/newsfirstlive-kannada/media/post_attachments/wp-content/uploads/2025/04/dad-and-daughter1.jpg)
ಚಿಕ್ಕಬಳ್ಳಾಪುರ: ಮಗಳಿಗೆ ಈಜು ಕಲಿಸಲು ಹೋಗಿ ತಂದೆ ದಾರುಣವಾಗಿ ಬಲಿಯಾಗಿರೋ ಘಟನೆ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆ ನಾಗೇಶ್ (42) ಮಗಳು ಧನುಶ್ರೀ (12) ಮೃತ ದುರ್ದೈವಿಗಳು.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದ ಪುರಸಭೆ ಮುಖ್ಯಾಧಿಕಾರಿ ಸಾವು
ತಂದೆ ನಾಗೇಶ್ ಮಗಳಿಗೆ ಈಜು ಕಲಿಸಲು ಹೋಗಿದ್ದ. ಇದೇ ವೇಳೆ ಕೆರೆಯಲ್ಲಿ ಹೂಳು ತುಂಬಿದ್ರಿಂದ ಹಳಿಯಲ್ಲಿ ಸಿಲುಕಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತ ಧನುಶ್ರೀ ಭರತನಾಟ್ಯದಲ್ಲಿ ಖ್ಯಾತಿ ಪಡೆದಿದ್ದಳು.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ವಿಷಯ ತಿಳಿದ ಕೂಡಲೇ ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗೆ ಬಳಿ ಶಿಡ್ಲಘಟ್ಟ ಶಾಸಕ ಬಿ ಎನ್ ರವಿಕುಮಾರ್ ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ