ಮದುವೆ ವೇದಿಕೆಯಲ್ಲೇ ನನ್ನನ್ನು ಕ್ಷಮಿಸಿ ಎಂದ ಡಾಲಿ; ಕ್ಷಮೆ ಕೇಳಲು ಕಾರಣವೇನು?

author-image
Ganesh Nachikethu
Updated On
ಮದುವೆ ವೇದಿಕೆಯಲ್ಲೇ ನನ್ನನ್ನು ಕ್ಷಮಿಸಿ ಎಂದ ಡಾಲಿ; ಕ್ಷಮೆ ಕೇಳಲು ಕಾರಣವೇನು?
Advertisment
  • ನಟ ಡಾಲಿ ಧನಂಜಯ್‌ ಹಾಗೂ ಧನ್ಯತಾ ಅದ್ಧೂರಿ ವಿವಾಹ
  • ಕುಟುಂಬಸ್ಥರು, ಫ್ಯಾನ್ಸ್​ ಮತ್ತು ಗಣ್ಯರ ಸಮ್ಮುಖದಲ್ಲಿ ಮದುವೆ
  • ಮದುವೆ ಮಂಟಪದಲ್ಲೇ ಕ್ಷಮೆ ಕೋರಿದ ನಟ ಧನಂಜಯ್​..!

ಮೈಸೂರು: ಇಂದು ಕುಟುಂಬಸ್ಥರು, ಅಭಿಮಾನಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಹಾಗೂ ಧನ್ಯತಾ ಅವರ ವಿವಾಹ ನೆರವೇರಿದೆ. ಬೆಳಿಗ್ಗೆಯಿಂದಲೂ ಮದುವೆ ಶಾಸ್ತ್ರಗಳು ನೆರವೇರುತ್ತಲೇ ಇದ್ದು, ಡಾಲಿ ಹಾಗೂ ಧನ್ಯತಾ ಜೋಡಿ ಎಲ್ಲರ ಗಮನ ಸೆಳೆದಿದೆ.

ಶನಿವಾರ ರಾತ್ರಿ ಈ ಜೋಡಿಯ ಅದ್ಧೂರಿ ಆರತಕ್ಷತೆ ನಡೆದಿದೆ. ಸ್ಯಾಂಡಲ್‌ವುಡ್‌ ನಟ ನಟಿಯರು, ರಾಜಕಾರಣಿ ಹಾಗೂ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದು ಡಾಲಿ ಜೋಡಿಗೆ ಶುಭ ಕೋರಿದರು. ಇದಾದ ಮೇಲೆ ನಟ ಡಾಲಿ ವೇದಿಕೆ ಮೇಲೆ ಎಲ್ಲರ ಕ್ಷಮೆ ಕೋರಿದ್ದಾರೆ.

ಏನಂದ್ರು ಡಾಲಿ?

ನಮ್ಮನ್ನು ಹರಸಲು ಬಂದ ಎಲ್ಲರಿಗೂ ಧನ್ಯವಾದಗಳು. ಬೇರೆ ಬೇರೆ ಕಾರಣಗಳಿಂದ ವೇದಿಕೆ ಮೇಲೆ ತೊಂದರೆ ಆಗಿದೆ. ಎಲ್ಲರನ್ನೂ ಅಟೆಂಡ್‌ ಮಾಡಲು ಆಗಲಿಲ್ಲ. ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಪಟ್ಟಿದ್ದೇವೆ. ಅಭಿಮಾನಿಗಳು ತುಂಬಾ ಜನ ವೇದಿಕೆ ಮೇಲೆ ಬಂದರು. ಇಂತಹ ಈವೆಂಟ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಕಷ್ಟ. ಯಾರ ಮನಸ್ಸಿಗಾದರೂ ನೋವಾಗಿದ್ರೆ ದಯವಿಟ್ಟು ಕ್ಷಮಿಸಿ ಎಂದರು.

ಇನ್ನು, ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ರಿಸೆಪ್ಷನ್​ ನಡೆಯಿತು. ವೇದಿಕೆ ತುಂಬೆಲ್ಲ ಜನ ತುಂಬಿ ತುಳುಕಾಡಿದರು. ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಒಂದೆಡೆ ಸೇರಿದ್ದರು. ಹೀಗಾಗಿ ಎಲ್ಲರನ್ನು ನಿಯಂತ್ರಿಸಲು ಕಷ್ಟ ಆಯಿತು. ಜನರು ಹೆಚ್ಚಾದ ಕಾರಣ ಕೆಲಕಾಲ ವೇದಿಕೆ ಮೇಲೆ ತಳ್ಳಾಟ ನಡೆದಿತ್ತು. ಇದಕ್ಕೆ ಡಾಲಿ ಕ್ಷಮೆ ಕೋರಿದ್ದು, ಎಲ್ಲರಿಗೆ ಅಚ್ಚರಿ ಮೂಡಿಸಿದರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ನನಗೆ ಭಯ ಆಯ್ತು.. ಡಾಲಿ ಧನಂಜಯ್‌ ಯಾಕೆ ಹೀಗೆ ಹೇಳಿದ್ರು? ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment