ಕೆಲಸವೇ ನನ್ನ ಶಕ್ತಿ, ಕೋಪವೇ ನನ್ನ ವೀಕ್ನೆಸ್.. ಅಭ್ಯರ್ಥಿ ಡಿ.ಕೆ ಸುರೇಶ್ ಬಿಚ್ಚಿಟ್ರು ಎದುರಾಳಿಯ ಕುರಿತು ಅಚ್ಚರಿಯ ಮಾಹಿತಿ

author-image
AS Harshith
Updated On
Lok Sabha Election 2024: ಕರ್ನಾಟಕದ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ? ಇವರ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!
Advertisment
  • ಅತ್ತಿಗೆ ಮತ್ತು ಐಶ್ವರ್ಯಾ ಪ್ರಚಾರಕ್ಕೆ ಇಳಿದಿರೋ ಬಗ್ಗೆ ಏನಂದ್ರು ಗೊತ್ತಾ?
  • ಎದುರಾಳಿಯನ್ನ ಹೇಗೆ ನೋಡ್ತಾರಂತೆ ಲೋಕಸಭಾ ಅಭ್ಯರ್ಥಿ ಡಿ.ಕೆ ಸುರೇಶ್​?
  • ಡಿಕೆ ಸುರೇಶ್​ ಅವರಿಗೆ ಈ ಬಾರಿ ಯಾಕೆ ವೋಟ್​ ಮಾಡ್ಬೇಕು ಜನ? ಎನಂದ್ರು?

ಲೋಕಸಭಾ ಚುನಾವಣಾ ನಾಳೆ ಒಂದೇ ದಿನ ಬಾಕಿ. ಹೀಗಿರುವಾಗ ಬೆಂಗಳೂರು ಗ್ರಾಮಂತರ ಅಭ್ಯರ್ಥಿ ಡಿ.ಕೆ ಸುರೇಶ್​ ನ್ಯೂಸ್​ಫಸ್ಟ್ ಜೊತೆಗೆ ಮಾತನಾಡಿದ್ದಾರೆ. ಹಲವು ಕುತೂಹಲಕಾರಿ ಅಂಶಗಳನ್ನ ಬಿಚ್ಚಿಟ್ಟಿದ್ದಾರೆ.

ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಭಯ ಇದೆನಾ?

ವಿರೋಧಿಗಳಿಗೆ ನನ್ನ ಭಯ ಇದೆ. ಜನಸಾಮಾನ್ಯರಿಗೆ ನನ್ನ ಭಯವಿಲ್ಲ. ಎಲ್ಲಿ ನಾನು ಚುನಾವಣೆಯಲ್ಲಿ ಗೆದ್ರೆ ಮುಂದಕ್ಕೆ ಅವರ ಭವಿಷ್ಯ ಕುಂಠಿತ ಆಗುತ್ತದೆ ಅಂತಕಂತ ಭಯ ಅವರಿಗೆ ಕಾಡ್ತಾಯಿದೆ. ಅವರಿಗೆ ಅವರ ಅಸ್ಥಿತ್ವ ಹೊರಟೋಗಬಹುದು ಎಂಬ ಭಯವಿದೆ. ಹಾಗಾಗಿ ಅಪಪ್ರಚಾರ ಮಾಡ್ತಾರೆ.

ಮೈತ್ರಿ ಅಭ್ಯರ್ಥಿ ಡಾ. ಸಿ ಎನ್​ ಮಂಜುನಾಥ್​ ಬಗ್ಗೆ ಏನು ಹೇಳುತ್ತೀರಿ?

ಅವರೊಂದು ವೈದ್ಯಕೀಯ ಸಂಸ್ಥೆಯಲ್ಲಿ ಸರ್ಕಾರಿ ಹುದ್ದೆ ಡೈರೆಕ್ಟರ್​ ಆಗಿ ಕೆಲಸ ಮಾಡಿದ್ದಾರೆ. ಆಡಳಿತ ಅಧಿಕಾರಿಯಾಗಿ ಮಾಡಿದ್ದಾರೆ ಹೊರತು ಬೇರೇನು ಹೆಚ್ಚಿನ ಹೇಳುವ ವಿಚಾರಗಳಿಲ್ಲ. ಅಲ್ಲಿ ಸುಮಾರು 220 ಜನರು ಡಾಕ್ಟರ್ಸ್​ ಇದ್ದಾರೆ. ಸುಮಾರು 700ಕ್ಕೂ ಹೆಚ್ಚು ಜನ ತಂಡಗಳು ಬೇರೆ ಬೇರೆ ಉದ್ಯೋಗಿಗಳಿದ್ದಾರೆ. ಹಲವಾರು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ಚುನಾವಣೆ ಮುಗಿದ ಬಳಿಕ ಆ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದೇನೆ.

ಇದನ್ನೂ ಓದಿ: ಡಿ ಕೆ ಶಿಯವರ ಹವ್ಯಾಸವೇನು? ಕವನ ಬರೆಯುತ್ತಾರಾ? ಈ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಡಿಸಿಎಂ

ನಿಮ್ಮ ಎದುರಾಳಿಯನ್ನ ಹೇಗೆ ನೋಡ್ತೀರಿ?

ನನಗೆ ಎದುರಾಳಿ ಯಾರು ಇಲ್ಲ. ನನಗೆ ಕಾಣಿಸ್ತಾ ಇರೋದು ಮೋದಿಯವರೊಬ್ಬರೇ.

ಡಿಕೆ ಸುರೇಶ್​ ಅವರಿಗೆ ಈ ಬಾರಿ ಯಾಕೆ ವೋಟ್​ ಮಾಡ್ಬೇಕು ಜನ?

ಅಭಿವೃದ್ಧಿಗೆ ವೋಟ್​ ಮಾಡಬೇಕು. ಅಭಿವೃದ್ಧಿ ಪಡ ವೋಟ್​ ಮಾಡ್ಬೇಕು. ಕ್ಷೇತ್ರದಲ್ಲಿ ನಿರಂತರವಾಗಿ ಏನು ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಅದಕ್ಕೆ ವೋಟ್​ ಮಾಡಿದ್ದೇನೆ ಅಂತ ಕೇಳ್ತಾ ಇದ್ದೇನೆ. ನಾನು ಮಾಡಿರುವ ಕೆಲಸಗಳು ಪ್ರತಿಯೊಬ್ಬರನ್ನು ಮುಟ್ಟಿದೆ. ಜೊತೆಗೆ ಕನ್ನಡಿಗರ ತೆರಿಗೆ ಪಾಲು ಬಹಳ ಪ್ರಮುಖವಾಗಿ ಇವತ್ತು ಅನ್ಯಾಯವಾಗುತ್ತಿದೆ. ಅನ್ಯಾಯದ ಪರ ಧ್ವನಿ ಎತ್ತಿದ್ದೇನೆ. ಇಂದು ರಾಷ್ಟ್ರವ್ಯಾಪ್ತಿಯಲ್ಲಿ ಚರ್ಚೆ ನಡೆಯುತ್ತಿದೆ. ಇವತ್ತು ಯಾರು ಪ್ರಶ್ನೆ ಮಾಡುತ್ತಿಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.

ಯಾರು ನಿಮ್ಮ ಶಕ್ತಿ? ವೀಕ್ನೆಸ್​?

ಕೆಲಸವೇ ನನ್ನ ಶಕ್ತಿ, ಕೋಪವೇ ನನ್ನ ವೀಕ್ನೆಸ್​​

ಡಿಕೆ ಶಿವಕುಮಾರ್​ ನಿಮ್ಮ ಶಕ್ತಿ ಅಂತ ಫೀಲ್​ ಆಗುತ್ತಾ?

ಪೊಲಿಟಿಕಲಿ ಅಲ್ಲ. ಕುಟುಂಬದಲ್ಲೂ ಅದೇ ರೀತಿ ಇದ್ದೀವಿ. ನನಗೆ ತಂದೆ ಸ್ಥಾನದಲ್ಲಿ ಆಶಿರ್ವಾದ, ಸಹೋದರ ಸ್ಥಾನದಲ್ಲಿ ಬೆಂಬಲ. ಸ್ನೇಹಿತನ ಸ್ಥಾನದಲ್ಲಿ ನನ್ನ ವಿಚಾರ ಕೇಳ್ತಾರೆ.

ಇದನ್ನೂ ಓದಿ: ಜೈ ಶ್ರೀರಾಮ ಎಂದ ಯುವಕನ ಮೇಲೆ 25ಕ್ಕೂ ಹೆಚ್ಚು ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ಆಸ್ಪತ್ರೆಗೆ ದಾಖಲು

ಅತ್ತಿಗೆ ಮತ್ತು ಐಶ್ವರ್ಯಾ ಪ್ರಚಾರದಲ್ಲಿ ತೊಡಗಿಸಿಕೊಂಡಿರೋದು ಏನು ಅನಿಸ್ತು?

ನನಗೆ ಆಶ್ಚರ್ಯ ಆಯ್ತು. ಎಲ್ಲರೂ ಮನೆಯಲ್ಲಿ ಚುನಾವಣೆ ಪ್ರಚಾರಕ್ಕೆ ಇಳಿದುಬಿಟ್ಟಿದ್ದಾರೆ. ವಿರೋಧ ಪಕ್ಷಗಳು ಕೂಡ ಎಲ್ಲರೂ ವಂಶ ಪೂರ್ತಿ ಪ್ರಚಾರಕ್ಕೆ ಇಳಿದಿರೋದರಿಂದ ಅವರಿಗೂ ಸ್ವಲ್ಪ ನಾವ್ಯಾಕೆ ಮನೆಯಲ್ಲಿ ಇರಬೇಕು ಎಂದು ಅವರು ಕೂಡ ಈ ಬಿಸಿಲಿಗೆ ಬಂದಿದ್ದಾರೆ.

ಐಶ್ವರ್ಯಾ ನನ್ನ ಮೇಲಿನ ಪ್ರೀತಿಗೆ ಪ್ರಚಾರಕ್ಕೆ ಬಂದಿದ್ದಾರೆ. ಅಣ್ಣ ಚುನಾವಣೆಗೆ ನಿಂತಾಗಲೂ ಬರಲಿಲ್ಲ. ಆದರೀಗ ನಾನು ಚುನಾವಣೆಗೆ ನಿಂತಾಗ ಬಂದಿದ್ದಾಳೆ ಎಂದು ಡಿಕೆ ಸುರೇರ್ಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment