/newsfirstlive-kannada/media/post_attachments/wp-content/uploads/2025/01/Tahasildar-1.jpg)
ಬೆಂಗಳೂರು: ಉದ್ಯಮಿ ಡಾಬಾ ರಾಜಣ್ಣ ಪುತ್ರ ರವಿಗೌಡ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಆರೋಪ..?
ಕುಡಿದ ಅಮಲಿನಲ್ಲಿ ರವಿಗೌಡ ಕುಣಿಗಲ್ ತಹಶೀಲ್ದಾರ್ ಕಾರಿಗೆ ಅಡ್ಡ ಬಂದು ಕಿರಿಕ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಹಶೀಲ್ದಾರ್ ರಶ್ಮಿ ಕುಣಿಗಲ್‌ನಿಂದ ಬೆಂಗಳೂರಿಗೆ ಬರುತ್ತಿದ್ದರು. ನೆಲಮಂಗಲದ ಲ್ಯಾಂಕೋ ಟೋಲ್ ಬಳಿ ಬರುತ್ತಿದ್ದಂತೆಯೇ ಕಾರಿಗೆ ಅಡ್ಡ ಬಂದು ಕಿರಿಕ್ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಸರ್ಕಾರಿ ಕಾರಿಗೆ ಅಡ್ಡ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಹಶೀಲ್ದಾರ್ ರಶ್ಮಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ರವಿಗೌಡನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಆರೋಪಿಗೆ ಸೇರಿದ ಕಾರನ್ನು ಸೀಜ್ ಮಾಡಿದ್ದಾರೆ. ಮದ್ಯ ಸೇವಿಸಿ ಕಾರು ಚಲಾವಣೆ ಸೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us