/newsfirstlive-kannada/media/post_attachments/wp-content/uploads/2025/02/dolly-dhananjay-marriage-9.jpg)
ಮೈಸೂರು: ಸ್ಯಾಂಡಲ್ವುಡ್ ಡಾಲಿ ಕಲ್ಯಾಣೋತ್ಸವ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಸಾಕ್ಷಿಯಾಗಿದೆ. ಅದ್ಧೂರಿ ಅರತಕ್ಷತೆಯಲ್ಲಿ ಚಂದನವನದ ನಟ-ನಟಿಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ. ಇಂದು ಡಾಕ್ಟರ್-ಌಕ್ಟರ್ ವಿವಾಹವಾಗಲಿದ್ದು, ಬೆಳಗ್ಗೆಯಿಂದಲೇ ಮದುವೆ ಶಾಸ್ತ್ರಗಳು ಆರಂಭವಾಗಿದೆ.
ಟಗರು ಡಾಲಿ ಬದುಕಲ್ಲಿ ಪ್ರೇಮದ ಮಾನ್ಸೂನ್ ರಾಗ ಬೀಸ್ತಿದೆ. ಮೈಸೂರಲ್ಲಿ ಧನಂಜಯ್-ಧನ್ಯತಾ ಮದುವೆ ಸಂಭ್ರಮ ಕಳೆಗಟ್ಟಿದೆ. ಶಾಸ್ತ್ರಗಳ ಸಡಗರ.. ಅರತಕ್ಷತೆಯ ಅಬ್ಬರ.. ನಮ್ಮ ಡಾಲಿ ಮದುವೆ ಬಲು ಜೋರು .. ಜೋರು!
ಌಕ್ಟರ್.. ಡಾಕ್ಟರ್ ಕಂಕಣಕ್ಕೆ ಇನ್ನೇನು ಕೆಲವೇ ಕ್ಷಣಗಳು ಮಾತ್ರ ಬಾಕಿಯಿದೆ. ಇನ್ನೆರಡು ಗಂಟೆಯಲ್ಲಿ ಹಸೆಮಣೆ ತುಳಿಯಲಿರೋ ಜೋಡಿ ಬೆಳಗ್ಗೆಯಿಂದಲೇ ಶಾಸ್ತ್ರಗಳ ಸಡಗರದಲ್ಲಿ ಮಿಂದೆಳ್ತಿದೆ. ಡಾಲಿ-ಧನ್ಯತಾ ಹಸೆಮಣೆ ಏರ್ತಿರೋ ಲಗ್ನ ತುಂಬ ವಿಶೇಷವಾದ ಲಗ್ನವಂತೆ. ಲಕ್ಷ ದೋಷ ಇದ್ರೂ ನಿವಾರಣೆ ಆಗೋ ಲಗ್ನ ಇದಂತೆ. ಬೆಳಗ್ಗೆ 8 ಗಂಟೆಯಿಂದ 10.30ರ ತನಕ ಲಗ್ನ ಇದೆ. ಗಣಪತಿ ಚೌತಿ ಇರೋದ್ರಿಂದ ಈ ಲಗ್ನ ತುಂಬಾ ಸ್ಪೆಷಲ್ ಅನ್ನೋದು ಪುರೋಹಿತರ ಮಾತು. ಈ ವಿಶೇಷ ಲಗ್ನದಲ್ಲಿ ಡಾಲಿ ಬದುಕು ವಿವಾಹದ ಮೂಲಕ ಧನ್ಯವಾಗಲಿದೆ.
ರೆಸೆಪ್ಷನ್ಗೆ ಸ್ಯಾಂಡಲ್ವುಡ್ ಗಣ್ಯರು
ಇನ್ನೂ, ರಾತ್ರಿ ಮೈಸೂರಿನಲ್ಲಿ ಆರಕ್ಷತೆ ಅದ್ಧೂರಿಯಾಗಿ ನಡೆದಿದೆ. ಸ್ಯಾಂಡಲ್ವುಡ್ನ ಗಣ್ಯರು, ರಾಜಕೀಯ ಮುಖಂಡರು, ಆಪ್ತರು ಆಗಮಿಸಿ ಶುಭ ಹಾರೈಸಿದ್ರು. ರೋರಿಂಗ್ ಸ್ಟಾರ್ ಶ್ರೀಮುರುಳಿ ಡಾಲಿಗೆ ಜೋಡಿಗೆ ವಿಶ್ ಮಾಡಿ ಮ್ಯಾರೇಜ್ ಲೋಕಕ್ಕೆ ವೆಲ್ಕಮ್ ಮಾಡಿದ್ರು. ಇದರ ಜೊತೆಗೆ ನಟರಾದ ಉಪೇಂದ್ರ, ಅಜಯ್ ರಾವ್, ಅಭಿಷೇಕ್ ಅಂಬರೀಶ್ ಸೇರಿ ಹಲವರು ಆಗಮಿಸಿ ಡಾಲಿ ಆರತಕ್ಷತೆಗೆ ಸಾಕ್ಷಿಯಾದ್ರು.
ಧನಂಜಯ್-ಧನ್ಯತಾ ಅದ್ಧೂರಿ ಆರತಕ್ಷತೆಗೆ ನಟಿಯರ ದಂಡೇ ಹರಿದು ಬಂದಿತ್ತು. ಶರ್ಮಿಳಾ ಮಾಂಡ್ರೆ, ಸಪ್ತಮಿ ಗೌಡ, ರಕ್ಷಿತಾ ಪ್ರೇಮ್, ಶ್ರದ್ಧಾ ಶ್ರೀನಾಥ್, ನಿಧಿ ಸುಬ್ಬಯ್ಯ ಸೇರಿ ಹಲವರು ಆಗಮಿಸಿ ವಿಶ್ ಮಾಡಿದ್ರು. ಇನ್ನುಳಿದಂತೆ ಮಾಳವಿಕ ಅವಿನಾಶ್, ರಂಗಾಯಣ ರಘು, ಆಲ್ ಓಕೆ, ಪ್ರಥಮ್ ಹೀಗೆ ಸಿನಿಮಂದಿಯ ದಂಡೇ ರಿಸೆಪ್ಶನ್ನಲ್ಲಿ ಹರಿದುಬಂದಿತ್ತು.
ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್, ಅಶ್ವತ್ಥ್ ನಾರಾಯಣ್, ಶ್ರೀರಾಮುಲು, ಸೋಮಣ್ಣ ಸೇರಿ ಹಲವು ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ರು. ಸಚಿವ ಜಮೀರ್ ಕೂಡ ಆಗಮಿಸಿದ್ದು, ವೇದಿಕೆಯಲ್ಲಿ ವಿಶ್ ಮಾಡಿದ ಬಳಿಕ ಧನಂಜಯ್ಗೆ ಸಿಹಿಮುತ್ತೊಂದನ್ನ ನೀಡಿ ಹಾರೈಸಿದ್ರು
ಅದ್ಧೂರಿ ಆರತಕ್ಷತೆ ಮುಗಿಸಿರೋ ಡಾಲಿ-ಧನ್ಯಾ ಜೋಡಿ ಇದೀಗ ಸಪ್ತಪದಿ ತುಳಿಯೋದಕ್ಕೆ ಸಜ್ಜಾಗಿದ್ದಾರೆ. ಡಾಕ್ಟರ್, ಆ್ಯಕ್ಟರ್ ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಸತಿಪತಿಯಾಗಲಿದ್ದು, ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ:ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ; ಕುಂಭಮೇಳಕ್ಕೆ ಹೋಗುತ್ತಿದ್ದ 18 ಮಂದಿ ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ