಡಿದ್ದು, ಮಕ್ಕಳು, ಅವರ ವಿದ್ಯಾಭ್ಯಾಸ ಕುರಿತಾದ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಡಿಸಿಎಂಗೆ ಆದ ನಂತ್ರ ಕುಟುಂಬಕ್ಕೆ ಎಷ್ಟು ಸಮಯ ಕೊಡ್ತಾ ಇದ್ದೀರಾ?

ಅಯ್ಯೋ.. ಪಾಪ ಬಿಡಿ ಬೇಜಾರು ಮಾಡಿಕೊಳ್ತೀರಾ. ಬೇರೆ ಹೆಣ್ಣು ಮಕ್ಕಳು ನೋಡಿ ಬೈತಾರೆ. ಇವ್ನು ಸಂಸಾರಕ್ಕೆ ಟೈಮೇ ಕೊಡ್ತಾ ಇಲ್ಲ ಅಂತ. ಈಗ ಅದನ್ನ ಮಾತಾಡೋದು ಬೇಡಾ ಬಿಡಿ.

ಮೇಡಂ ಅವರ ವಿಚಾರದಲ್ಲಿ ಇಷ್ಟವಾದ ಗುಣ ಏನು?

ಪರ್ಸನಲ್​ ಲೈಫ್​ ಎಲ್ಲ ಬೇಡ. ನಮ್​ ಹೆಣ್ಣು ಮಕ್ಕಳು ನಮ್ಮ ಮನೆ ಮಕ್ಕಳು ಮನೆಯಲ್ಲೇ ಇರಲಿ. ಈಗೆಲ್ಲಾ ಸುದ್ದಿ ಮಾತನಾಡೋದು ಬೇಡ ಬಿಡಿ.

ಮಕ್ಕಳು ಬೆಳೆದಂತೆ ವಿಚಾರದಲ್ಲಿ ಏನು ಅನಿಸುತ್ತೆ ನಿಮಗೆ?

ನೋಡಪ್ಪಾ.. ನಾನು ಉತ್ತಮ ಮಕ್ಕಳನ್ನು ಪಡೆಯಲು ಪುಣ್ಯ ಮಾಡಿದ ವ್ಯಕ್ತಿ. ಎಲ್ಲಾ ಫಸ್ಟ್​ ಕ್ಲಾಸ್​ ಓದಿದ್ದಾರೆ. ಒಳ್ಳೆಯ ವಿದ್ಯಾಭ್ಯಾಸ ಪಡೆದಿದ್ದಾರೆ ಅವರಿಗೆ. ಅವರಿಗೆಲ್ಲಾ ಒಂದು ಶಕ್ತಿ ಬಂದಿದೆ. ನನಗೆ ಸಾಕು. ಒಳ್ಳೆಯ ವಿದ್ಯಾಭ್ಯಾಸ ಪಡೆದು ಜನರತ್ರ ಒಳ್ಳೆಯ ಹೆಸರು ತಂದ್ಕೊಂಡಿದ್ದಾರೆ. ರಾಜಕಾರಣಿ ಮಕ್ಕಳು ಬಹಳ ಹುಷಾರಾಗಿ ಇರಬೇಕು. ನೂರಾರು ಕಣ್ಣು ಇಟ್ಟಿರುತ್ತಾರೆ. ತಪ್ಪು ದಾರಿಗೆ ಎಳಿಯೋರು ವಿಪರೀತ ಜನರು ಕಾದುಕೊಂಡಿರುತ್ತಾರೆ. ಅಂತದರಲ್ಲಿ ನಮ್​ ಮನೆಯಲ್ಲಿ ಬಹಳ ಚೆನ್ನಾಗಿ ಅವರನೆಲ್ಲ ಕಾಪಾಡಿ ನೋಡಿಕೊಂಡಿದ್ದಾರೆ. ಅವರು ಕೂಡ ಸುಸಂಸ್ಕೃತರು ಆಗಿದ್ದಾರೆ. ನಾನು ಖಾಸಗಿ ಜೀವನದ ವಿಚಾರದಲ್ಲಿ ತುಂಬಾ ಪುಣ್ಯ ಮಾಡಿದ ವ್ಯಕ್ತಿ .

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳಿಂದಲೇ ಕಿಡ್ನ್ಯಾಪ್​.. ಬೆತ್ತಲೆ ಮಾಡಿ, ಸಿಗರೇಟ್​ನಿಂದ ಚುಚ್ಚಿ, ಹಣ ರಾಬರಿ

ನಿಮ್ಮ ಹವ್ಯಾಸ ಎನು?

ಹವ್ಯಾಸ ಏನಿಲ್ಲ. ಜನರನ್ನು ನೋಡೋದೆ ಹವ್ಯಾಸ.

ಕವನ ಬರೆಯಲು ತೊಡಗಿಸಿಕೊಂಡಿದ್ದೀರಾ?

ಏನಿಲ್ಲ. ನನ್ನ ಅನುಭವದ ಮೇಲೆ ಕೆಲವೊಂದು ಮಾತುಗಳು ಆ ರೀತಿ ಬರ್ತಾ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment