/newsfirstlive-kannada/media/post_attachments/wp-content/uploads/2025/02/Dhananjay_Dhanyatha_2.jpg)
ಮೈಸೂರು: ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಸಾಂಸ್ಕೃತಿಕ ನಗರಿಯ ವಸ್ತು ಸಂಗ್ರಹಾಲಯ ಮೈದಾನದಲ್ಲಿ ನಡೆದ ಸಂಭ್ರಮದಲ್ಲಿ ಗುರು ಹಿರಿಯರು, ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಡಾಲಿ ಧನಂಜಯ ಅವರು ಧನ್ಯತಾ ಅವರಿಗೆ ತಾಳಿ ಕಟ್ಟಿ ಅಧಿಕೃತವಾಗಿ ಹೊಸ ಬಾಳಿಗೆ ವೆಲ್​ಕಮ್ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/02/Dhananjay_Dhanyatha_Wedding.jpg)
ಕಲ್ಯಾಣ ಮಂಟಪಕ್ಕೆ ಆಗಮಿಸಿದ ನವ ಜೋಡಿ ಧನು-ಧನ್ಯ ಹೊಸ ಡ್ರೆಸ್​ನಲ್ಲಿ ವಿಶೇಷವಾಗಿ ಕಾಣಿಸುತ್ತಿದ್ದರು. ಇಬ್ಬರ ಮೊಗದಲ್ಲೂ ಮದುವೆ ಕಳೆ ರಂಗೇರಿತ್ತು. ಇಬ್ಬರು ಮಂಟಪಕ್ಕೆ ಬಂದ ಮೇಲೆ ಕಂಕಣ ಕಟ್ಟಿ, ಬಾಸಿಂಗ ಧಾರಣೆ ಮಾಡಲಾಯಿತು. ಇದೇ ವೇಳೆ ಧನಂಜಯಗೆ ಅವರ ಮಾವ ಚಿನ್ನದ ಸರ ಹಾಗೂ ಬ್ರಾಸ್​ಲೈಟ್ ಹಾಕಿದರು. ಇದಾದ ಮೇಲೆ ಮಂಟಪದಲ್ಲಿ ಗೌರಿ ಪೂಜೆಯನ್ನು ವಿಜೃಂಭಣೆಯಿಂದ ಮಾಡಲಾಯಿತು.
/newsfirstlive-kannada/media/post_attachments/wp-content/uploads/2025/02/Dhananjay_Dhanyatha.jpg)
ಧನಂಜಯ ಹಾಗೂ ಧನ್ಯತಾ ಅವರ ಮೈಮನಗಳಲ್ಲಿ ಹೊಸ ಜೀವನದ ಹೊಸ ಕಳೆ ಎದ್ದು ಕಾಣುತ್ತಿತ್ತು. ಮಾಂಗಲ್ಯ ಧಾರಣೆಗೂ ಮೊದಲು ನವ ವರ-ವಧು ಇಬ್ಬರು ತಾಳಿಗೆ ಪೂಜೆ ಸಲ್ಲಿಕೆ ಮಾಡಿದರು. ಪೂಜಾರಿಯ ಮಂತ್ರಗಳನ್ನ ಪಠಣೆ ಮಾಡುತ್ತಿದ್ದಂತೆ ಡಾಕ್ಟರ್ ಆಗಿರುವ ಧನ್ಯತಾ ಅವರಿಗೆ ಧನಂಜಯ ತಾಳಿ ಕಟ್ಟಿದರು. ಧನ್ಯತಾ ತಾಳಿಯನ್ನು ಕಣ್ಣಿಗೆ ಒತ್ತಿಕೊಂಡು ನಮಸ್ಕರಿಸಿದರು. ಅಂತೂ ಸ್ಯಾಂಡಲ್​ವುಡ್​ ಮೋಸ್ಟ್ ಬ್ಯಾಚುಲರ್ ಬಾಯ್ ಡಾಲಿ ಅಧಿಕೃತವಾಗಿ ನ್ಯೂ​ ಲೈಫ್​ಗೆ ವೆಲ್​ಕಮ್ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/02/Dhananjay_Dhanyatha_1.jpg)
ಮೈಸೂರಿನ ವಸ್ತು ಸಂಗ್ರಹಾಲಯ ಮೈದಾನದಲ್ಲಿ ನಡೆದ ಧನಂಜಯ ಹಾಗೂ ಧನ್ಯತಾ ಮದುವೆಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳೆಲ್ಲ ಭಾಗವಹಿಸಿದ್ದರು. ರಕ್ಷಿತಾ ಪ್ರೇಮ್, ಶ್ರೀಮುರುಳಿ, ನಿರ್ದೇಶಕ ಪ್ರೇಮ್, ಅಮೂಲ್ಯ, ಮೇಘನಾ, ಸಪ್ತಮಿ ಗೌಡ, ವಸಿಷ್ಠ ಸಿಂಹ, ಕೆ.ಮಂಜು, ಕೆವಿನ್ ನಿರ್ಮಾಪಕರು, ಪ್ರಥಮ್, ರಂಗಾಯಣ ರಘು, ತೆಲುಗು ನಿರ್ದೇಶಕ ಸುಕುಮಾರ್ ಸೇರಿದಂತೆ ಎಲ್ಲ ನಟ-ನಟಿಯರು ಭಾಗಿಯಾಗಿದ್ದರು. ಮದುವೆಯಲ್ಲಿ ಅಭಿಮಾಗನಿಗಳಿಗೆ ಸ್ಪೆಷಲ್ ಎಂಟ್ರಿ ಏರ್ಪಾಡು ಮಾಡಲಾಗಿತ್ತು. ಕರ್ನಾಟಕದ ರಾಜ್ಯಪಾಲರು, ಬಿ.ವೈ ವಿಜಯೇಂದ್ರ, ಜಮೀರ್ ಅಹ್ಮದ್, ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ರಾಜಕೀಯ ಗಣ್ಯರು ಕೂಡ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಆಶೀರ್ವಾದ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us