/newsfirstlive-kannada/media/post_attachments/wp-content/uploads/2025/02/daali3.jpg)
ಸ್ಯಾಂಡಲ್‌ವುಡ್ ಸ್ಟಾರ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರದುರ್ಗ ಮೂಲದ ಡಾ. ಧನ್ಯತಾ ಕೊರಳಿಗೆ ಗುರು ಹಿರಿಯರ, ಅಭಿಮಾನಿಗಳ ಸಮ್ಮುಖದಲ್ಲಿ ತಾಳಿ ಕಟ್ಟಿದ್ದಾರೆ ಡಾಲಿ. ಶುಭಲಗ್ನದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಆ್ಯಕ್ಟರ್ ಮತ್ತು ಡಾಕ್ಟರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಬಿಗ್ಬಾಸ್ ಸ್ಪರ್ಧಿ; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ನಟಿ ಅನುಷಾ ರೈ
ಡಾಲಿ ಮದುವೆಗೆ ಸಾವಿರಾರು ಮಂದಿ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಅಲ್ಲದೇ ಡಾಲಿ ಧನಂಜಯ್ ಮದುವೆಗೆ ಹಲವು ಸ್ಯಾಂಡಲ್‌ವುಡ್ ಕಲಾವಿದರು ಆಗಮಿಸಿ ನವಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ನಟ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಅಮೂಲ್ಯ ಜಗದೀಶ್, ರಮ್ಯಾ, ರಕ್ಷಿತಾ, ಪ್ರೇಮ್ ದಂಪತಿ ಸೇರಿದಂತೆ ಎಲ್ಲರೂ ಮದುವೆಗೆ ಬಂದು ಧನಂಜಯ ಹಾಗೂ ಧನ್ಯತಾ ಅವರಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ ನೆಚ್ಚಿನ ನಟನ ಮದುವೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಶುಭ ಹಾರೈಸಿದ್ದರು.
ಇನ್ನೂ, ಡಾಲಿ ಮದುವೆಗೆಂದು ಅಭಿಮಾನಿಯೊಬ್ಬರು ಉಡುಗೊರೆ ತೆಗೆದುಕೊಂಡು ನೇರವಾಗಿ ಮನೆಗೆ ಹೋಗಿದ್ದಾರೆ. ಅಭಿಮಾನಿಯೊಬ್ಬರು ಕೊಟ್ಟ ಗಿಫ್ಟ್ ಅನ್ನು ನೋಡಿ ನಟ ಡಾಲಿ ಧನಂಜಯ ಭಾವುಕರಾಗಿದ್ದಾರೆ. ಹೌದು, ನಟ ಡಾಲಿ ಅವರಿಗೆ ತಮ್ಮ ಅಜ್ಜಿ ಎಂದರೆ ಬಲು ಇಷ್ಟ. ಆದರೆ ಜುಲೈ 23ರಂದು ನಟನ ಅಜ್ಜಿ ಅಜ್ಜಿ ಮಲ್ಲಮ್ಮ (95) ವಯಸ್ಸಹಜ ಕಾಯಿಲೆಯಿಂದ ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಅಸುನೀಗಿದ್ದರು. ಮಲ್ಲಮ್ಮ ಅವರಿಗೆ ಒಟ್ಟು 5 ಜನ ಮಕ್ಕಳು. ಆ ಪೈಕಿ ಎರಡನೇ ಮಗ ಅಡವಿಸ್ವಾಮಿಯ ಮಗ ಧನಂಜಯ್. ಹೀಗಾಗಿ ಡಾಲಿ ಎಂದರೆ ಮಲ್ಲಮ್ಮ ಅವರಿಗೂ ಇಷ್ಟ ಇತ್ತು.
View this post on Instagram
ಇದನ್ನೂ ಓದಿ:ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟ ಸಖತ್ ಹ್ಯಾಂಡ್ಸಮ್ ಹೀರೋ; ಯಾರು ಈ ಮನೋಜ್ ಕುಮಾರ್!
ಹೀಗೆ ಅಭಿಮಾನಿಯೊಬ್ಬರು ಡಾಲಿ ಧನಂಜಯ ಅವರಿಗೆ ಫೋಟೋ ಫ್ರೇಮ್ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಅಭಿಮಾನಿ ಕೊಟ್ಟ ಫ್ರೇಮ್ನಲ್ಲಿ ಡಾಲಿ, ಧನ್ಯತಾ ಹಾಗೂ ಅವರ ಅಜ್ಜಿ ಮಲ್ಲಮ್ಮ ಭಾವಚಿತ್ರ ಇದೆ. ಇದನ್ನೇ ನೋಡಿದ ಡಾಲಿ ಭಾವುಕರಾಗಿದ್ದಾರೆ. ಇದೇ ವೇಳೆ ಅಷ್ಟು ಫೋಟೋಗಳಲ್ಲಿ ಇವನು ಕೊಟ್ಟಿರೋದೆ ಬೆಸ್ಟ್ ಫೋಟೋ, ಬೆಸ್ಟ್ ಗಿಫ್ಟ್ ಕಣೋ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ