/newsfirstlive-kannada/media/post_attachments/wp-content/uploads/2024/07/SNAKE-2.jpg)
ಲಕ್ನೋ: ನದಿಯಲ್ಲಿ ಜೀವಂತ ಹಾವನ್ನು ಹಿಡಿದು ವ್ಯಕ್ತಿಯೊಬ್ಬ ತಿಂದಿರುವ ಘಟನೆ ಉತ್ತರ ಪ್ರದೇಶದ ಫತೇಪುರದ ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕಾ ಕ್ಯಾಂಪ್ ಬಳಿ ನಡೆದಿದೆ.
ಹಾವನ್ನು ತಿಂದ ವ್ಯಕ್ತಿಯನ್ನು ಡಕಾಯಿತ ಗಂಗಾ ಪ್ರಸಾದ್ ಅಲಿಯಾಸ್ ಫೌಜಿ (55) ಎಂದು ಗುರುತಿಸಲಾಗಿದೆ. ಇವನು ಒಂದು ಟೈಮ್​​ನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಶಂಕರ್​ ಗ್ಯಾಂಗ್​ಗೆ ಸೇರಿಕೊಂಡಿದ್ದವನು ಎಂದು ಹೇಳಲಾಗುತ್ತಿದೆ. ಈ ಗ್ಯಾಂಗ್​ ಜನರನ್ನು ಬೆದರಿಕೆ ಹಾಕಿ ಲೂಟಿ ಮಾಡುವ ಕೃತ್ಯಗಳಿಗೆ ಕುಖ್ಯಾತವಾಗಿತ್ತು. ಶಂಕರ್ ಗ್ಯಾಂಗ್ ಎಂದರೆ ಜನರಿಗೆ ಫುಲ್ ಭಯವಿತ್ತು. ಸದ್ಯ ಈ ಗ್ಯಾಂಗ್​ ಅನ್ನು ಬಿಟ್ಟು ಬಂಡಾ ಜಿಲ್ಲೆಯ ಕಮಾಸಿನ್‌ನ ಕಾಗರ್ ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿ ಈತ ವಾಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.
A Guy from Fatehpur Eats Snake Alive (Video of dacoit Ganga Prasad Surfaced)
pic.twitter.com/VFRl2fX3FS— Ghar Ke Kalesh (@gharkekalesh)
A Guy from Fatehpur Eats Snake Alive (Video of dacoit Ganga Prasad Surfaced)
pic.twitter.com/VFRl2fX3FS— Ghar Ke Kalesh (@gharkekalesh) July 8, 2024
">July 8, 2024
ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದು ಏನು ಮಾಡಬೇಕೆಂದು ಗೊತ್ತಾಗದೇ ಹಾವು ತಿನ್ನುವಂಥ ಕೃತ್ಯ ಮಾಡಿದ್ದಾನೆ ಎಂದು ಜನರು ಕಿಡಿ ಕಾರುತ್ತಿದ್ದಾರೆ. ನದಿಯಿಂದ ಹಾವನ್ನು ಹಿಡಿದುಕೊಂಡು ಬರೋ ಕಿರಾತಕ ಅದರ ತಲೆಯನ್ನು ಬಾಯಿಯಿಂದ ಕಚ್ಚಿ ಹಾಗೇ ತಿನ್ನುತ್ತಾನೆ. ಈ ಎಲ್ಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರು ವಿಡಿಯೋದಲ್ಲಿ ಸೆರೆಯಾಗಿವೆ. ಇದಕ್ಕೆ ಸಾಕಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ