Photos; ಡಾಲಿ ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಸಂಭ್ರಮ.. ಇಂದು ಅದ್ಧೂರಿ ಆರತಕ್ಷತೆ

author-image
Bheemappa
Updated On
Photos; ಡಾಲಿ ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಸಂಭ್ರಮ.. ಇಂದು ಅದ್ಧೂರಿ ಆರತಕ್ಷತೆ
Advertisment
  • ನಟಿ ಸಪ್ತಮಿ ಗೌಡ, ಕಾರ್ತಿಕ್ ಗೌಡ, ಬಿ.ಸಿ ಪಾಟೀಲ್ ಶುಭ ಹಾರೈಕೆ
  • ಸಂಭ್ರಮ ಹಬ್ಬವನ್ನೇ ಸೃಷ್ಟಿಸಿದ್ದ ಧನಂಜಯ್-ಧನ್ಯತಾ ಹಳದಿ ಶಾಸ್ತ್ರ
  • ಹಳದಿ ಶಾಸ್ತ್ರದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು ಭಾಗಿ

ಟಗರು ಡಾಲಿ ಬದುಕಲ್ಲಿ ಪ್ರೇಮದ ಮಾನ್ಸೂನ್ ರಾಗ ಬೀಸುತ್ತಿದೆ. ಡಾಕ್ಟರ್ ಧನ್ಯತಾ ಕೈ ಹಿಡಿಯೋದಕ್ಕೆ ಸಜ್ಜಾಗಿರುವ ಧನಂಜಯ ಇಂದು ಆರತಕ್ಷತೆಯ ಅಂಗಳದಲ್ಲಿ ಸಂಭ್ರಮಿಸಲಿದ್ದಾರೆ. ಇದಕ್ಕೂ ಮುನ್ನ ಹಳದಿ ಶಾಸ್ತ್ರ ಸಂಭ್ರಮ ಕಳೆಗಟ್ಟಿತ್ತು.

publive-image

ಡಾಲಿ ಧನಂಜಯ ಮದುವೆಗೆ ಮೈಸೂರಲ್ಲಿ ಸಿದ್ಧತೆ ಜೋರಾಗಿ ನಡೀತಿದೆ. ಡಾಕ್ಟರ್ ಧನ್ಯತಾ ಜೊತೆ ಪ್ರೇಮ ಚಿಕಿತ್ಸೆ ಪಡೆಯಲು ಸಜ್ಜಾಗಿರೋ ಧನಂಜಯ, ಬದುಕಿನ ಧನ್ಯ ಕ್ಷಣಗಳಲ್ಲಿ ಜೀವಿಸಲು ಸಿದ್ಧರಾಗಿದ್ದಾರೆ. ಮದುವೆಯ ಮಾನ್ಸೂನ್ ರಾಗದಲ್ಲಿ ಪ್ರೇಮ ಶೃತಿಯ ನಾದ ಕೇಳಿ ಬರ್ತಿದೆ. ಇಂದು ಆರತಕ್ಷತೆಯ ಅಕ್ಷತೆ ಕಾಳು ಧನಂಜಯ್-ಧನ್ಯಾ ಜೋಡಿಯನ್ನ ಹಾರೈಸಲು ಸಜ್ಜಾಗಿದೆ. ಇದಕ್ಕೂ ಮೊದಲು ಹಳದಿ ಶಾಸ್ತ್ರದ ಸಂಭ್ರಮ ಹಬ್ಬವನ್ನೇ ಸೃಷ್ಟಿಸಿತ್ತು.

publive-image

ಮೈಸೂರಿನಲ್ಲಿ ನಡೆದ ಹಳದಿ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಗೆಳೆಯರು ಭಾಗಿಯಾಗಿದ್ದರು. ಸಂಭ್ರಮದಿಂದ ನೆರವೇರಿದ ಹಳದಿ ಶಾಸ್ತ್ರದಲ್ಲಿ ಡಾಲಿ ಧನಂಜಯ ಮತ್ತು ಧನ್ಯತಾ ಬಣ್ಣದ ಬದುಕಿಗೆ ಚಿನ್ನದ ಹೆಜ್ಜೆ ಇಟ್ಟಿದ್ದಾರೆ. ಹೊಸ ಜೋಡಿಗೆ ಸಪ್ತಮಿ ಗೌಡ, ಕಾರ್ತಿಕ್ ಗೌಡ, ಬಿ.ಸಿ. ಪಾಟೀಲ್ ಸೇರಿದಂತೆ ಆಪ್ತಬಳಗ ಶುಭ ಹಾರೈಸಿದೆ.

ಇದನ್ನೂ ಓದಿ:ನಾನು ಹೈದರಾಬಾದ್​ನಿಂದ ಬಂದವಳು: ನಟಿ ರಶ್ಮಿಕಾ ಮಾತಿಗೆ ಕೆರಳಿ ಕೆಂಡವಾದ ಕನ್ನಡಿಗರು

publive-image

ಮೈಸೂರು ವಸ್ತು ಸಂಗ್ರಹಾಲಯ ಮೈದಾನದಲ್ಲಿ ಆರತಕ್ಷತೆ 

ಮೈಸೂರು ವಸ್ತು ಸಂಗ್ರಹಾಲಯ ಮೈದಾನದಲ್ಲಿಂದು ಡಾಲಿ ಧನಂಜಯ ಮತ್ತು ಧನ್ಯತಾ ಆರತಕ್ಷತೆ ನಡೆಯಲಿದೆ. ಮೊದಲಿಗೆ ಬೆಳಗ್ಗೆ 10 ಗಂಟೆಗೆ ಮದುವೆ ಸಿದ್ಧತೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಬಹುಕಾಲದ ಗೆಳತಿ ಜೊತೆಗೆ ಸಂಜೆ ಗ್ರ್ಯಾಂಡ್ ರಿಸೆಪ್ಶನ್ ನಡೆಯಲಿದೆ. ಆರತಕ್ಷತೆಯಲ್ಲಿ ವಧು ವರರನ್ನ ಹಾರೈಸಲು ಬರೋಬ್ಬರಿ 30 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಸೇರುವ ಸಾಧ್ಯತೆಗಳಿವೆ.

publive-image

ಹೀಗಾಗಿ ಬಂದ ಅಷ್ಟೂ ಅಭಿಮಾನಿಗಳಿಗೆ ಒಬ್ಬಟ್ಟಿನ ಬಾಳೆಎಲೆ ಊಟ ಹಾಕಲು ತಯಾರಿ ನಡೆದಿದೆ. ಸಂಜೆ ರಿಸೆಪ್ಶೆನ್ ಮುಗೀತಿದ್ದಂತೆ ನಾಳೆ ಡಾಕ್ಟರ್​ ಹಾಗೂ ಆ್ಯಕ್ಟರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮೂಲಕ ರತ್ನನ್ ಪರಪಂಚದಲ್ಲಿ ಧನ್ಯಾ ಪಾಠ ಆರಂಭವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment