newsfirstkannada.com

ಅಮ್ಮನಿಗಾಗಿ ಸಾವಿರ ಕೆಲಸ ಬಿಡ್ತೇನೆ ಎಂದ ಕೌರ್​.. ನಾನು ಕೆಲಸ ಕೊಡ್ತೇನೆ ಎಂದ ಬಾಲಿವುಡ್ ಸ್ಟಾರ್ ಸಂಗೀತ ನಿರ್ದೇಶಕ  

Share :

Published June 8, 2024 at 6:31am

    ಕಂಗನಾ ಕಪಾಳಕ್ಕೆ ಹೊಡೆದ ಸಿಬ್ಬಂದಿಗೆ ಭಾರೀ ಬೆಂಬಲ

    ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ವಿರುದ್ಧ ಎಫ್‌ಐಆರ್

    ಬಾಲಿವುಡ್ ನಟಿ ಕಂಗನಾ ರಣಾವತ್​ಗೆ ಹೊಡೆದ CISF ಸಿಬ್ಬಂದಿ

ಮೊನ್ನೆಯಷ್ಟೇ ಬಿಜೆಪಿ ಸಂಸದರಾಗಿ ಬಾಲಿವುಡ್ ನಟಿ ಕಂಗನಾ ರಣಾವತ್​​​​ ಆಯ್ಕೆಯಾಗಿದ್ದರು. ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ಕಂಗನಾ ರಣಾವತ್‌ಗೆ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು. ಈ ಸುದ್ದಿ ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿ ಮಾಡಿದೆ. ಪ್ರಕರಣ ಬೆನ್ನಲ್ಲೇ ಕಪಾಳಮೋಕ್ಷ ಮಾಡಿದ ಅಧಿಕಾರಿ ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಲಾಯಿತು. ಅಧಿಕಾರಿ ಕುಲ್ವಿಂದರ್ ಕೌರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ಇದನ್ನೂ ಓದಿ: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದುರಂತ.. 7 ವರ್ಷದ ಬಾಲಕಿ ದಾರುಣ ಸಾವು; ಆಗಿದ್ದೇನು?

ಇದನ್ನೂ ಓದಿ: ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್‌ಗೆ ಹೊಸ ಟ್ವಿಸ್ಟ್; ಬಿಗ್ ಶಾಕ್ ಕೊಟ್ಟ ಮಾಜಿ ಕಪಲ್ಸ್; ಏನಾಯ್ತು?

ಈ ಘಟನೆ ಬಗ್ಗೆ ನಟಿ ಕಂಗನಾ ಬಾಲಿವುಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಬಳಿಕ ಕೆಲ ಸ್ಟಾರ್​ ನಟ-ನಟಿಯರು ಕಂಗನಾರನ್ನು ಬೆಂಬಲಿಸಿದ್ದರು. ಕುಲ್ವಿಂದರ್ ಕೌರ್ ಕೃತ್ಯವನ್ನು ನಿಂದಿಸಿದ್ದರು. ಬೆನ್ನಲ್ಲೆ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ನಾನು ಏಕೆ ಕಂಗಾನ ಮುಖಕ್ಕೆ ಬಾರಿಸಿದ್ದು ಅಂದ್ರೆ.. ಅಂದು ರೈತರ ಆಂದೋಲನದ ಸಂದರ್ಭದಲ್ಲಿ, ಆ ಆಂದೋಲನದಲ್ಲಿ ಭಾಗವಹಿಸಿದ ರೈತರ ಕುರಿತು ಕಂಗನಾ 100 ರೂಪಾಯಿ ಆಸೆಗಾಗಿ ಬಂದವರು ಎಂದು ಹೇಳಿದ್ರು, ಅಂದು ರೈತರ ಆಂದೋಲನದಲ್ಲಿ ನನ್ನ ತಾಯಿಯೂ ಕೂಡ ಭಾಗವಹಿಸಿದ್ದರು. ಹೀಗಾಗಿ ನನ್ನ ತಾಯಿಯ ಗೌರವಕ್ಕಾಗಿ ನಾನು 1000 ಉದ್ಯೋಗಗಳನ್ನು ಕಳೆದುಕೊಳ್ಳಲು ಸಿದ್ಧವಾಗಿದ್ದೇನೆ ಅಂತ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: OYO ರೂಮ್ ಬುಕ್ ಮಾಡಿದ ಸ್ನೇಹಿತ, ಭೇಟಿಗೆ ಬಂದಳು ಸ್ನೇಹಿತೆ.. ಮುಂದೆ ಆಗಿದ್ದು ನೀವು ಊಹಿಸೋಕೆ ಆಗಲ್ಲ

ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿದ ಬಳಿಕ ಸಾಕಷ್ಟು ಜನರು ಅವರ ಬೆಂಬಲಕ್ಕೆ ನಿಂತುಕೊಂಡಿದ್ದಾರೆ. ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ರೆ, ಅವರಿಗೆ ನಾನು ಕೆಲಸ ನೀಡುತ್ತೇನೆ ಅಂತ ಬಾಲಿವುಡ್ ಗಾಯಕ ವಿಶಾಲ್ ದಾದ್ಲಾನಿ ಹೇಳಿದ್ದಾರೆ.

ಈ ಬಗ್ಗೆ ವಿಶಾಲ್ ದದ್ಲಾನಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಮಹಿಳೆಯ ದುಃಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇನೆ. ಅವರ ವಿರುದ್ಧ ಸಿಐಎಸ್​ಎಫ್‌ ಕ್ರಮ ಕೈಗೊಂಡರೆ ನಾನು ಆಕೆಗೆ ಕೆಲಸ ಕೊಡಿಸುತ್ತೇನೆ. ಜೈ ಹಿಂದ್, ಜೈ ಜವಾನ್ ಜೈ ಕಿಸಾನ್ ಎಂದು ಬರೆದುಕೊಂಡಿದ್ದಾರೆ. ಇದಲ್ಲದೇ ಸಾಕಷ್ಟು ರೈತರು ಕೂಡ ಕೌರ್ ಅವರ ಬೆಂಬಲಕ್ಕೆ ನಿಂತುಕೊಂಡಿದ್ದಾರೆ. ನಾವು ಸೂಕ್ತ ತನಿಖೆಗೆ ಒತ್ತಾಯಿಸುತ್ತೇವೆ. ಮಹಿಳಾ ಕಾನ್‌ಸ್ಟೆಬಲ್‌ಗೆ ಯಾವುದೇ ಅನ್ಯಾಯವಾಗಬಾರದು ಎಂದು ಎಸ್‌ಕೆಎಂ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮ್ಮನಿಗಾಗಿ ಸಾವಿರ ಕೆಲಸ ಬಿಡ್ತೇನೆ ಎಂದ ಕೌರ್​.. ನಾನು ಕೆಲಸ ಕೊಡ್ತೇನೆ ಎಂದ ಬಾಲಿವುಡ್ ಸ್ಟಾರ್ ಸಂಗೀತ ನಿರ್ದೇಶಕ  

https://newsfirstlive.com/wp-content/uploads/2024/06/Kangana_CISF.jpg

Load More