Advertisment

ಡಾಲಿ ಕೈ ಹಿಡಿಯುವ ವೈದ್ಯೆ ಎಲ್ಲಿಯವರು? ಪರಿಚಯ ಹೇಗಾಯ್ತು?

author-image
AS Harshith
Updated On
ಡಾಲಿ ಧನಂಜಯ್​​, ಧನ್ಯತಾ ಪರಿಚಯ ಆಗಿದ್ದು ಹೇಗೆ? ಲವ್​ ಶುರುವಾಗಿದ್ದು ಎಲ್ಲಿಂದ? ಇಂಟ್ರಸ್ಟಿಂಗ್​ ಸ್ಟೋರಿ
Advertisment
  • ಮದುವೆಯಾಗಲು ರೆಡಿಯಾದ ಡಾಲಿ ಧನಂಜಯ್​
  • ವೈದ್ಯೆಯನ್ನು ಮದುವೆಯಾಗಲು ಮುಂದಾದ ಡಾಲಿ
  • ಮದ್ವೆ ಯಾವಾಗ ಗೊತ್ತಾ? ಎಲ್ಲಿ ವಿವಾಹವಾಗುತ್ತಿದ್ದಾರೆ?

ರಾಜ್ಯದಾದ್ಯಂತ ದೀಪಾವಳಿ ಮತ್ತು ಕನ್ನಡ ರಾಜೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಶುಭ ಸಂದರ್ಭದಲ್ಲಿ ಕನ್ನಡಿಗರ ನೆಚ್ಚಿನ ನಟ ಡಾಲಿ ಧನಂಜಯ್​ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಅದೇನೆಂದರೆ ತನ್ನ ಮನದರಸಿಯನ್ನು ಪರಿಚಯಿಸುವ ಮೂಲಕ ಮದುವೆಯಾಗುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisment

ಹೌದು. ಡಾಲಿ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ್ದಾರೆ. ಬಾಳ ಸಂಗಾತಿಯ ಜೊತೆಗೆ ವಿಡಿಯೋ ಹಂಚಿಕೊಳ್ಳುವ ಮೂಲಕ ಮದುವೆಯಾಗುವ ಬಗ್ಗೆ ತಿಳಿದಿದ್ದಾರೆ. ಅಂದಹಾಗೆಯೇ ಡಾಲಿ ಧನಂಜಯ್​ ಕೈ ಹಿಡಿಯುವ ವಧು ಯಾರು? ಆಕೆಯ ಹಿನ್ನೆಲೆ ಏನು? ಪರಿಚಯ ಹೇಗಾಯ್ತು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಡಾಲಿ ಜಾಲಿ.. ವೈದ್ಯೆ ಜೊತೆ ಮದ್ವೆಗೆ ರೆಡಿಯಾದ ನಟ ಧನಂಜಯ್​!

publive-image

ನಟ ಧನಂಜಯ್ ವೈದ್ಯೆಯನ್ನು ಕೈ ಹಿಡಿಯಲು ಮುಂದಾಗಿದ್ದಾರೆ. ಧನ್ಯತಾ ಎಂಬವರ ಜೊತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅಂದಹಾಗೆಯೇ ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಡಾಲಿ ಬಾಳ ಸಂಗಾತಿಯಾಗುತ್ತಿದ್ದಾರೆ .

ಧನ್ಯತಾ ಎಲ್ಲಿಯವರು?

Advertisment

ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ. ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಕೂಡ ಓದಿದ್ದು ಮೈಸೂರಿನಲ್ಲಿ. ಈಗ ಇವರಿಬ್ಬರು ತಮ್ಮ ಪ್ರೀತಿಗೆ ಮೂರು ಗಂಟು ಬಿಗಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: ಸೀರೆಯಲ್ಲಿ ರಾಮಾಚಾರಿ ಚಾರು ಲಕ ಲಕ ಮಿಂಚಿಂಗ್​; ಮೌನ ಗುಡ್ಡೆಮನೆ ಲುಕ್​ಗೆ ಫ್ಯಾನ್ಸ್​ ಏನಂದ್ರು?

ಮದುವೆ ಯಾವಾಗ?

Advertisment

ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಡಾಲಿ ಜೋಡಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಕವನ ಹೇಳುತ್ತಾ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಅಂದಹಾಗೆಯೇ ಇಬ್ಬರ ಮದುವೆ ಫೆಬ್ರವರಿಯಲ್ಲಿ ನಡೆಯಲಿದೆ. ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment